Aadhar Card ಈಗಾಗಲೇ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಕೆಲವೊಂದು ಯೋಜನೆಗಳನ್ನು ಹಾಗೂ ನಿಯಮಗಳನ್ನು ಬದಲಾವಣೆ ಮಾಡುವಂತಹ ಕೆಲಸವನ್ನು ಕೂಡ ಮಾಡುತ್ತಿದೆ. ಈ ಸಂದರ್ಭದಲ್ಲಿ ಪ್ರಮುಖ ಸರ್ಕಾರಿ ದಾಖಲೆಯಾಗಿರುವಂತಹ ಆಧಾರ್ ಕಾರ್ಡ್(Aadhar Card) ವಿಚಾರದಲ್ಲಿ ಕೂಡ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದೆ.
ಹೌದು ಇನ್ನು ಕೇವಲ ಮೂರು ದಿನಗಳಲ್ಲಿ ಈ ಕೆಲಸ ಮಾಡಿ ಇಲ್ಲವಾದಲ್ಲಿ ಸರ್ಕಾರದಿಂದ ಸಾಕಷ್ಟು ದೊಡ್ಡ ಮಟ್ಟದ ದಂಡ ತೆರಿಗೆಯನ್ನು ಕಟ್ಟುವುದಕ್ಕೆ ಸಿದ್ಧರಾಗಬೇಕಾಗುತ್ತದೆ. ಮೊದಲನೇದಾಗಿ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್(Ration Card) ಜೊತೆಗೆ ಲಿಂಕ್ ಮಾಡಿಸಿಕೊಳ್ಳುವುದು. ಸರ್ಕಾರ ಈಗಾಗಲೇ ಇದರ ಕುರಿತಂತೆ ನಿಯಮವನ್ನು ಕೂಡ ಹೊರಡಿಸಿದೆ.
ಸರ್ಕಾರ ನೀಡುತ್ತಿರುವಂತಹ ಕೆಲವೊಂದು ಯೋಜನೆಗಳು ಬಡತನದ ರೇಖೆಗಿಂತ ಕೆಳಗಿರುವವರಿಗೆ ಸೇರುತ್ತದೆ ಇಲ್ಲವೋ ಎನ್ನುವ ಕಾರಣಕ್ಕಾಗಿ ರೇಷನ್ ಕಾರ್ಡ್ ಅನ್ನು ಪ್ರತಿಯೊಬ್ಬರು ಕೂಡ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಸಿಕೊಳ್ಳಿ ಎಂಬುದಾಗಿ ಕೇಳಿಕೊಂಡಿದೆ. ಜೂನ್ 30 ಇದಕ್ಕೆ ಕೊನೆಯ ದಿನಾಂಕವಾಗಿದ್ದು ಒಂದು ವೇಳೆ ನೀವು ಮಾಡಿಸಿ ಕೊಳ್ಳದೆ ಇದ್ದಲ್ಲಿ ನಿಮ್ಮ ಮೇಲೆ ಫೈನ್ ಹಾಗೂ ಕಾನೂನು ಕ್ರಮವನ್ನು ಕೂಡ ಜರುಗಿಸಬಹುದಾದ ಸಾಧ್ಯತೆ ಇರುತ್ತದೆ.
ಇನ್ನು ಆದಾಯ ತೆರಿಗೆಯ ಟ್ರ್ಯಾಕ್ ಮಾಡುವುದಕ್ಕಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಆಧಾರ್ ಕಾರ್ಡ್ ಅನ್ನು ಪಾನ್ ಕಾರ್ಡ್(PAN Card) ಜೊತೆಗೆ ಕೂಡ ಈ ತಿಂಗಳ ಕೊನೆಯವರೆಗೆ ಮಾಡಿಸಿಕೊಳ್ಳಬೇಕೆಂಬುದಾಗಿ ಆದಾಯ ಇಲಾಖೆ ಕಡ್ಡಾಯವಾಗಿ ನಿಯಮವನ್ನು ರೂಪಿಸಿತ್ತು. ಒಂದು ವೇಳೆ ಮಾಡಿಸಿದೆ ಹೋದಲ್ಲಿ ಪಾನ್ ಕಾರ್ಡ್ ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳುತ್ತದೆ ಎಂಬುದಾಗಿ ಕೂಡ ನಿಯಮವನ್ನು ರೂಪಿಸಲಾಗಿದೆ. ಹೀಗಾಗಿ ಇವೆರಡು ಕೆಲಸಗಳನ್ನು ಕೂಡ ಈ ತಿಂಗಳ ಒಳಗಾಗಿ ಮಾಡಿಸಿಕೊಳ್ಳಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಶ್ಚತಾಪ ಪಡಬೇಕಾಗುತ್ತದೆ.