ಸಾಮಾನ್ಯವಾಗಿ ಹೊಟ್ಟೆಗೆ, ಬಟ್ಟೆಗೆ ಎಷ್ಟೇ ಇದ್ದರೂ ದಂಪತಿಗಳ ನಡುವೆ ಕಿರಿಕಿರಿ, ವೈಮನಸ್ಸು, ಜಗಳ ಇರುವುದನ್ನು ನಾವು ಕಾಣುತ್ತೇವೆ. ಕೈಯಲ್ಲಿ ಹಣ ಹೆಚ್ಚು ಓಡಾಡಿದಷ್ಟು ಮನುಷ್ಯ ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ಗಂಡ-ಹೆಂಡತಿಯ ನಡುವೆ ಇದೇ ಕಾರಣಕ್ಕೆ ಜಗಳವಾಗುವುದು ಸಾಮಾನ್ಯ. ಕೆಲವರು ಇದನ್ನು ಸರಿದೂಗಿಸಿಕೊಂಡು ಹೋಗಲು ಪ್ರಯತ್ನಿಸಿದರೆ ಇನ್ನೂ ಕೆಲವರು ಜಗಳ ಆಡುತ್ತಲೇ ಜೀವನ ಸಾಗಿಸುತ್ತಾರೆ.
ಆದರೆ ನಾವಿಂದು ಒಂದು ಅಪರೂಪದ ಜೋಡಿಗೆ ಬಗ್ಗೆ ಹೇಳ್ತೀವಿ. ಇವರು ಯಾವ ಸಿರಿವಂತರು ಅಲ್ಲ ಹೊಟ್ಟೆಗೆ ಬಟ್ಟೆಗೆ ಸರಿಯಾಗಿ ಇರುವ ದಂಪತಿಯೂ ಅಲ್ಲ. ದುಡಿಯೋಕೆ ತಾಕತ್ತು ಇಲ್ಲದೆ, ಕೆಲಸವಿಲ್ಲದೆ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿರುವ ದಂಪತಿಗಳು ಇವರು. ಹೌದು, ಈ ಪ್ರೇಮ್ ಕಹಾನಿ ಮಧ್ಯಪ್ರದೇಶದ ಚಿಂದ್ವಾಡಾ ಗ್ರಾಮದ್ದು. ಇಲ್ಲಿ ಸಂತೋಷ ಸಾಹು ಎಂಬ ವ್ಯಕ್ತಿ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಾರೆ. ಅವರ ಅಂಗವೈಕಲ್ಯತೆ ಯಿಂದಾಗಿ ಬೇರೆ ಯಾವುದೇ ಕೆಲಸ ಮಾಡಲು ಸಾಧ್ಯವಾಗದೇ ಇರುವುದಕ್ಕೆ ಅವರು ಭಿಕ್ಷೆ ಬೇಡಿ ಜೀವನ ಸಾಗಿಸಬೇಕಾಗಿದೆ.
ಇನ್ನು ಅವರ ಹೆಂಡತಿಯ ಕೂಡ ಭಿಕ್ಷೆ ಬೇಡುತ್ತ ಗಂಡನಿಗೆ ಸಹಾಯಕವಾಗಿ ನಿಂತು ಜೀವನದ ದೋಣಿಯನ್ನು ಸಾಗಿಸುತ್ತಿದ್ದಾರೆ. ಬಹಳ ವರ್ಷಗಳಿಂದ ತುಂಬಾ ಕಷ್ಟಪಟ್ಟು ಭಿಕ್ಷೆಬೇಡಿ ಸಂಸಾರದ ಭಾರವನ್ನು ಇಬ್ಬರೂ ಸಮನಾಗಿ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಇವರ ನಡುವಿನ ಈ ಬಾಂಧವ್ಯ ಈ ಪ್ರೀತಿಯನ್ನು ನೋಡಿದರೆ ಯಾವ ಸಿರಿವಂತರು ಕೂಡ ನಾಚಲೆಬೇಕು. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಇವರಿಬ್ಬರ ನಡುವೆ ಪ್ರೀತಿಗೆನೂ ಏನೂ ಕೊರತೆಯಿಲ್ಲ. ಇದಕ್ಕೆ ಸಾಕ್ಷಿ ಈ ಒಂದು ಗಿಫ್ಟ್!
ಬಿಕ್ಷುಕ ಸಾಹೋ ಭಿಕ್ಷೆ ಬೇಡಿ ಅದರಲ್ಲಿ ಹಣವನ್ನು ಉಳಿಸಿ ಅಂಗವಿಕಲರು ಓಡಿಸಬಹುದಾದ ಮೊಪೆಡ್ ಗಾಡಿಯೊಂದನ್ನು ಖರೀದಿಸಿದ್ದಾರೆ. ಈ ಗಾಡಿಯನ್ನು ತನ್ನ ಪ್ರೀತಿಯ ಹೆಂಡತಿ ಮುನ್ನಿಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ ಸಾಹು. ಅಂದಹಾಗೆ ಈ ಮೊಪೆಡ್ ಬೆಲೆ ಬರೋಬ್ಬರಿ 90 ಸಾವಿರ ರೂಪಾಯಿ. ಹೌದು, ತಾನು ಭಿಕ್ಷೆ ಬೇಡಿದ ಹಣದಿಂದ ಸ್ವಲ್ಪ ಸ್ವಲ್ಪವೇ ಉಳಿಸಿ ಇಂದು ಈ ಬಾರಿ ಮೊತ್ತದ ಗಾಡಿಯನ್ನು ಕೊಂಡುಕೊಳ್ಳಲು ಸಾಹು ಸಶಕ್ತರಾಗಿದ್ದಾರೆ. ಇನ್ನು ಮೊಪೆಡ್ ಗಾಡಿಯಲ್ಲಿ ಕುಳಿತು ತಮ್ಮ ಜೀವನವನ್ನು ಸಾಗಿಸಲು ಮುಂದಾಗಿದ್ದಾರೆ.
ಸಾಹು ಮತ್ತು ಮುನ್ನಿ ಜೋಡಿ. ರಥವೇರಿ ಕುಳಿತಂತೆ ಸಾಹು ಗಾಡಿ ಓಡಿಸುತ್ತಾ ಇದ್ರೆ ರಾಣಿಯಂತೆ ಹಿಂದುಗಡೆ ಕೂತು ಊರಲ್ಲೆಲ್ಲ ವೀಕ್ಷಿಸುತ್ತಾ ಪರಸ್ಪರ ಪ್ರೀತಿಯನ್ನು ಹಂಚಿಕೊಳ್ಳುತ್ತಾ, ತಮ್ಮ ಬಡತನದ ಜೀವನವನ್ನು ಇನ್ನಷ್ಟು ರಂಗಾಗಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಮಧ್ಯಪ್ರದೇಶದ ಈ ಜೋಡಿ. ಮನಸ್ಸಿದ್ದರೆ ಮಾರ್ಗ ಅನ್ನೋಹಾಗೆ ಇವರಿಬ್ಬರು ಕಷ್ಟಪಟ್ಟು ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಂತು, ಇದ್ದುದರಲ್ಲಿಯೇ ಸಂತೋಷವನ್ನು ಕಂಡುಕೊಂಡು ಜೀವನ ಸಾಗಿಸುತ್ತಿದ್ದಾರೆ.