ಅನುಕೂಲಕ್ಕೆ ತಕ್ಕಂತೆ ಮತ್ತು ಆಸೆಗೆ ತಕ್ಕಂತೆ ಜೀವನ ಸಿಗಲಿಲ್ಲವೆಂದರೆ ಮನುಷ್ಯ ಬದುಕಿನ ಮೇಲೆ ಇರುವ ಆಸೆಯನ್ನೇ ಬಿಟ್ಟು ಬಿಡುತ್ತಾನೆ. ತಮಿಳುನಾಡಿನ ಕುಡ್ಡಾಲೋರ್ ಜಿಲ್ಲೆಯ ರಮ್ಯಾ ಎಂಬ ಮಹಿಳೆ ತನ್ನ ಗಂಡನ ಮನೆಯಲ್ಲಿ ಶೌಚಾಲಯವಿಲ್ಲ ಎಂಬ ಕಾರಣಕ್ಕೆ ತೆಗೆದುಕೊಂಡ ನಿರ್ಧಾರ ಊಹೆಗೂ ಮೀರಿದ್ದು. ಇದು ತಮಿಳುನಾಡಿನ ಕಡಲೂರು ಜಿಲ್ಲೆಯ ಅರಿಸಿಪೆರಿಯಂಕುಪ್ಪಂನ ರಮ್ಯ ಎಂಬ ಮಹಿಳೆಯ ನೈಜ ಕಥೆ. ರಮ್ಯಾ ಎಂಎಸ್ ಸಿ ಪದವಿ ಪಡೆದಿದ್ದಳು.ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಈಕೆಗೆ 27 ವರ್ಷ ವಯಸ್ಸಾಗಿತ್ತು. ಮತ್ತು ಕೈತುಂಬ ಸಂಬಳ ಕೂಡ ಬರುತ್ತಿತ್ತು. ಇವಳಿಗೆ ತಂದೆಯಿಲ್ಲ ತಾಯಿಯೊಂದಿಗೆ ಜೀವನವನ್ನು ನಡೆಸುತ್ತಿದ್ದಳು. ಒಬ್ಬಳೇ ಮಗಳಾದ್ದರಿಂದ ಇವಳನ್ನು ತಾಯಿ ಮುದ್ದಿನಿಂದ ಸಾಕಿದ್ದರು. ಯಾವುದಕ್ಕೂ ಕಮ್ಮಿ ಮಾಡುತ್ತಿರಲಿಲ್ಲ.
ರಮ್ಯಾ 25 ನೇ ವಯಸ್ಸಿನಲ್ಲಿದ್ದಾಗಲೇ ಕಾರ್ತಿಕೇಯನ್ ಎಂಬ ಹುಡುಗನೊಬ್ಬನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು. ಎರಡು ವರ್ಷಗಳ ಕಾಲ ಇವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ನಂತರ ಒಂದು ದಿನ ಧೈರ್ಯ ಮಾಡಿ ಮನೆಯವರಿಗೆ ತಾವಿಬ್ಬರು ಪ್ರೀತಿ ಮಾಡುತ್ತಿದ್ದೇವೆ, ಮದುವೆಯಾಗಲು ಒಪ್ಪಿಗೆ ಬೇಕು ಎಂದು ಕೇಳಿದರು. ನಂತರ ರಮ್ಯ ಮತ್ತು ಕಾರ್ತಿಕೇಯನ್ ಇಬ್ಬರ ಮನೆಯವರ ಒಪ್ಪಿಗೆ ಮೇರೆಗೆ ಇದೇ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಮದುವೆ ಆಗಿದ್ದರು. ಕಾರ್ತಿಕೇಯನ್ ನನ್ನು ರಮ್ಯಾ 2 ವರ್ಷಗಳಿಂದ ಪ್ರೀತಿಸುತ್ತಿದ್ದರು ಕೂಡ ಕಾರ್ತಿಕೇಯನ್ ಮನೆಗೆ ಒಂದು ದಿನ ಕೂಡ ಹೋಗಿರಲಿಲ್ಲ.
ತನ್ನ ಪ್ರಿಯಕರನ ಮನೆಯ ಆರ್ಥಿಕ ಪರಿಸ್ಥಿತಿ ಕೂಡ ಈಕೆಗೆ ತಿಳಿದಿರಲಿಲ್ಲ. ಮನೆಯಲ್ಲಿರೋ ಅನುಕೂಲದ ಬಗ್ಗೆ ಈಕೆಗೆ ಜ್ಞಾನವೇ ಇರಲಿಲ್ಲ ಮದುವೆಯಾದ ನಂತರ ಗಂಡನ ಮನೆಗೆ ಹೋದ ಈಕೆ ಒಂದು ಕ್ಷಣ ಬೆರಗಾದಳು. ಮದುವೆಯಾಗಿ ಗಂಡನ ಮನೆಗೆ ಹೋದ ಮೇಲೆ ಗೊತ್ತಾಗುತ್ತೆ ತನ್ನ ಗಂಡನ ಮನೆಯಲ್ಲಿ ಟಾಯ್ಲೆಟ್ ರೂಮ್ ಕೂಡ ಇಲ್ಲ ಎಂಬುದು. ತಕ್ಷಣವೇ ತನ್ನ ಗಂಡನಿಂದ ಟಾಯ್ಲೆಟ್ ರೂಮ್ ಕಟ್ಟಿಸಿ ಕೊಡುವಂತೆ ಕೇಳಿಕೊಳ್ಳುತ್ತಾಳೆ. ಟಾಯ್ಲೆಟ್ ರೂಮ್ ಇಲ್ಲದ ಮನೆಯಲ್ಲಿ ಒಂದು ದಿನ ಕೂಡ ನನಗೆ ಬದುಕೋಕೆ ಆಗಲ್ಲ ಎಂದು ರಮ್ಯಾ ಹಟಹಿಡಿದು ಕುಳಿತುಕೊಳ್ಳುತ್ತಾಳೆ.
ಇದೇ ವಿಚಾರಕ್ಕೆ ಗಂಡ ಮತ್ತು ಹೆಂಡತಿಯ ಮಧ್ಯೆ ವಾದ ವಿವಾದ ಶುರುವಾಗುತ್ತೆ. ರಾಜ್ಯದ ರಾಜಧಾನಿಯಿಂದ ಸುಮಾರು ಮೂರು ಗಂಟೆಗಳ ದೂರದಲ್ಲಿರುವ ಕಡಲೂರು ನಗರದಲ್ಲಿ ಶೌಚಾಲಯವಿರುವ ಮನೆಯನ್ನು ಹುಡುಕುವಂತೆ ಪ್ರತಿ ದಿನ ರಮ್ಯ ಪತಿ ಕಾರ್ತಿಕೇಯನ್ ಗೆ ಒತ್ತಾಯಿಸುತ್ತಿದ್ದಳು. ಆದರೆ ಗಂಡ ಕಾರ್ತಿಕೇಯನ್ ಮಾತ್ರ ಈ ಮನೆ ಬಿಟ್ಟು ಬೇರೆ ಮನೆಗೆ ಹೋಗೋದು ಬೇಡ ಎಂದು ಸಮಾಧಾನ ಮಾಡುತ್ತಾನೆ. ಓದಿ ಡಬ್ಬಲ್ ಡಿಗ್ರಿ ಪಡೆದುಕೊಂಡ ಹೆಣ್ಣುಮಗಳಿಗೆ ಶೌಚಾಲಯ ಕೂಡ ಇಲ್ಲದ ಮನೆಯಲ್ಲಿ ವಾಸ ಮಾಡೋಕೆ ಮನಸ್ಸಾಗುವುದಿಲ್ಲ. ಇದೇ ವಿಚಾರದಿಂದ ಬೇಸತ್ತ ರಮ್ಯಾ ತನ್ನ ತಾಯಿ ಮನೆಗೆ ಹೋಗಿ ವಾಸಮಾಡಲು ಶುರು ಮಾಡುತ್ತಾಳೆ.
ಎಷ್ಟು ದಿನಗಳು ಕಳೆದರೂ ಕೂಡ ಗಂಡ ಶೌಚಾಲಯ ಕಟ್ಟಿಸೋಕೆ ಮುಂದಾಗಲ್ಲ. ತಾಯಿ ಮನೆಯಲ್ಲಿ ವಾಸ ಮಾಡುತ್ತಿದ್ದ ರಮ್ಯಾ ಇದೇ ವಿಚಾರಕ್ಕಾಗಿ ಪ್ರತಿನಿತ್ಯ ಕೊರಗುತ್ತಿದ್ದಳು. ಇದೇ ವಿಷಯ ಮನಸ್ಸಿನಲ್ಲಿಟ್ಟುಕೊಂಡು ಕೊರಗಿ ಕೊರಗಿ ರಮ್ಯಾ ಮೇ 9 ಸೋಮವಾರದಂದು ಮನೆಯಲ್ಲಿ ತಾಯಿ ಇಲ್ಲದಿರುವ ಸಮಯದಲ್ಲಿ ನೇ ಣಿಗೆ ಶರಣಾಗಿದ್ದಾಳೆ. ಕೆಲವು ಗಂಟೆಗಳ ನಂತರ ಮನೆಗೆ ಬಂದ ತಾಯಿಗೆ ತಮ್ಮ ಮನೆಯಲ್ಲಿ ಮಗಳು ಸೀಲಿಂಗ್ ಫ್ಯಾನ್‌ಗೆ ನೇ ಣು ಬಿಗಿದ ಸ್ಥಿತಿಯಲ್ಲಿ ಕಂಡಿದ್ದಾಳೆ. ಕೂಡಲೇ ಆಕೆಯನ್ನು ಕಡಲೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾದರೂ, ಚಿಕಿತ್ಸೆ ಫಲಕಾರಿಯಾಗದೆ ರಮ್ಯಾ ಇಹಲೋಕ ತ್ಯಜಿಸಿದ್ದಾಳೆ.