ಅಹೋರಾತ್ರ ಅವರ ಹೆಸರನ್ನು ನೀವೆಲ್ಲ ಕೇಳೇ ಇರುತ್ತೀರಿ ಇವರು ಸಾಮಾಜಿಕ ಕಾರ್ಯಕರ್ತ. ಅಹೋರಾತ್ರ ಅವರು ಸುಖ-ದುಃಖಗಳ ಅಪೇಕ್ಷೆ ಮತ್ತು ವಿಕರ್ಷಣೆಯನ್ನು ತೊರೆದು ಅರ್ಥಪೂರ್ಣ ಮತ್ತು ಯಶಸ್ವಿ ಜೀವನವನ್ನು ನಡೆಸುವ ಕಲೆಯನ್ನು ಬೋಧಿಸುವ ವಿಶಿಷ್ಟ ಗುಣವನ್ನು ಹೊಂದಿರುವ ವ್ಯಕ್ತಿ. ಇವರು ಆಗಾಗ ಸೆಲೆಬ್ರಿಟಿಗಳಿಗೆ ಮತ್ತು ರಾಜಕೀಯ ವ್ಯಕ್ತಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾ ಇರ್ತಾರೆ. ತಮ್ಮ ಕಣ್ಣಿಗೆ ತಪ್ಪು ಅಂತ ಅನಿಸಿದ್ದನ್ನು ಖಡಕ್ಕಾಗಿ ಮತ್ತು ನೇರವಾಗಿ ಹೇಳುವಂತಹ ವ್ಯಕ್ತಿತ್ವ ಇವರದ್ದು.
ಕೆಲವು ದಿನಗಳ ಹಿಂದೆ ಅಹೋರಾತ್ರ ಅವರು ಕನ್ನಡದ ಹೆಸರಾಂತ ನಟ ಸುದೀಪ್ ಅವರ ಮೇಲೆ ತಿರುಗಿ ಬಿದ್ದಿದ್ದರು. ರಮ್ಮಿ ಅಂತಹ ಜೂ’ಜಿ’ನ ಆಟಗಳನ್ನು ಸುದೀಪ್ ಅವರು ಪ್ರಚಾರ ಮಾಡಿ ಪ್ರಚೋದಿಸುವುದು ತಪ್ಪು ಅಂತ ಸುದೀಪ್ ಅವರನ್ನು ವಿರೋಧ ಮಾಡಿದ್ದರು. ಅದಾದ ಮೇಲೆ ಕೆಜಿಎಫ್ ಚಿತ್ರದ ನಟ ಯಶ್ ಅವರ ಮೇಲೆ ಕೂಡ ಇವರು ವಿರೋಧ ವ್ಯಕ್ತಪಡಿಸಿದ್ದರು ಕೆಜಿಎಫ್ ಚಿತ್ರ ರೌ’ಡಿ’ಸಂ ಚಿತ್ರ ಇದರಿಂದ ಯುವಕರಿಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಅಹೋರಾತ್ರ ಕಿಡಿಕಾರಿದ್ದರು.
ಇದೀಗ ಹಾಡುಗಾರ ಚಂದನ್ ಶೆಟ್ಟಿ ಅವರ ಸರದಿ. ಚಂದನ್ ಶೆಟ್ಟಿ ಅವರಿಗೆ ಇದೀಗ ಅಹೋರಾತ್ರ ಸಖತ್ತಾಗಿ ಕ್ಲಾಸ್ ತಗೊಂಡಿದ್ದಾರೆ. ಚಂದನ್ ಶೆಟ್ಟಿ ಅವರು ಇತ್ತೀಚೆಗೆ ಜೂ’ಜಿ’ನ ಆಟಕ್ಕೆ ಸಂಬಂಧ ಪಟ್ಟ ಪ್ರಚಾರ ದಲ್ಲಿ ಕಾಣಿಸಿಕೊಂಡಿದ್ದರು ಮತ್ತು ಜೂ’ಜಿ’ನ ಆಟವನ್ನು ಆಡುವಂತೆ ಪ್ರಚೋದಿಸಿದ್ದರು. ಫೇಸ್ಬುಕ್ನಲ್ಲಿ ಲೈವ್ ಬಂದು ಅಹೋರಾತ್ರ ಅವರು ಚಂದನ್ ಶೆಟ್ಟಿ ಮೇಲೆ ಈ ರೀತಿಯಾಗಿ ಕಿಡಿಕಾರಿದ್ದಾರೆ.. “ಏಯ್, ಚಂದನ್ ಶೆಟ್ಟಿ ನೀನು ಇತ್ತೀಚೆಗೆ ಮದುವೆಯಾಗಿದ್ದೀಯಾ ಮದುವೆಯಾಗಿರುವ ಗಂಡಸು ಗಂಡಸಿನ ತರಹ ಬದುಕುಬೇಕೋ. ಹೆಂಡತಿ ಮುಂದೆ ತಲೆ ಎತ್ತಿ ನಿಲ್ಲುವ ಹಾಗೆ ಬದುಕಬೇಕೋ ನಿನ್ನ ಹೆಂಡತಿಗೆ ನೀನು ಹೇಗೆ ಮುಖ ತೋರಿಸುತ್ತೀಯಾ.. ನೀನು ಪ್ರಚಾರ ಮಾಡುವ ಜೂ’ಜಿ’ನ ಆಟದಿಂದ ಸಾವಿರಾರು ಜನರ ಜೀವನ ಹಾಳಾಗುತ್ತಿದೆ
ಜನರ ಜೀವನವನ್ನು ಹಾಳು ಮಾಡಿ ಅದರಿಂದ ಬಂದ ಹಣದಿಂದ ನೀನು ನಿನ್ನ ಹೆಂಡತಿಯನ್ನು ಸಾಕುತ್ತಿದ್ದೀಯಾ.. ನಿನಗೆ ಈ ರೀತಿ ಕೆಲಸ ಮಾಡೋಕೆ ನಿನ್ನ ಹೆಂಡತಿ ಹೇಗೆ ಅನುಮತಿ ಕೊಟ್ಟಳು? ಅಥವಾ ಅವಳು ನಿನ್ನ ಜೊತೆ ಸೇರಿಕೊಂಡು ಈ ಕೆಲಸದಲ್ಲಿ ಭಾಗಿಯಾಗಿದ್ದಾಳಾ.. ಇಂದು ಜೂ’ಜು’ ಆಟದಿಂದ ಹಲವಾರು ಜನ ತಮ್ಮ ಮಕ್ಕಳನ್ನು ಕಳೆದುಕೊಳ್ಳುತ್ತಿದ್ದಾರೆ. ಮುಂದೊಂದು ದಿನ ನಿನಗೆ ಮಕ್ಕಳು ಆಗಬೇಕು ಅಂದರೆ ಅವರ ಶಾಪ ನಿನ್ನನ್ನು ಬಿಡುವುದಿಲ್ಲ.ನಿನಗೆ ಒಳ್ಳೆಯದಾಗುತ್ತೆನೋ.. ಕರ್ನಾಟಕದ ಜನರನ್ನು ಹಾಳು ಮಾಡುತ್ತಿದ್ದೀಯಾ. ನಾನು ನಿನ್ನನ್ನು ಮಹಾನ್ ಪುರುಷ ಅಂತ ತಿಳಿದುಕೊಂಡಿದ್ದೆ.
ನೀನು ಮಾಡುತ್ತಿರುವ ಈ ಮಹಾ ಕಾರ್ಯವನ್ನು ನೋಡಿ ನಿನ್ನ ಅತ್ತೆ ಮಾವ ಕಪಾಳಕ್ಕೆ ಹೊ’ಡಿ’ಬೇಕು. ನಿನ್ನ ಹೆತ್ತ ತಾಯಿ ಮೊದಲು ನನಗೆ ಕಪಾ’ಳಕ್ಕೆ ಹೊ’ಡೆ’ಯಬೇಕು. ಆಗ ಮಾತ್ರ ನೀನು ಸರಿದಾರಿಯಲ್ಲಿ ಬದುಕು ನಡೆಸುತ್ತಿಯಾ. ನಿನಗೆ ಅನ್ನ ಹಾಕಿದ ಜನರಿಗೆ ಮೋಸ ಮಾಡೋಕೆ ನಿನಗೆ ಮನಸ್ಸಾದರೂ ಹೇಗೆ ಬರತ್ತೆ.” ಎಂದು ಕಾರಿನಲ್ಲಿ ಕೂತುಕೊಂಡು ಫೇಸ್ ಬುಕ್ ಲೈವ್ ನಲ್ಲಿ ಅಹೋರಾತ್ರ ಕಿಡಿಕಾರಿದ್ದಾನೆ. ಇದೇ ಸಂದರ್ಭದಲ್ಲಿ ಧ್ರುವ ಸರ್ಜಾ ಮೇಲೆ ಕೂಡ ಅಹೋರಾತ್ರ ಕಿಡಿಕಾರಿದ್ದಾರೆ. ಹಾಗೆ ಧ್ರುವ ಸರ್ಜಾ ಸಿನಿಮಾದಲ್ಲಿ ಹೆಣ್ಣು ನಿಂ’ದ’ನೆ ಮಾಡುವ ದೃಶ್ಯಗಳಿತ್ತು. ಇದನ್ನು ನಾನು ವಿರೋಧಿಸುತ್ತೇನೆ ಎಂದು ಧ್ರುವ ಸರ್ಜಾ ಮೇಲೆ ಕೂಡ ಅಹೋರಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ.