30 ವರ್ಷ ವಯಸ್ಸಿಗೆ 10 ಪ್ರೈವೇಟ್ ಜೆಟ್ ಗಳ ಒಡತಿಯಾಗಿದ್ದಾಳೆ ಈ ಮಹಿಳೆ. ಇಷ್ಟು ಚಿಕ್ಕ ವಯಸ್ಸಿಗೆ ಈ ರೇಂಜ್ ಗೆ ಬೆಳೆದಿದ್ದು ಹೇಗೆ ಗೊತ್ತಾ

10 ಖಾಸಗಿ ವಿಮಾನದ ಒಡತಿ ಈ ಜೆಟ್ ಸೆಟ್ ಸಂಸ್ಥಾಪಕಿ; ಅಬ್ಬಾ ಎಂಥಾ ಸಾಧಕಿ ಈಕೆ!. ಸಾಧನೆ ಮಾಡುವ ಕನಸುಕಂಡರೆ ಸಾಲದು ಅದನ್ನು ನನಸಾಗಿಸುವ ಪ್ರಯತ್ನವನ್ನೂ ಮಾಡಬೇಕು. ಆಗ ಮಾತ್ರ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ. ಈ ಮಾತನ್ನ ಅಕ್ಷರಶಃ ನಿಜವಾಗಿಸಿ ಹಲವರಿಗೆ ಮಾದರಿಯಾದವರು ಕನಿಕಾ ಟೆಕ್ರಿವಾಲ್. ಆಕೆಯ ಬಗ್ಗೆ ಕೇಳಿದ್ರೆ ಎಂಥವರಿಗಾದರೂ ಉತ್ಸಾಹ ಪುಟಿಯುತ್ತೆ.

32 ರ ಹರೆಯದ ಕನಿಕಾ ಟೆಕ್ರಿವಾಲ್ ಇಂದು ಹತ್ತು ಖಾಸಗಿ ವಿಮಾನಗಳ ಒಡತಿ. ಈ ಸಾಧನೆಗೆ ಅವರ ಕನಸು ಹಾಗೂ ಅದನ್ನು ಸಾಕಾರಗೊಳಿಸಲು ಅವರು ಪಟ್ಟ ಶ್ರಮವೇ ಕಾರಣ. ಕನಿಕಾ ಅಪ್ಪಟ ಮಾರ್ವಾಡಿ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದವರು. ಇವರ ತಂದೆ ರಿಯಲ್ ಎಸ್ಟೇಟ್ ಹಾಗೂ ಕೆಮಿಕಲ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ದಕ್ಷಿಣ ಭಾರತದ ಬೋರ್ಡಿಂಗ್ ಸ್ಕೂಲ್ ನಲ್ಲಿ ಓದಿದ ಕನಿಕಾ ಎಂ ಬಿ ಎ ಪಧವೀದರೆ. ಕಳೆದ ಮೂರು ವರ್ಷಗಳ ಹಿಂದೆ ಖಾಸಗಿ ವಿಮಾನವನ್ನು ಜನರಿಗೆ ಒದಗಿಸುವ ನಿರ್ಧಾರ ಮಾಡಿ ಕನಿಕಾ ಹಾಗೂ ಆಕೆಯ ಸುಧೀರ್ ಪೆರ್ಲ ಜೆಟ್ ಸೆಟ್ ಗೋ ಎನ್ನುವ ಪ್ರೈವೆಟ್ ಜೆಟ್ ಸ್ಟಾರ್ಟ್ ಅಪ್ ನ್ನು ಹುಟ್ಟುಹಾಕಿದರು. ಸಾಕಷ್ಟು ಏಳು ಬೀಳುಗಳನ್ನು ಕಂಡ ಈ ಕಂಪನಿ, ಕೊನೆಗೆ ಮೂರೇ ವರ್ಷಗಳಲ್ಲಿ ದೇಶದ ಬಹುದೊಡ್ಡ ಪ್ರೈವೆಟ್ ಜೆಟ್ ಕಂಪನಿ ಎಂಬ ಹೆಸರನ್ನು ಗಳಿಸಿದೆ.

ಕನಿಕಾ ತಾನು ಉದ್ಯಮದಲ್ಲಿ ಮುಂದುವರೆಯಬೇಕು ಎಂದು ಕನಸುಕಂಡಾಗ ಆಕೆಗೆ ಕ್ಯಾಸ್ನರ್ ಇರುವುದು ಪತ್ತೆಯಾಗುತ್ತದೆ. ಹಾಗಾಗಿ ಚಿಕಿತ್ಸೆ ಮುಗಿಯುವವ್ರೆಗೂ ಆಕೆ ತನ್ನ ಕಂಪನಿ ಆರಂಭಿಸುವುದಕ್ಕೆ ಆಗುವುದಿಲ್ಲ. ಆದರೆ ಆಕೆ ತನಗೆ ಖಾಯಿಲೆ ಇದೆ ಎನ್ನುವವ ಕಾರಣಕ್ಕೆ ಜಗ್ಗಲಿಲ್ಲ. ಹಗಲಿರುಳೂ ತನ್ನ ಕೆಲಸದ ಬಗ್ಗೆ ಯೋಚಿಸಿ ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡರು. ಸ್ಕೆಚ್ ಬೋರ್ಡ್ ರೆಡಿ ಮಾಡಿ ಚಿಕಿತ್ಸೆಯ ನಂತರ ಜೆಟ್ ಸೆಟ್ ಗೋ ಕಂಪನಿಯನ್ನು ಆರಂಭಿಸಿಯೇ ಬಿಟ್ಟರು.

ಒಂದು ಖಾಸಗಿ ಫ್ಲೈಟ್ ನಲ್ಲಿ ಪ್ರಯಾಣಮಾದುವುದು ಅಂದರೆ ಜನಸಾಮಾನ್ಯರಿಗೆ ಸುಲಭವಲ್ಲ. ಯಾಕಂದರೆ ಇದರಲ್ಲಿ ಮಧ್ಯವರ್ತಿಗಳ ಕೈವಾಡ ಹೆಚ್ಚು ಹಾಗಾಗಿ ಖಾಸಗಿ ವಿಮಾನಗಳ ಪ್ರಯಾಣ ಅತ್ಯಂತ ದುಬಾರಿ. ಇದೇ ಅಂಶವನ್ನ ಮುಂದಿಟ್ಟುಕೊಂಡು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ, ಪಾರದರ್ಶಕ ಸರ್ವೀಸ್ ಕೊಡಲು ಕನಿಕಾ ನಿರ್ಧಾರ ಮಾಡುತ್ತಾರೆ. ’ಗ್ರಾಹಕರು ಬುಕ್ ಮಾಡಿದ ವಿಮಾನ ಕೊನೆಯ ಹಂತದಲ್ಲಿ ಇಂಜಿನ್ ಕಾರಣಕ್ಕೋ ಅಥವಾ ಇನ್ಯಾವುದೋ ಕಾರಣಕ್ಕೋ ಕ್ಯಾನ್ಸಲ್ ಆಗದ ರೀತಿಯಲ್ಲಿ ಬ್ಯಾಕ್ ಅಪ್ ಹೊಂದಿರುವುದೇ ನಮ್ಮ ದೊಡ್ಡ ಸ್ಟ್ರೆಂಥ್’ ಎನ್ನುತ್ತಾರೆ ಕನಿಕಾ. ಒಂದು ಐಷಾರಾಮಿ ಫೈಟ್ ಒಂದರಲ್ಲಿ ದೆಹಲಿಯಿಂದ ಮುಂಬೈಗೆ ಕೇವಲ ಹತ್ತು ಸಾವಿರ ರೂಪಾಯಿಗಳಾಲ್ಲಿ ಪ್ರಯಾಣಿಸಬಹುದು ಎಂದಾದರೆ ಅದಕ್ಕೆ ಕಾರಣ ಕನಿಕಾ ಟೆಕ್ರಿವಾಲ್!

ದೇಶದಲ್ಲಿ ಎಲಲ್ರಿಗೂ ಚಾರ್ಟರ್ಡ್ ವಿಮಾನದಲ್ಲಿ ಪ್ರಯಾಣ ಮಾಡುವುದು ಸುಲಭವಾಗಬೇಕು ಎನ್ನುವ ಕಾರಣಕ್ಕೆ ಆರಂಭವಾದ ಸ್ಟಾರ್ಟ್ ಅಪ್ ಜೆಟ್ ಸೆಟ್ ಗೋ. ಇಂದು ಹತ್ತು ಖಾಸಗಿ ವಿಮಾನಗಳನ್ನು ಹೊಂದಿರುವ ಈ ಕಂಪನಿ, ಅತ್ಯುತ್ತಮ ತಂತ್ರಜ್ಞಾನ, ಸ್ವಾರ್ಟ್ ಟೆಕ್ನಾಲಜಿ ಹಾಗೂ ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವತ್ತ ಗಮನಹರಿಸಿದೆ. ಹಾಗಾಗಿ ಒಬ್ಬ ಕನಿಕಾ ಕನಸು ಇಂದು ಖಾಸಗಿ ವಿಮಾನದಲ್ಲಿ ಜನರು ಸುಲಭವಾಗಿ ಪ್ರಯಾಣ ಮಾಡುವಂತೆ ಮಾಡಿದೆ ಎಂದರೆ ನಿಜಕ್ಕೂ ದೇಶಕ್ಕೆ ಹೆಮ್ಮೆಯ ವಿಷಯ!

Leave a Comment