ಅಹಂಕಾರದಿಂದ ಮೆರೆದಾಡುತ್ತಿದ್ದ ವಿಜ್ಞಾನಿಗೆ ಓರ್ವ ಭಿಕ್ಷುಕ ಕಲಿಸಿದ ಪಾಠ ಹೇಗಿತ್ತು ನೋಡಿ

ನಾವು ಎಷ್ಟೇ ಓದಿರಬಹುದು ಎಷ್ಟೇ ತಿಳಿದುಕೊಳ್ಳಬಹುದು, ನಾವು ಎಷ್ಟೇ ಜ್ಞಾನವನ್ನು ಸಂಪಾದನೆ ಮಾಡಬಹುದು, ಆದರೆ ನಾನು ಎನ್ನುವ ಅಹಂಕಾರ ವಿದ್ದರೆ ಮಾತ್ರ ಎಲ್ಲವೂ ಶೂನ್ಯ ಎನಿಸಿಬಿಡುತ್ತದೆ. ಅಹಂಕಾರ ವಿದ್ದ ಎಷ್ಟೇ ದೊಡ್ಡ ಮನುಷ್ಯನ ಅವರು ಮನುಷ್ಯರಿಗಿಂತ ಮಾಡುತ್ತಾನೆ. ಅಂತಹ ಒಂದು ಘಟನೆಯನ್ನು ಹೇಳ್ತೀವಿ ಕೇಳಿ.

ಆತ ಒಬ್ಬ ಮಹಾನ್ ವಿಜ್ಞಾನಿ. ಜೀವನದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದವ. ಆದರೆ ಆತನ ಅಹಂಕಾರವೇ ಆತನ ಜ್ಞಾನದ ಮಟ್ಟವನ್ನು ತೋರಿಸಿದ ಘಟನೆಯಿದು. ವಿಜ್ಞಾನಿ ಒಮ್ಮೆ ತನ್ನ ಕಾರಿನಲ್ಲಿ ರಸ್ತೆಯಲ್ಲಿ ಹೋಗುತ್ತಿರುತ್ತಾನೆ. ರಸ್ತೆ ಖಾಲಿ ಇದ್ದ ಕಾರಣ ಆಚೀಚೆ ಯಾರು ಓಡಾಡುತ್ತಿದ್ದಾರೆ ಎಂದು ನೋಡುತ್ತಾ ಕಾರು ಓಡಿಸುತ್ತಿರುತ್ತಾನೆ. ಆತನಿಗೆ ರಸ್ತೆಯ ಬಗ್ಗೆ ಅಷ್ಟು ಗಮನವಿರುವುದಿಲ್ಲ. ಹೀಗಿರುವಾಗ ರಸ್ತೆಯಲ್ಲಿ ಇರುವ ಒಂದು ಮುಳ್ಳು ಆತನ ಕಾರಿನ ಟೈಯರ್ ಗೆ ಚುಚ್ಚಿ ಕೊಳ್ಳುತ್ತೆ. ಟೈಯರ್ ಪಂಚರ್ ಆಗುತ್ತೆ. ವಿಜ್ಞಾನಿಗೆ ಕಾರನ್ನು ಮುಂದೆ ಓಡಿಸಿಕೊಂಡು ಹೋಗಲು ಕಷ್ಟವಾಗುತ್ತೆ. ಆಗ ಕಾರಿನಿಂದಿಳಿದು ಸುತ್ತಲೂ ನೋಡುತ್ತಾನೆ ಯಾವೊಬ್ಬ ವ್ಯಕ್ತಿಯೂ ಕಾಣಿಸುವುದಿಲ್ಲ. ಕಾರು ರಿಪೇರಿ ಮಾಡಲು ಯಾವ ಶಾಪ್ ಕೂಡ ಇರುವುದಿಲ್ಲ.

ಆಗ ಇನ್ನೇನು ಮಾಡುವುದು ನಾನೇ ಸ್ಟೆಪ್ನಿ ಹಾಕುತ್ತೇನೆ ಎಂದು ಕಾರ್ ನ ಚಕ್ರವನ್ನು ಕಳಚಲು ಆರಂಭಿಸುತ್ತಾನೆ. ಆಗ ಚಕ್ರದ 4 ಬೋಲ್ಟ್ ಗಳು ಆತನ ಕೈತಪ್ಪಿ ಪಕ್ಕದಲ್ಲಿಲ್ಲೆ ಇದ್ದ ಮೋರಿಯಲ್ಲಿ ಬೀಳುತ್ತವೆ. ಗಬ್ಬು ನಾರುತ್ತಿರುವ ಮೋರಿಯಲ್ಲಿ ಇಳಿದು ಬೋಲ್ಟ್ ನ್ನು ತೆಗೆಯುವುದು ವಿಜ್ಞಾನಿಗೆ ಸಾಧ್ಯವೇ ಇರಲಿಲ್ಲ. ಇನ್ನೇನು ಮಾಡುವುದು ಎಂದು ಯೋಚಿಸುತ್ತಿರುವಾಗ ಎದುರಿನಲ್ಲಿ ಒಬ್ಬ ದಾರಿಹೋಕ ಬರುತ್ತಾನೆ. ದಾರಿಹೋಕ ನೋಡಲು ಹರುಕು ಹಳೆಯ ಬಟ್ಟೆಯನ್ನ ಧರಿಸಿರುತ್ತಾನೆ. ಆತ ನೋಡಲು ಭಿಕ್ಷುಕನಂತೆ ಕಾಣುತ್ತಾನೆ. ಈತನ ನೋಡಿದರೆ ಕೊಳಕು ಮನುಷ್ಯನ ಹಾಗೆ ಕಾಣುತ್ತಾನೆ ಇವನಿಗೆ ಐದುನೂರು ರೂಪಾಯಿ ಕೊಟ್ಟು, ಮೋರಿಯಲ್ಲಿ ಬಿದ್ದ ಬೋಲ್ಟ್ ತೆಗೆದುಕೊಳ್ಳುವುದಕ್ಕೆ ಹೇಳುತ್ತೇನೆ ಎಂದು ತೀರ್ಮಾನಿಸಿ ವ್ಯಕ್ತಿ ಹತ್ತಿರ ಬರುತ್ತಿದ್ದ ಹಾಗೆ ನನ್ನ ತೆಗೆದುಕೊಳ್ಳುವುದಕ್ಕೆ ಹೇಳುತ್ತಾನೆ.

ಆ ವ್ಯಕ್ತಿ ವಿಜ್ಞಾನಿಯನ್ನೋಮ್ಮೆ ನೋಡಿ, ನಾನು ಬೋಲ್ಟ್ ತೆಗೆದು ಕೊಡುತ್ತೇನೆ ಆದರೆ ಅದಕ್ಕಿಂತ ಸುಲಭವಾದ ಉಪಾಯಾವೊಂದು ನನ್ನ ಬಳಿ ಇದೆ ಎಂದು ಹೇಳುತ್ತಾನೆ. ಈ ಕೊಳಕು ಮನುಷ್ಯ ಅದ್ಯಾವ ಐಡಿಯಾವನ್ನು ಹೇಳಲು ಸಾಧ್ಯ ಎಂದು ಯೋಚಿಸಿದ ವಿಜ್ಞಾನಿ ವ್ಯಂಗ್ಯವಾಗಿ ನಗುತ್ತಾ ಸರಿ ಹೇಳುತ್ತಾನೆ. ಆ ವ್ಯಕ್ತಿ ತನ್ನ ಐಡಿಯಾವನ್ನು ಹೇಳುತ್ತಾನೆ. ನಿಮ್ಮ ಕಾರಿನಲ್ಲಿ ಒಂದು ಚಕ್ರ ಪಂಚರ್ ಆದರೂ ಉಳಿದ ಮೂರು ಚಕ್ರಗಳಿವೆ. ಆ 3 ಚಕ್ರಗಳಿಗೆ 4 ಬೋಲ್ಟ್ ಗಳಿವೆ. ಆ ಮೂರು ಚಕ್ರದ ಒಂದೊಂದು ಬೋಲ್ಟನ್ ತೆಗೆದುಹಾಕಬಹುದು. 4 ಚಕ್ರಗಳಿಗೆ ತಲಾ 3 ಬೋಲ್ಟ್ ಗಳು ಇರುತ್ತವೆ. ಹೀಗೆ ನೀವು ಸುಮಾರು ದೂರ ಕಾರು ಚಲಾಯಿಸಿಕೊಂಡು ಹೋಗಬಹುದು. ನಿಧಾನವಾಗಿ ಹೋದರೆ ಇಲ್ಲಿಯೇ 5 ಕಿಲೋಮೀಟರ್ ದೂರದಲ್ಲಿ ಕಾರ ರಿಪೇರಿ ಶಾಪ್ ಸಿಗುತ್ತದೆ. ಅಲ್ಲಿ ನೀವು ಕಾರು ರಿಪೇರಿ ಮಾಡಿಸಿಕೊಳ್ಳಬಹುದು ಎಂದು ಹೇಳುತ್ತಾನೆ.

ದಾರಿಹೋಕರ ಈ ಉಪಾಯವನ್ನು ಕೇಳಿ ವಿಜ್ಞಾನಿ ದಂಗಾಗಿ ಬಿಡುತ್ತಾನೆ. ಈತ ಒಬ್ಬ ಭಿಕ್ಷುಕ ಎಂದು ಭಾವಿಸಿದ್ದೆ ಆದರೆ ಇವನಲ್ಲಿ ಎಷ್ಟು ಬುದ್ಧಿವಂತಿಕೆ ಇದೆ ಎನ್ನುವುದು ನನಗೆ ತಿಳಿಯಲೇ ಇಲ್ಲ. ಒಬ್ಬ ವಿಜ್ಞಾನಿ ಯಾಗಿದ್ದರು ನನಗೆ ಐಡಿಯಾ ಹೊಳೆಯಲೇ ಇಲ್ಲವಲ್ಲ ಎಂದು ಯೋಚಿಸುತ್ತಾನೆ. ಇದರಿಂದ ಈಗ ನಿಮಗೂ ಅರ್ಥವಾಗಿರಬಹುದು. ಯಾರೂ ಯಾರ ವೇಷಭೂಷಣ ಬಟ್ಟೆಯಿಂದ ಅವರ ವ್ಯಕ್ತಿತ್ವವನ್ನು ಅಳೆಯಬಾರದು. ಜೊತೆಗೆ ನಮ್ಮಲ್ಲಿ ನಾವೇ ದೊಡ್ಡವರು ಎನ್ನುವ ಅಹಂಕಾರವಿದ್ದರೆ, ಅದು ನಮ್ಮನ್ನು ಗೆಲ್ಲಿಸುವುದಿಲ್ಲ.

Leave a Comment