Congress Guarantee: ಉಚಿತ ಬಸ್ ಪ್ರಯಾಣ ಮಾಡಲು ಮಹಿಳೆಯರಿಗೆ 5 ಕಂಡಿಶನ್ ಗಳು.

Congress Guarantee ಈಗಾಗಲೇ ಸಿದ್ದರಾಮಯ್ಯ(Siddharamaiah) ನೇತೃತ್ವದಲ್ಲಿ ಕರ್ನಾಟಕ ಸರ್ಕಾರವು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಐದು ಪ್ರಮುಖ ಯೋಜನೆಗಳನ್ನು ಜಾರಿಗೆ ತರುವಂತಹ ಸಂಪೂರ್ಣ ಅನುಮತಿಯನ್ನು ನೀಡಿದೆ.

ಅದರಲ್ಲೂ ವಿಶೇಷವಾಗಿ ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆ ಅಡಿಯಲಿ ಉಚಿತ ಬಸ್ ಪ್ರಯಾಣ ನೀಡುವಂತಹ ಮಾತನ್ನು ಕೂಡ ಕಾಂಗ್ರೆಸ್ ಸರ್ಕಾರ(congress government) ನೀಡಿತ್ತು. ಆದರೆ ಈಗ ಅದರಲ್ಲಿ 5 ಕಂಡಿಶನ್ಗಳು ಕೂಡ ಅಳವಡಿಕೆಯಾಗಿದೆ.

ಅವುಗಳೇನೆಂಬುದನ್ನು ತಿಳಿಯುವುದಾದರೆ ಈ ಯೋಜನೆಯನ್ನು ಪಡೆದುಕೊಳ್ಳಲು ಮಹಿಳೆಯರು ಕರ್ನಾಟಕ ರಾಜ್ಯದವರೇ ಆಗಿರಬೇಕು. ಈ ಉಚಿತ ಪಾಸ್ ಅನ್ನು ಪಡೆಯಲು ಬಿಪಿಎಲ್ ಕಾರ್ಡ್(BPL Card) ಅನ್ನು ಹೊಂದಿರಬೇಕು ಎನ್ನುವಂತಹ ಸುದ್ದಿ ಕೂಡ ಕೇಳಿ ಬರುತ್ತಿದೆ. ಕೆಂಪು ಕೆಎಸ್ಆರ್ಟಿಸಿ ಬಸ್ ನಲ್ಲಿ ಮಾತ್ರ ಇದು ಅನ್ವಯವಾಗಲಿದೆ ಎನ್ನುವ ಮಾತಿದೆ.

ತಮ್ಮ ಊರಿನಿಂದ 50 ಕಿಲೋಮೀಟರ್ ಅಳತೆಯಲ್ಲಿ ಮಾತ್ರ ಪ್ರಯಾಣ ಮಾಡಬಹುದು ಎನ್ನುವಂತಹ ಸೂಚನೆ ಕೂಡ ಇದೆ. ಈ ಉಚಿತ ಬಸ್ ಪ್ರಯಾಣ ವ್ಯವಸ್ಥೆಯನ್ನು ಯಾವುದೇ ಲಕ್ಸುರಿ ಬಸ್ ನಲ್ಲಿ ಪಡೆದುಕೊಳ್ಳಲು ಸಾಧ್ಯವೇ ಇಲ್ಲ. ಸರ್ಕಾರದ ಮೂಲಗಳಿಂದ ತಿಳಿದು ಬಂದಿರುವ ಪ್ರಕಾರ ಈ ಐದು ನಿಬಂಧನೆಗಳಿಗೆ ಒಳಪಟ್ಟಿರಬೇಕು ಇಲ್ಲವಾದಲ್ಲಿ ಉಚಿತ ಬಸ್ ಪಾಸ್ ಅನ್ನು ಪಡೆಯಲು ಸಾಧ್ಯವಿಲ್ಲ ಎಂಬುದಾಗಿ ತಿಳಿದುಬಂದಿದೆ.

Leave a Comment