ಎಸ್ಐ ಲವ್ ಬಲೆಗೆ ಬಿದ್ದ ಕಾಲೇಜಿನ ವಿದ್ಯಾರ್ಥಿನಿ ಪೊಲೀಸಪ್ಪನ ನಿಜವಾದ ಬಣ್ಣ ಗೊತ್ತಾಗಿದ್ದೇ ಯುವತಿ ಮಾಡಿದ್ದೇನು ಗೊತ್ತಾ

ಈಗಿನ ಕಾಲದಲ್ಲಿ ಕಾಲೇಜ್ ವಿದ್ಯಾರ್ಥಿನಿಯರು ಹಾದಿ ತಪ್ಪುತ್ತಿರುವುದು ಜಾಸ್ತಿ. ಕಾಲೇಜ್ ವಿದ್ಯಾರ್ಥಿನಿಯರು ಅತಿ ಬೇಗನೆ ವಿಚಲಿತರಾಗುತ್ತಾರೆ ಜೀವನದ ಅರಿವೇ ಇಲ್ಲದ ವಯಸ್ಸಿನಲ್ಲಿ ಮಾಡಬಾರದ ತಪ್ಪುಗಳನ್ನು ಮಾಡುತ್ತಾರೆ. ತೆಗೆದುಕೊಳ್ಳಬಾರದಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆತುರದಲ್ಲಿ ಇವರು ತೆಗೆದುಕೊಳ್ಳುವ ತಪ್ಪು ನಿರ್ಧಾರ ಇವರ ಜೀವನವನ್ನೇ ಹಾಳು ಮಾಡುತ್ತೆ. ಸಬ್​ ಇನ್ಸ್​ಪೆಕ್ಟರ್​ ಪ್ರೀತಿಯ ಬಲೆ ಗೆ ಬಿದ್ದ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ತನ್ನ ಜೀವನವನ್ನೇ ಹಾಳು ಮಾಡಿಕೊಂಡ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಸರಸ್ವತಿ ಎಂಬ ಹುಡುಗಿ ತಿರುಪತಿ ಕಾಲೇಜಿನಲ್ಲಿ ಡಿಗ್ರಿ ವಿದ್ಯಾಭ್ಯಾಸ ಮಾಡುತ್ತಿದ್ದಳು.ಹಾಗೆ ಎಸ್ ಐ ವಿಜಯ್ ಕುಮಾರ್ ನಾಯಕ್ ಎಂಬ ಸಬ್ ಇನ್ಸ್ ಪೆಕ್ಟರ್ ಆಫ್ ಪೊಲೀಸ್ ಅದೇ ಊರಿನಲ್ಲಿ ತನ್ನ ವೃತ್ತಿ ಮಾಡುತ್ತಿದ್ದ. ಸರಸ್ವತಿ ಮತ್ತು ಎಸ್ ಐ ವಿಜಯ್ ಕುಮಾರ್ ನಾಯಕ್ ​ ಇಬ್ಬರು ಅನಂತಪುರ ಜಿಲ್ಲೆಯ ಪಮಿದಿ ಗ್ರಾಮದ ನಿವಾಸಿಗಳು. ಸರಸ್ವತಿಯನ್ನು ಪರಿಚಯ ಮಾಡಿಕೊಂಡಿದ್ದ. ಎಸ್ಐ ನಾಯಕ್ ಸರಸ್ವತಿಯ ಪರಿಚಯ ಮಾಡಿಕೊಂಡಿದ್ದ. ಪರಿಚಯ ಸ್ನೇಹವಾಗಿ ಪ್ರೀತಿಯಾಗಿ ಬದಲಾಗಿತ್ತು.

ಹೇಗಿದ್ದರೂ ಆತ ಪೊಲೀಸ್ ಎಂದು ಸರಸ್ವತಿ ಕಣ್ಣುಮುಚ್ಚಿಕೊಂಡು ಅವನನ್ನು ಒಳ್ಳೆಯ ಮನುಷ್ಯ ಎಂದು ನಂಬಿದ್ದಳು. ಆತ ಕರೆದಲ್ಲೆಲ್ಲಾ ಹೋಗುತ್ತಿದ್ದಳು ಆತ ಹೇಳಿದ ಮಾತುಗಳನ್ನೆಲ್ಲ ನಂಬುತ್ತಿದ್ದಳು. ಒಂದು ದಿನ ಎಸ್ಐ ನಾಯಕ್ ತನ್ನ ಪ್ರೀತಿಯ ವಿಷಯವನ್ನು ಸರಸ್ವತಿಗೆ ನೆಲೆ ಮದುವೆಯಾಗುವಂತೆ ಒತ್ತಾಯಿಸುತ್ತಾನೆ. ಒಂದು ಕ್ಷಣ ಕೂಡ ಯೋಚನೆ ಮಾಡದೆ ಸರಸ್ವತಿ ಆತನನ್ನು ಒಪ್ಪಿಕೊಂಡು ಮನೆಯವರ ಬಳಿ ತನ್ನ ಪ್ರೀತಿಯ ವಿಷಯವನ್ನು ಹೇಳಿದಳು. ತದ ನಂತರ ಮನೆಯವರ ಒಪ್ಪಿಗೆ ಮೇರೆಗೆ ಮದುವೆಗೆ ಕೂಡ ಸಿದ್ಧತೆ ನಡೆಯಿತು..

ಇನ್ನೇನು ಹದಿನೈದು ದಿನಗಳಲ್ಲಿ ಮದುವೆ ನಡೆಯಬೇಕು ಎಂಬ ಸಂದರ್ಭದಲ್ಲಿ ಸರಸ್ವತಿ ಗೆ ಶಾಕಿಂಗ್ ವಿಷಯವನ್ನು ಗೊತ್ತಾಗುತ್ತೆ ತಾನು ಮದುವೆಯಾಗಲಿರುವ ನಾಯಕ್ ಗೆ ಆಗಲೇ ಒಂದು ಮದುವೆಯಾಗಿತ್ತು ಎಂಬ ವಿಚಾರ ತಿಳಿಯುತ್ತದೆ. ಅಲ್ಲದೆ ಕಳೆದ ವರ್ಷ ಎಸ್ ಐ ವಿಜಯ್ ಕುಮಾರ್ ನಾಯಕ್ ಅನಂತಪುರದ ಭಾರತಿ ಎಂಬ ಯುವತಿಯನ್ನು ವಿವಾಹವಾಗಿದ್ದರು. ಅದೊಂದು ಪ್ರೇಮ ವಿವಾಹವಾಗಿತ್ತು.ಮದುವೆಯಾದ ಕೆಲವು ತಿಂಗಳ ನಂತರ ಭಾರತಿ ಎಸ್ ಐ ವಿಜಯ್ ಕುಮಾರ್ ನಾಯಕ್ ನನಗೆ ಮೋಸ ಮತ್ತು ವಂ’ಚ’ನೆ ಮಾಡಿದ್ದಾನೆ ಎಂದು ಕೇಸ್ ದಾಖಲು ಮಾಡಿದ್ದಳು.

ಅಷ್ಟೇ ಅಲ್ಲ ಈ ಮಹಾನ್ ಪುರುಷ ಎಸ್ ಐ ವಿಜಯ್ ಕುಮಾರ್ ನಾಯಕ್ ಪೊಲೀಸ್ ಹುದ್ದೆಗೆ ಸೇರಿಕೊಳ್ಳುವುದಕ್ಕಿಂತ ಮುಂಚೆಯೇ ಗುಂತಕಲ್ಲು ಪುರಸಭೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಪೇದೆಯೊಬ್ಬರಿಗೆ ಪ್ರೀತಿಯ ಹೆಸರಲ್ಲಿ ವಂ’ಚ’ನೆ ಮಾಡಿರುವುದಾಗಿಯೂ ತಿಳಿದು ಬಂದಿದೆ. ಎಸ್ ಐ ವಿಜಯ್ ಕುಮಾರ್ ನಾಯಕ್ ನ ಈ ಎಲ್ಲಾ ಪುರಾಣಗಳ ವಿಷಯ ಸರಸ್ವತಿಗೆ ತಿಳಿದ ನಂತರ ಆಕೆ ತಬ್ಬಿಬ್ಬಾದಳು. ಸರಸ್ವತಿ ಅವನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದಳು. ವಿಜಯ್ ಕುಮಾರ್ಅ ಮಾಡಿದ ಮೋಸದ ಕೆಲಸಗಳನ್ನು ಸರಸ್ವತಿ ಗೆ ಅರಗಿಸಿಕೊಳ್ಳಲಾಗಲಿಲ್ಲ. ತಕ್ಷಣವೆ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ವಿ’ಷ’ವನ್ನು ಸೇವಿಸಿದ್ದಾಳೆ. ಅಸ್ವಸ್ಥಳಾಗಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ 6 ಮೇ ರಂದು ರಾತ್ರಿ ಸರಸ್ವತಿ ಕೊ’ನೆ’ಯುಸಿರೆಳೆದಿದ್ದಾಳೆ.

Leave a Comment