ವೈದ್ಯೋ ನಾರಾಯಣೋ ಹರಿ ಎಂದು ಶ್ಲೋಕವಿದೆ. ಈ ಮಾತು ಎಲ್ಲರಿಗೂ ಅನ್ವಯಿಸುವುದಿಲ್ಲ. ಈ ಸಮಾಜದಲ್ಲಿ ಜನರ ಸೇವೆಗೆ ಅಂಥ ಕೆಲಸ ಮಾಡುವ ವೈದ್ಯರೂ ಇದ್ದಾರೆ ಮತ್ತು ಹಣಕ್ಕೋಸ್ಕರ ಕೆಲಸ ಮಾಡುವ ವೈದ್ಯರು ಕೂಡ ಇದ್ದಾರೆ. ಪ್ರೈವೇಟ್ ಹಾಸ್ಪಿಟಲ್ ಗಳಲ್ಲಿ ಚಿಕ್ಕಚಿಕ್ಕ ಚಿಕಿತ್ಸೆಗೆ ಲಕ್ಷ ಲಕ್ಷಗಟ್ಟಲೆ ಹಣ ತೆಗೆದುಕೊಂಡು ಬಡವರ ಜೀವನವನ್ನು ಕಷ್ಟಕರವಾಗಿಸುತ್ತಿದ್ದಾರೆ. ಈಗಿನ ಕಾಲದಲ್ಲಿ ಹಾಸ್ಪಿಟಲ್ ಗೆ ಹೋಗೋಕೆ ಜನ ಭಯ ಪಡುತ್ತಿದ್ದಾರೆ.
ಹೈದ್ರಾಬಾದ್ ನ ಜಹೀರಾಬಾದ್ ನಲ್ಲಿ ನಡೆದ ಘಟನೆ ಇದೀಗ ಪ್ರತಿಯೊಬ್ಬರನ್ನು ಬೆಚ್ಚಿಬೀಳಿಸುವಂತಿದೆ. ಅರ್ಚನಾ ಎಂಬ 20 ವರ್ಷದ ಯುವತಿ ಬದುಕಿದ್ದರೂ ಕೂಡ ಯುವತಿಯನ್ನು ಮೃ ತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿ ಸರ್ಟಿಫಿಕೇಟ್ ನೀಡಿದ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ಪ್ರಕಾರ, ಜಹೀರಾಬಾದ್ ಮಂಡಲದ ಮೂಲದ ನರಸಿಂಹುಲು ಮತ್ತು ಶಾರದ ಅವರಿಗೆ ಅರ್ಚನ ಎಂಬ ವರ್ಷ 20 ವಯಸ್ಸಿನ ಹುಡುಗಿ ಇತ್ತೀಚೆಗೆ ವಿವಾಹವಾಗಿದ್ದಳು. ಮದುವೆಯಾಗಿ ಈಗಷ್ಟೇ ಗಂಡನ ಮನೆ ಸೇರಿಕೊಂಡಿದ್ದಳು.
ಮೇ 7 ನೇ ತಾರೀಕಿನಂದು ಉಪವಾಸ ಮಾಡುತ್ತಿದ್ದ ದಿನ ಎಚ್ಚರತಪ್ಪಿ ಅರ್ಚನಾ ಪ್ರಜ್ಞಾಹೀನ ಸ್ಥಿತಿ ತಲುಪಿದ್ದಳು. ತಕ್ಷಣ ಅರ್ಚನಾ ಗಂಡ ಈ ವಿಷಯವನ್ನು ಅರ್ಚನಾ ಪಾಲಕರಿಗೆ ತಿಳಿಸಿ ಜಹೀರಾಬಾದ್ ನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದ. ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಮತ್ತು ಡ್ಯೂಟಿ ಡಾಕ್ಟರ್ ಆಗಿದ್ದ ಸಂತೋಷ್ ಎಂಬ ವೈದ್ಯರು ಅರ್ಚನಾರನ್ನು ಪರೀಕ್ಷೆ ಮಾಡಿ ಅರ್ಚನಾ ಮೃ’ತ’ಪಟ್ಟಿದ್ದಾಳೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಈ ಪುಣ್ಯಾತ್ಮನ ಡಾಕ್ಟರ್ ಅರ್ಚನಾಳ ಡೆ’ತ್’ ಸರ್ಟಿಫಿಕೇಟ್ ಕೂಡ ನೀಡಿದ್ದ.
ಪಾಲಕರಿಗೆ ಆ ಡೆ ತ್ ಸರ್ಟಿಫಿಕೇಟ್ ಪ್ರಮಾಣಪತ್ರವನ್ನು ನೀಡಿ ಸಹಿ ಕೂಡ ಹಾಕಿಸಿಕೊಂಡಿದ್ದ. ಯಾವುದೇ ಖಾಯಿಲೆಯಿಲ್ಲದೇ ನೆಮ್ಮದಿಯಾಗಿದ್ದ ಅರ್ಚನಾಗೆ ಇದ್ದಕ್ಕಿದ್ದಂತೆ ಸಾ ವು ಬರಲು ಸಾಧ್ಯವೇ ಇಲ್ಲ ಎಂದು ಪೋಷಕರು ಅನುಮಾನಗೊಂಡು ತಕ್ಷಣ ಆಸ್ಪತ್ರೆಯಿಂದ ಅರ್ಚನಾ ಳನ್ನು ಸಂಗಾರೆಡ್ಡಿ ಜಿಲ್ಲೆಯ ಮತ್ತೊಂದು ಆಸ್ಪತ್ರೆಗೆ ಕರೆದೊಯ್ದರು. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋದ ತಕ್ಷಣವೇ ಅರ್ಚನಾ ಇನ್ನೂ ಕೂಡ ಬದುಕಿದ್ದಾಳೆಂಬ ವಿಷಯ ತಿಳಿಯುತ್ತಲೇ ತಕ್ಷಣ ವೈದ್ಯರು ಅಲ್ಲಿ ಚಿಕಿತ್ಸೆ ಪ್ರಾರಂಭಮಾಡುತ್ತಾರೆ.
ಮೇ 22 ರಂದು ಅರ್ಚನಾಳ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಒಂದೇ ವಾರದಲ್ಲಿ ಅರ್ಚನಾ ಸಂಪೂರ್ಣವಾಗಿ ಗುಣಮುಖಳಾಗಿ ಇದೀಗ ಸುಖಜೀವನವನ್ನು ನಡೆಸುತ್ತಿದ್ದಾಳೆ. ಮೊದಲು ಹೋಗಿದ್ದ ಏರಿಯಾ ಆಸ್ಪತ್ರೆಯ ವೈದ್ಯರ ಮಾತನ್ನು ಕೇಳಿದ್ದರೆ ಇಂದು ಪೋಷಕರು ತಮ್ಮ ಮಗಳನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತಿತ್ತು. ವೈದ್ಯರು ಮಾಡುವ ಸಣ್ಣ ನಿರ್ಲಕ್ಷ್ಯ ಮನುಷ್ಯನ ಜೀವನವನ್ನೇ ನಾ ಶ ಮಾಡುತ್ತದೆ ಎಂಬುದಕ್ಕೆ ಇದೇ ಉದಾಹರಣೆ. ಅರ್ಚನಾಳ ಪೋಷಕರು ವೈದ್ಯರು ತೋರಿದ ನಿರ್ಲಕ್ಷ್ಯಕ್ಕೆ ಇದೀಗ ದೂರನ್ನು ಕೂಡ ದಾಖಲು ಮಾಡಿದ್ದಾರೆ.