ಪ್ರೀತಿ, ಪ್ರೇಮ, ಪ್ರಣಯ ಎಲ್ಲ ಪುಸ್ತಕದ ಬದನೆಕಾಯಿ ಅಂತ ಉಪ್ಪಿ ದಾದ ಏನೋ ಹೇಳಿಬಿಟ್ರು, ಆದ್ರೆ ಯುವಕರಿಗೆಲ್ಲ ಇದು ಎಲ್ಲಿ ಅನ್ವಯವಾಗುತ್ತೆ? ಅದರಲ್ಲೂ ಪಿಯುಸಿ ಹಂತದಲ್ಲಿ ಪ್ರೀತಿ ಕುರುಡು ಅನ್ಣೋದನ್ನ ಸಾಬೀತು ಮಾಡಿಬಿಡ್ತಾರೆ ಯುವಕ ಯುವತಿಯರು! ಒಮ್ಮೆ ಪ್ರೀತಿಯಲ್ಲಿ ಬಿದ್ದರೆ, ಅಪ್ಪ ಅಮ್ಮ, ತಮ್ಮ ಮುಂದಿನ ಭವಿಷ್ಯ ಇದ್ಯಾವುದರ ಬಗ್ಗೆಯೂ ಅರಿವಿಲ್ಲದೇ ಪ್ರೇಮ ಪರೀಕ್ಷೆ ಬರೆಯೋಕೆ ಸಿದ್ದವಾಗಿಬಿಡ್ತಾರೆ. ಇನ್ನೊಬ್ಬ ಹುಡುಗಿ ಪಿಯುಸಿ ಪರೀಕ್ಷೆ ಬರೆಯೋಕೆ ಬಂದು ಪ್ರಿಯಕರನೊಂದಿಗೆ ಓಡಿ ಪರಾ’ರಿಯಾಗಿದ್ದಾರೆ. ಈ ಘಟನೆಯ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ!
ಇದು ಚಾಮರಾಜ ನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದ ಘಟನೆ. ಇತ್ತೀಚಿಗೆ ಕೊಳ್ಳೇಗಾಲ ಪಟ್ಟಣದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿನಿ ತನ್ನ ತಾಯಿಯ ಜೊತೆ ಬಂದಿದ್ದಳು. ತಾಯಿ ಮಗಳನ್ನು ಪರೀಕ್ಷೆ ಬರೆಯಲು ಪರೀಕ್ಷಾ ಕೊಠಡಿಗೆ ಬಿಟ್ಟು ಮಗಳು ಪರೀಕ್ಷೆ ಬರೆಯುವುದನ್ನೇ ಕಾದು ಹೊರಗಡೆ ಕುಳಿತಿದ್ದಳು. ಪರೀಕ್ಷೆ ಮುಗಿಯುತ್ತಿದ್ದಂತೆ ಇತರ ಮಕ್ಕಳೊಂದಿಗೆ ಈಕೆಯೂ ಹೊರಬಂದಿದ್ದಾಳೆ. ಅಮ್ಮ ಮಗಳು ಇಬ್ಬರೂ ಪರೀಕ್ಷೆ ನಡೆದ ಸ್ಥಳದಿಂದ ಸ್ಥಲ್ವ ದೂರ ನಡೆದು ಬಂದಿದ್ದಾರೆ ಅಷ್ಟರಲ್ಲಿ ತಾಯಿ ಊಹೆಯೂ ಮಾಡಿರದೇ ಇರುವ ಘಟನೆ ನಡೆದು ಹೋಗುತ್ತೆ!
ಪರೀಕ್ಷೆ ಮುಗಿಸಿ ಆಚೆ ಬಂದ ವಿದ್ಯಾರ್ಥಿಸಿ, ಹತ್ತಿರದ ಪೆಟ್ರೋಲ್ ಬಂಕ್ ಕಡೆಗೆ ಓಡಿದ್ದಾಳೆ. ಮಗಳು ಹೀಗ್ಯಾಕೆ ಓಡುತ್ತಿದ್ದಾಳೆ ಎಂದು ತಾಯಿ ಸುಜಾತ ನೋಡುವಷ್ಟರಲ್ಲಿ ಪೆಟ್ರೋಲ್ ಬಂಕ್ ಬಳಿ ನಿಂತಿದ್ದ ಕಾರನ್ನು ಹತ್ತಿ ಮಗಳು ಪರಾ’ರಿಯಾಗಿದ್ದಾಳೆ. ಕಾರಿನ ಹಿಂದೆಯೇ ಮಗಳೇ ನಿಲ್ಲು ಎಂದು ಕೂಗುತ್ತ ತಾಯಿ ಓಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ.
ಕೊಳ್ಳೇಗಾಲ ಪಟ್ಟಣದ ಎಸ್ ವಿ ಕೆ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ಓದುತ್ತಿದ್ದ ಆಕೆ ತಾಯಿಯ ಜೊತೆ ಪರೀಕ್ಷೆ ಬರೆಯಲು ಮುಖ್ಯ ಕೇಂದ್ರಕ್ಕೆ ಬಂದಿದ್ದವಳು. ಆದರೆ ಮಗಳು ಪರೀಕ್ಷೆ ಮುಗಿಸಿ ಮನೆಗೆ ಬಾರದೇ ಹೀಗೆ ಪ್ರಿಯಕರನೊಂದಿಗೆ ಪ’ರಾ’ರಿಯಾಗುತ್ತಾಳೆ ಅಂತ ಆಕೆಯಾದರೂ ಎಲ್ಲಿ ಊಹಿಸಿರಲು ಸಾಧ್ಯ? ಕಳೆದುಹೋದ ಮಗಳನ್ನು ಹುಡುಕಿಕೊಡುವಂತೆ ಸುಜಾತಾ ಕೊಳ್ಳೇಗಾಲ ಪೋಲೀಸ್ ಸ್ಟೇಶನ್ ನಲ್ಲಿ ದೂರು ನೀಡಿದ್ದಾರೆ. ಮುಳ್ಳೂರು ಗ್ರಾಮದ ನಾಗರಾಜು ಎನ್ನುವ ಯುವಕನ ಮೇಲೆ ಗು’ಮಾನಿ ಇರುವುದಾಗಿ ಸುಜಾತ ಪೋಲಿಸರಿಗೆ ತಿಳಿಸಿದ್ದಾರೆ.
ಅಂದಹಾಗೆ ಪ್ರಿಯಕರನೊಂದಿಗೆ ಓಡಿ ಹೋದ ವಿದ್ಯಾರ್ಥಿನಿ ಇನ್ನೂ 18 ವರ್ಷ ತುಂಬಿದವಳಲ್ಲ, ಆಕೆ ಮೆಚ್ಯೂರ್ ಆಗಲು ಇನ್ನೂ ಒಂದು ತಿಂಗಳು ಬಾಕಿಯಿದೆ ಎಂದು ಸುಜಾತಾ ತಿಳಿಸಿದ್ದಾರೆ. ಪೋಲಿಸರು ಈಗಾಗಲೇ ತನಿಖೆ ಶುರು ಮಾಡಿದ್ದು, ಹುಡುಗಿ ಹಾಗೂ ಆಕೆಯ ಪ್ರಿಯಕರನ ಶೋಧ ಕಾರ್ಯ ನಡೆಸಿದ್ದಾರೆ. ತಂದೆ ತಾಯಿಗಳು ಮಕ್ಕಳ ಮೇಲೆ ಎಷ್ಟೊಂದು ಭರವಸೆ ಇಟ್ಟುಕೊಂಡು ಓದಿಸುತ್ತಾರೆ. ತಮ್ಮ ಜೀವನ ಹೇಗೆ ಇರಲಿ ಮಕ್ಕಳು ಉತ್ತಮ ಭವಿಷ್ಯ ಕಟ್ಟಿಕೊಳ್ಳಲಿ ಎಂದು ಶ್ರಮಿಸುತ್ತಾರೆ. ಆದರೆ ಇಂಥ ಕೆಲವು ಮಕ್ಕಳು ತಂದೆ ತಾಯಿಯ ಕನಸಿಗೆ ತಣ್ಣೀರೆರೆಚಿ ಪರಾರಿಯಾಗುತ್ತಾರೆ. ಎಂಥ ವಿಪರ್ಯಾಸ ಅಲ್ವಾ!