Congress Guarantee ಸದ್ಯದ ಮಟ್ಟಿಗೆ ಕಾಂಗ್ರೆಸ್ ಸರ್ಕಾರ(Congress Government) ರಾಜ್ಯದ ಗದ್ದುಗೆಯನ್ನು ಏರಿದ್ದು ಚುನಾವಣೆಗೂ ಮುನ್ನವೇ ನಾವು ಅಧಿಕಾರಕ್ಕೆ ಬಂದರೆ ಇಂಥಷ್ಟು ಯೋಜನೆಗಳನ್ನು ಜನರಿಗೆ ತಲುಪಿಸುವಂತಹ ಕೆಲಸವನ್ನು ಮಾಡುತ್ತೇವೆ ಎನ್ನುವಂತಹ ಪ್ರಮಾಣವನ್ನು ತಮ್ಮ ಪ್ರಣಾಳಿಕೆಯಲ್ಲಿ ಮಾಡಿದಂತವರು ಕಾಂಗ್ರೆಸ್ಸಿನವರು.
ಆದರೆ ಅಧಿಕಾರಕ್ಕೆ ಬಂದಮೇಲೆ ಈಗ ತಮ್ಮ 5 ಪ್ರಮುಖ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಇನ್ನಿಲ್ಲದಂತೆ ಸಿದ್ದರಾಮಯ್ಯ(Suddharamaiah) ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಹೆಣಗಾಡುತ್ತಿದ್ದರು ಕೂಡ ಅದು ಜಾರಿಗೆ ಆಗುವ ಯಾವ ಲಕ್ಷಣಗಳು ಕೂಡ ಕಾಣುತ್ತಿಲ್ಲ. ಇದನ್ನು ನಂಬಿಕೊಂಡು ವೋಟ್ ಹಾಕಿದವರಿಗೂ ಕೂಡ ಇದು ಅನುಮಾನ ದೃಷ್ಟಿಯಲ್ಲಿ ನೋಡುವಂತಾಗಿದೆ.
ಅದರಲ್ಲೂ ವಿಶೇಷವಾಗಿ ಈ ಐದು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ಹೆಚ್ಚುವರಿ 50,000 ಕೋಟಿ ರೂಪಾಯಿಗಳನ್ನು ತಮ್ಮ ಬಜೆಟ್ ನಲ್ಲಿ ಸೇರಿಸಿಕೊಳ್ಳಬೇಕಾಗುತ್ತದೆ.
ಕೇಂದ್ರ ಆರ್ಥಿಕ ಇಲಾಖೆ(Revenue Department) ಇದಕ್ಕಾಗಿ ಹೆಚ್ಚುವರಿ ಹಣವನ್ನು ನೀಡಲು ಕೂಡ ನಿರಾಕರಿಸಿದ್ದು ಮುಂದಿನ ದಿನಗಳಲ್ಲಿ ಕೂಡ ಕೆಲವೊಂದು ರಾಜಕೀಯ ತಜ್ಞರ ಪ್ರಕಾರ ಕಾಂಗ್ರೆಸ್ ಸರ್ಕಾರ ಈ ಹೆಚ್ಚುವರಿ ಹಣದಲ್ಲಿ ಯೋಜನೆಗಳನ್ನು ಜಾರಿಗೆ ತರೋದು ಕಷ್ಟ ಸಾಧ್ಯವೇ ಎಂದು ಹೇಳಿದ್ದು ಒಂದು ವೇಳೆ ಜಾರಿಗೆ ತಂದರು ಕೂಡ ಸಾಲದ ಪ್ರಮಾಣ ಕೂಡ ರಾಜ್ಯದ ಮೇಲೆ ಹೆಚ್ಚಾಗಲಿದೆ ಎಂಬುದಾಗಿ ಕೂಡ ವಿಶ್ಲೇಷಣೆಯನ್ನು ಮಾಡಿದ್ದಾರೆ.