Chandrayana 3: ಚಂದ್ರಯಾನ 3 ನಡೆದ ಬೆನ್ನಲ್ಲೇ ಪ್ರಭಾಸ್ ರವರ ಆದಿಪುರುಷ್ ಸಿನಿಮಾವನ್ನು ಟೀಕಿಸಿದ ನೆಟ್ಟಿಗರು. ಏನಿದು ಕನೆಕ್ಷನ್?

Chandrayana 3 ಪ್ರತಿಯೊಬ್ಬರೂ ಕೂಡ ಕಾಯುತ್ತಿದ್ದ ಆ ಗಳಿಗೆ ಬಂದೆ ಬಿಟ್ಟಿದ್ದು ಈಗಾಗಲೇ ಶ್ರೀಹರಿಕೋಟದಲ್ಲಿ(Sriharikota) ನಡೆದಿರುವಂತಹ ಚಂದ್ರಯಾನ 3 ಯಶಸ್ವಿಯಾಗಿ ಲಾಂಚ್ ಆಗಿದ್ದು ಆಗಸ್ಟ್ 23 ರಂದು ಚಂದ್ರನ ಮೇಲೆ ನಮ್ಮ ಆಕಾಶ ನೌಕೆ ಯಾವಾಗ ಲ್ಯಾಂಡ್ ಆಗುತ್ತದೆ ಎಂಬುದಾಗಿ ಪ್ರತಿಯೊಬ್ಬರು ಕೂಡ ಕಾಯುವಂತೆ ಮಾಡಿದೆ. ಇದು ಭಾರತ ದೇಶದ ಮೂರನೇ ಚಂದ್ರಯಾನವಾಗಿದ್ದು ಈ ಹಿಂದೆ ನಡೆದಂತಹ ಎರಡನೇ ಚಂದ್ರಯಾನ ಹಿನ್ನಡೆಯನ್ನು ಕಂಡಿದ್ದು ಭಾರತದ ವಿಜ್ಞಾನಿಗಳು ಸೇರಿದಂತೆ ಪ್ರತಿಯೊಬ್ಬರೂ ಕೂಡ ಬೇಸರವನ್ನು ವ್ಯಕ್ತಪಡಿಸಿದ್ದರು.

ಎಲ್ಲಕ್ಕಿಂತ ಪ್ರಮುಖವಾಗಿ ಇದರ ಬಜೆಟ್ ನಿಜಕ್ಕೂ ಕೂಡ ಬಾಲಿವುಡ್ ಸಿನಿಮಾಗಳ ಬಜೆಟ್ ಗಳಿಗಿಂತ ಕಡಿಮೆ ಎಂದು ಹೇಳಬಹುದಾಗಿದೆ. ಯಾಕೆಂದರೆ ಇದು ನಾವು ಹೇಳ್ತಿರೋದಲ್ಲ ಸಿನಿಮಾ ಪಂಡಿತರು ಹಾಗೂ ನೆಟ್ಟಿಗರು ಹೇಳ್ತಿರೋ ಮಾತು. ಇತ್ತೀಚಿಗಷ್ಟೇ ಬಿಡುಗಡೆ ಆಗಿರುವಂತಹ ಪ್ರಭಾಸ್(Prabhas) ನಾಯಕ ನಟನಾಗಿ ನಟಿಸಿರುವ ಆದಿಪುರುಷ್(Adipurush) ಸಿನಿಮಾದ ಬಜೆಟ್ ಕೂಡ ಚಂದ್ರಯಾನದ ಬಜೆಟ್ಗಿಂತ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಹಾಗಿದ್ರೆ ಬನ್ನಿ ಇವೆರಡರ ನಡುವಿನ ಅಂತರವನ್ನು ತಿಳಿದುಕೊಳ್ಳೋಣ.

ಆದಿಪುರುಷ್ ಸಿನಿಮಾ ಭರ್ಜರಿ 650 ಕೋಟಿಗೂ ಅಧಿಕ ಬಜೆಟ್ ನಲ್ಲಿ ನಿರ್ಮಾಣವಾಗಿದೆ ಎಂದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಆದರೆ ಚಂದ್ರಯಾನ 3(Chandrayana 3) ದೇಶದ ಅತ್ಯಂತ ಪ್ರಮುಖ ಬಾಹ್ಯಾಕಾಶ ಹಾಗೂ ಉಪಗ್ರಹಗಳ ಪ್ರಾಜೆಕ್ಟ್ ಅದಕ್ಕಿಂತಲೂ ಕಡಿಮೆ ಬಜೆಟ್ ನಲ್ಲಿ ಮೂಡಿ ಬಂದಿದೆ ಎಂದರೆ ನಿಜಕ್ಕೂ ಕೂಡ ನೀವು ನಂಬಲೇಬೇಕು. ವಿದೇಶಿ ಬಾಹ್ಯಾಕಾಶ ಸಂಸ್ಥೆಗಳಾಗಿರುವ NASA ಕೂಡ ಆಧುನಿಕ ತಂತ್ರಜ್ಞಾನವನ್ನು ಹೊಂದಿದ್ದರು, ಇಷ್ಟೊಂದು ಕಡಿಮೆ ಬಜೆಟ್ ನಲ್ಲಿ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಾಧ್ಯವಾಗುವುದಿಲ್ಲ.

ಭಾರತ ಕೇವಲ ಈ ಪ್ರಾಜೆಕ್ಟ್ ಅನ್ನು 615 ಕೋಟಿ ರೂಪಾಯಿಗಿಂತಲೂ ಕಡಿಮೆ ಬಜೆಟ್ ನಲ್ಲಿ ನಿರ್ಮಾಣ ಮಾಡಿದೆ ಎಂಬುದಾಗಿ ತಿಳಿದು ಬಂದಿದ್ದು ಇದು ನಮ್ಮ ISRO ಯಾವ ರೀತಿಯಲ್ಲಿ ಮುಂದುವರೆದಿದೆ ಎನ್ನುವುದಕ್ಕೆ ಒಂದು ಒಳ್ಳೆಯ ಉದಾಹರಣೆಯಾಗಿದೆ ಎಂದು ಹೇಳಬಹುದಾಗಿದೆ. ನಮ್ಮ ಬಾಹ್ಯಾಕಾಶ ಸಂಸ್ಥೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಸಾಧಿಸಿರುವ ಸಾಧನೆಯನ್ನು ನಾಸಾ ಕೂಡ ಮಾಡಿಲ್ಲ ಎನ್ನುವುದನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳಬೇಕಾಗುತ್ತದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment