3 ಮದುವೆಯಾದರೂ, ಬೇರೆ ಯುವಕರ ಜೊತೆ ಲವ್ವಿ-ಡವ್ವಿ ಈಕೆಯ ಆಟಕ್ಕೆ ಬೇಸತ್ತ ಗಂಡ ಮಾಡಿದ್ದೇನು?

ಹೆಣ್ಣನ್ನು ದೇವತೆ ಎಂದು ಹೇಳುತ್ತಾರೆ, ಅವಳಿಗೆ ಉನ್ನತ ಸ್ಥಾನವಿದೆ. ಮಹಿಳೆಯರು ಸಹ ಗೌರವಯುತವಾಗಿ ನಡೆದುಕೊಳ್ಳಬೇಕು. ಹೆಣ್ಣಿಗೆ ಒಂದು ಮನೆಯನ್ನು ಬೆಳಗುವ ಸಾಮರ್ಥ್ಯವಿದೆ ಅದನ್ನು ಹೆಣ್ಣು ಕೆಟ್ಟ ಕೆಲಸಕ್ಕೆ ಬಳಸಬಾರದು. ಈ ಲೇಖನದಲ್ಲಿ ಸುಂದರಿಯೊಬ್ಬಳ ಚೀಟಿಂಗ್ ಸ್ಟೋರಿಯನ್ನು ನೋಡೋಣ.

ತನ್ನ ಸೌಂದರ್ಯವನ್ನೆ ಬಂಡವಾಳ ಮಾಡಿಕೊಂಡು ಒಂದಲ್ಲ, ಎರಡಲ್ಲ, ಒಟ್ಟು ಮೂರು ಮದುವೆಯಾಗಿದ್ದಾಳೆ, ಅವಳ ಹೆಸರು ನಿಫಾ ಖಾನ್. ಅಷ್ಟೆ ಮಾತ್ರವಲ್ಲದೆ ನಾಲ್ಕನೆ ಮದುವೆಗೂ ಟ್ರೈ ಮಾಡಿ ಸಿಕ್ಕಿ ಬಿದ್ದಿದ್ದಾಳೆ. 2019 ರಲ್ಲಿ ಮೈಸೂರಿನ ರಾಜೀವ್ ನಗರದ ಆಜಾಮ್ ಖಾನ್ ಜೊತೆ ನಿಫಾ ಖಾನ್ ಮದುವೆಯಾಗಿದ್ದಾಳೆ. ಆದರೆ ಈಗಾಗಲೆ ಎರಡು ಮದುವೆಯಾಗಿರುವ ಸಿಕ್ರೇಟ್ ಕಾಪಾಡಿದ್ದಾಳೆ. ಟ್ರಿಂಡರ್ ಆ್ಯಪ್ ನಲ್ಲಿ ಯುವಕರನ್ನು ಪರಿಚಯ ಮಾಡಿಕೊಳ್ಳುವುದು ಪ್ರೇಮದ ಬಲೆಗೆ ಬೀಳಿಸಿಕೊಂಡು ಅವರಿಗೆ ಮೋಸ ಮಾಡುವುದು ಇವಳ ಚಾಳಿ ಅನ್ನುವ ಗಂಭೀರ ಆರೋಪ ಈಕೆ ಮೇಲಿದೆ.

ಒಂದಲ್ಲ ಎರಡಲ್ಲ, ಮೂರು ಮದುವೆಯಾದ ಈ ಲೇಡಿ 3ನೆ ಮದುವೆಯಾದರೂ ಬೇರೆ ಯುವಕರ ಜೊತೆ ಲವ್ವಿ-ಡವ್ವಿ ಮುಂದುವರೆಸುತ್ತಾಳೆ. ಮೈಸೂರಿನ ಉದಯಗಿರಿ ನಿವಾಸಿ ನಿಫಾ ಖಾನ್​​ಗೆ ಈಗಾಗಲೆ ಎರಡು ಮದುವೆಯಾಗಿದೆ ಅದನ್ನ ಮುಚ್ಚಿಟ್ಟು ಬೆಂಗಳೂರಿನಲ್ಲಿ ಹೆಚ್​​ಆರ್ ಆಗಿರುವ ರಾಜೀವ್ ನಗರದ ಆಜಾಮ್ ಖಾನ್ ನನ್ನು 2019ರಲ್ಲಿ 3ನೆ ಮದುವೆಯಾದ ಆರೋಪ ಎದುರಿಸುತ್ತಿದ್ದಾಳೆ. ಮದುವೆಯಾದ ನಂತರ ನಿಫಾ ಖಾನ್ ಅಸಲಿ ಆಟ ಆಜಾಮ್ ಖಾನ್​​ಗೆ ಒಂದೊಂದಾಗಿ ಪ್ರದರ್ಶನವಾಗುತ್ತಾ ಬಂತು. ಬೇರೆ ಪುರುಷರ ಜೊತೆ ಚಾಟಿಂಗ್ ಹಾಗೂ ಮೀಟಿಂಗ್ ಮಾಡುವುದನ್ನು ಕಣ್ಣಾರೆ ಕಂಡಿದ್ದೆ ಅನ್ನುವುದು ಪತಿ ಆಜಾಮ್ ಖಾನ್ ನ ನೋವಿನ ವಾದ.

ಕಡೆಗೆ ಒಂದುದಿನ ನಿಫಾ ಖಾನ್ ಬೇರೊಬ್ಬನ ಜೊತೆ ಇರುವಾಗಲೆ ಪತಿ ಕೈಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾಳೆ. ನಿನ್ನನ್ನ ನೋಡಬೇಕು, ಪೋಟೋಸ್ ಕಳಿಸು, ವ್ಯಾಲೆಂಟೇನ್ಸ್ ಡೆ ಹತ್ತಿರ ಬರುತ್ತಿದೆ ಅನ್ನುವ ಲವ್ವಿ-ಡವ್ವಿ ಮೆಸೇಜ್​ಗಳು ಅದಲ್ಲದೆ, ಅವನ ನಂಬರ್ ಮತ್ತು ಪೋಟೊ ಕಳಿಸು, ನಾನು ನಿನ್ನ ರಿವೇಂಜ್ ತೀರಿಸಿಕೊಳ್ಳುತ್ತೇನೆ ಅಂತ ಇನ್​​ಸ್ಟಾಗ್ರಾಮ್​​ನಲ್ಲಿ ಫ್ರೆಂಡ್ ಆಗಿದ್ದ ಯುವಕನೊಬ್ಬ ನಿಫಾ ಖಾನ್​​ಗೆ ಮೆಸೇಜ್ ಮಾಡಿದ್ದನು. ಹೀಗಾಗಿ ಈಕೆಯ ಸಹವಾಸವೆ ಬೇಡ. ನನಗೆ ಜೀವ ಬೆದರಿಕೆ ಇದೆ. ಡೈವೊರ್ಸ್​ ಕೊಡಿಸಿ ಅಂತ 3ನೆ ಪತಿ ಆಜಾಮ್ ಖಾನ್ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಸದ್ಯ ಆಕೆಯ ಪತಿಯೆ ಹೇಳುವ ಪ್ರಕಾರ ನಿಫಾ ಖಾನ್​ಗೆ ಮೂರು ಮದುವೆಯಾಗಿದೆ. ಆದರೆ ಇದೆ ರೀತಿ ಮತ್ತೆಷ್ಟು ಮಂದಿಗೆ ವಂಚಿಸಿದ್ದಾಳೆ ಅನ್ನುವುದು ಪೊಲೀಸರ ತನಿಖೆಯಿಂದಷ್ಟೆ ಬೆಳಕಿಗೆ ಬರಬೇಕಿದೆ. ಆದರೆ, ಅಜಾಮ್​ಖಾನ್​ಗಂತೂ ಡಿವೋರ್ಸ್​ ಸಿಕ್ಕಿದ್ರೆ ಸಾಕಾಗಿದೆ. ಇಂತಹ ಹೆಂಗಸರ ಬಗ್ಗೆ ಎಚ್ಚರವಿರಲಿ.

Leave a Comment