ಮತ್ತೋರ್ವ ಕಿರುತೆರೆ ನಟಿಯ ನಿಗೂಢ ಸಾ’ವು’ ಕೆಲವೇ ಸೆಕೆಂಡುಗಳ ಹಿಂದೆ ಇನ್ಸ್ಟಾಗ್ರಾoನಲ್ಲಿ ಫೋಟೋ ಹಂಚಿಕೊಂಡಿದ್ದ ನಟಿ. ಬಾಯ್ ಫ್ರೆಂಡ್ ಜೊತೆ ನಿಜಕ್ಕೂ ಆಗಿದ್ದೇನು

ಸಿನಿಮಾ ರಂಗಕ್ಕೆ ಅದ್ಯಾರ ದೃಷ್ಟಿ ತಾಗಿದ್ಯೋ ಏನೋ, ಒಂದಾದ ಮೆಲೆ ಒಂದರಂತೆ ಕೆಟ್ಟ ಸುದ್ದಿಯನ್ನೇ ಕೇಳುತ್ತಿದ್ದೇವೆ. ಈಗಾಗಲೇ ಕೆಲ ಯುವ ನಟ ನಟಿಯರೂ ಕೂಡ ಆ’ತ್ಮಹ’ತ್ಯೆ’ಗೆ ಶರಣಾಗಿದ್ದಾರೆ. ಇದಕ್ಕೆ ಕಾರಣವನ್ನ ಹುಡುಕಲು ಹೊರಟರೆ ಅತ್ಯಂತ ಸಣ್ಣ ಕಾರಣಗಳೇ ಆಗಿರುತ್ತವೆ. ಇದಕ್ಕೇಲ್ಲಾ ಪ್ರಾಣವನ್ನೇ ಬಲಿಕೊಡಬೇಕಿತ್ತಾ ಅಂತ ಅನ್ನಿಸುತ್ತದೆ. ಆದರೂ ಸಾ’ಯುವಂಥ ನಿರ್ಧಾರವನ್ನ ಏಕೆ ಮಾಡುತ್ತಾರೋ ಗೊತ್ತಿಲ್ಲ.

ಈಗಾಗಲೇ ಬಾಲಿವುಡ್ ನಲ್ಲಿ ಸುಶಾಂತ್ ರಜಪೂತ್, ಶ್ರೀದೇವಿ, ಕನ್ನಡದಲ್ಲಿ ಬಿಗ್ ಬಾಸ್ ನಟಿ ಮೊದಲಾದವರನ್ನ ನಾವು ಕಳೆದುಕೊಂಡಿದ್ದೇವೆ ಇದಕ್ಕೇಲ್ಲಾ ಕಾರಣ ನೋಡಿದರೆ ಖಿನ್ನತೆ ಎಂದು ಹೇಳಲಾಗುತ್ತದೆ. ಆದರೆ ಒಂದು ಮಟ್ಟಕ್ಕೆ ಸಾಧನೆಯನ್ನೂ ಮಾಡಿ, ಇನ್ನೂ ಸಾಧನೆಯನ್ನು ಮಾಡುವ ಹಂತದಲ್ಲಿದ್ದ ನಟ ನಟಿಯರೂ ಹೀಗೆ ಪ್ರಾಣ ತ್ಯಾಗ ಮಾಡುವುದು ಎಷ್ಟು ಸಮಂಜಸವೋ ಗೊತ್ತಿಲ್ಲ. ಇದು ಇತರರ ಮೇಲೆ ಎಷ್ಟು ಕೆಟ್ಟ ಪರಿಣಾಮ ಬೀರಬಹುದು, ಅಥವಾ ಅವರ ಕುಟುಂಬಕ್ಕೆ ಈ ನೋವನ್ನೆಲ್ಲಾ ಸಹಿಸುವ ಶಕ್ತಿ ಇರುತ್ತದೆಯೋ ಗೊತ್ತಿಲ್ಲ. ಈ ಪ್ರಶ್ನೆಗಳಿಗೆಲ್ಲ ಉತ್ತರ ಸಿಗುವುದಕ್ಕೂ ಮೊದಲು ಇನ್ನೊಬ್ಬ ನಟಿಯ ಸಾ’ವಿ ಸುದ್ಧಿ ಬಂಗಾಳಿ ಚಿತ್ರರಂಗವನ್ನ ಆವರಿಸಿದೆ.

ಹೌದು ಬಂಗಾಳಿ ಭಾಷೆಯ ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಸಾಕಷ್ಟು ಪ್ರಾಜೆಕ್ಟ್ ಗಳನ್ನು ಮಾಡಿದ್ದ ನಟಿ ಪಲ್ಲವಿ ಡೇ ಇದೀಗ ನಿಗೂಢವಾಗಿ ಸಾ’ವನ್ನಪ್ಪಿದ್ದಾರೆ. ಉತ್ತರ ಸಿಗದ ಕಲಾವಿದರ ಸಾ’ವಿನ ಸಾಲಿಗೆ ಪಲ್ಲವಿ ಡೇ ಕೂಡ ಸೇರಿದ್ದಾರೆ. ಮೇ 15ನೇ ತಾರೀಕಿನಂದು ದಕ್ಷಿಣ ಕೋಲ್ಕತ್ತಾದ ಅಪಾರ್ಟ್ಮೆಂಟ್ ಒಂದರಲ್ಲಿ ನಟಿ ಪಲ್ಲವಿ ಡೇ ನೇ’ಣು ಬಿ’ಗಿದು’ಕೊಂಡು ಆ’ತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ನೇ’ಣು ಬಿಗಿದುಕೊಂಡ ಸ್ಥಿತಿಯನ್ನು ನೋಡಿದರೆ ಆ’ತ್ಮ’ಹ’ತ್ಯೆ ಎಂದೇ ಗೋಚರವಾಗುತ್ತದೆ. ಆದು ಇದು ಮೇಲ್ನೋಟಕ್ಕೆ ಮಾತ್ರ. ಇದು ನಿಜವಾಗಿಯೂ ಆಕೆಯೇ ಪ್ರಾಣ ತೆಕ್ಕೊಂಡಿದ್ದೋ ಅಥವಾ ಬೇರೆ ಯಾರಾದರೂ ಕೊ’ಲೆ ಮಾಡಿದ್ದೋ ಎನ್ನುವುದು ತನಿಖೆಯ ನಂತರವಷ್ಟೇ ತಿಳಿದು ಬರಬೇಕು.

ಹೀಗೆ ಇವರ ಸಾ’ವನ್ನು ಅನುಮಾನಿಸಲು ಕಾರಣವೂ ಇದೆ. ನಟಿ ಪಲ್ಲವಿ ಡೇ ಸಾ’ಯುವುದಕ್ಕೂ ಸ್ಪಲ್ಪ ಹೊತ್ತಿನ ಮೊದಲು ತನ್ನ ಬಾಯ್ ಫ್ರೆಂಡ್ ಜೊತೆಗೆ ಇದ್ದಿದ್ದು ತಿಳಿದುಬಂದಿದೆ. ಹಾಗಾಗಿ ಇವರ ಮೇಲೆ ಅನುಮಾನ ಬಂದಿದೆ. ಸಗ್ನಿಕ್ ಚಕ್ರವರ್ತಿ ಎನ್ನುವ ವ್ಯಕ್ತಿಯ ಜೊತೆ ಕಳೆದ ಒಂದುವರೆ ವರ್ಷದಿಂದ ದಕ್ಷಿಣ ಕೋಲ್ಕತ್ತಾದ ಗಾರ್ಫಾ ಎಂಬಲ್ಲಿ ಬಾಡಿಗೆ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು ನಟಿ ಪಲ್ಲವಿ ಡೇ. ಕಳೆದ ಫೆಬ್ರವರಿಯಿಂದ ಈ ಅಪಾರ್ಟ್ ಮೆಂಟ್ ನಲ್ಲಿ ವಾಸಿಸಲು ಆರಂಭಿಸಿದ್ದರು. ಇನ್ನು ಪಲ್ಲವಿ ಡೇ ಆ’ತ್ಮಹ’ತ್ಯೆ ಮಾಡಿಕೊಳ್ಳುವುದಕ್ಕೂ ಹಿಂದಿನ ರಾತ್ರಿ ಪಲ್ಲವಿ ಹಾಗೂ ಸಗ್ನಿಕ್ ಚಕ್ರವರ್ತಿ ಜೋರಾಗಿ ಜಗಳವಾಡಿದ್ದರು. ಮಾತಿನ ನಡುವೆ ಸಗ್ನಿಕ್ ಮನೆಯಿಂದ ಹೊರಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಹೊರ ಹೋಗುತ್ತಿದ್ದಂತೆ ಇಲ್ಲ ಪಲ್ಲವಿ ಡೇ ನೇ’ಣು ಬಿ’ಗಿದುಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ತಾನು ಹೊರಗಡೆ ಹೋಗಿ ಬರುವಷ್ತರಲ್ಲಿ ಪಲ್ಲವಿ ಡೇ ಆ’ತ್ಮಹ’ತ್ಯೆ ಮಾಡಿಕೊಂಡಿದ್ದಾಳೆ ಎನ್ನುವ ಆತನ ಹೇಳಿಕೆಯೇ ಪೋಲಿಸರಿಗೆ ಇನ್ನಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.

ಆದರೆ ಪಲ್ಲವಿ ಡೇ ಆ’ತ್ಮ’ಹ’ತ್ಯೆ ಮಾಡಿಕೊಳ್ಳಲೂ ಮೇಲ್ನೋಟಕ್ಕೆ ಯಾವುದೇ ಬಲವಾದ ಕಾರಣಗಳೂ ಕಾಣಿಸುತ್ತಿಲ್ಲ. ಯಾಕೆಂದರೆ ಸಾಯುವುದಕ್ಕೂ ಸ್ವಲ್ಪ ಸ್ಮಯದ ಮೊದಲು ಮೋಮೋಸ್ ತಿಂದಿರುವ ಪೊಟೋವನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ಪಲ್ಲವಿ ತಾನು ಎಂಜಾಯ್ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಹಾಗಾಗಿ ಈ ನಿಗೂಡ ಸಾ’ವಿನ ಹಿಂದಿರುವ ಕರಾಳ ಸತ್ಯವನ್ನು ಹುಡುಕುವತ್ತ ಕೋಲ್ಕತ್ತಾ ಪೋಲಿಸರು ನಿರತವಾಗಿದ್ದಾರೆ.

Leave a Comment