ಗಂಡನ ಮನೆಯಲ್ಲಿ 19 ವರ್ಷ ವಯಸ್ಸಿನ ನವವಿವಾಹಿತೆಯ ಅನುಮಾನಾಸ್ಪದ ಸಾ ವು! ಕೈ ಮೇಲೆ ಗಾಯ ಬಲಕಿವಿ ಮಾಯ

ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಮನೆಯವರನ್ನು ಎದುರು ಹಾಕಿಕೊಂಡು ಪ್ರೀತಿಸಿ ಮದುವೆಯಾಗೋದು, ನಂತರ ಗಂಡನ ಮನೆಗೆ ಹೋಗಿ ಎಡವಟ್ಟು ಮಾಡಿಕೊಳ್ಳುವುದು. ಇಂತಹ ಘಟನೆಗಳು ದಿನೇ ದಿನೇ ಹೆಚ್ಚುತ್ತಿವೆ. ನಮ್ಮ ರಾಜ್ಯದಲ್ಲಿ ಕೂಡ ಇಂಥ ಘಟನೆಗಳು ಹೆಚ್ಚಾಗಿ ಕಂಡು ಬರುತ್ತಿವೆ. ಚಿಕ್ಕಬಳ್ಳಾಪುರದಲ್ಲಿ ಓದುವ ವಯಸ್ಸಿನ ಹುಡುಗಿ ಮದುವೆಯಾಗಿ ಗಂಡನ ಮನೆಗೆ ಹೋಗಿ ಅನುಮಾನಾಸ್ಪದವಾಗಿ ಜೀವ ಕಳೆದುಕೊಂಡಿರುವ ಘಟನೆ ನಡೆದಿದೆ. ಈ ಘಟನೆ ತುಂಬಾ ನಿಗೂಢ ಮತ್ತು ಅನುಮಾನಸ್ಪದ ಅಂಶಗಳಿಗೆ ಎಡೆಮಾಡಿಕೊಡುತ್ತಿದೆ.

ಅನುಷಾ ಎಂಬ ಹುಡುಗಿ ವಿಷ್ಣುಪ್ರಿಯ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದಳು. ಒಂದು ವರ್ಷದ ಹಿಂದೆ ಇವಳಿಗೆ 18 ವರ್ಷ ವಯಸ್ಸು. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಲು ಹೋದ ಅನುಷಾಗೆ ಅಭಿಷೇಕ್ ಎಂಬುವನ ಮೇಲೆ ಲವ್ವಾಗುತ್ತೆ. ನಂತರ ಒಂದೇ ವರ್ಷದಲ್ಲಿ ಇಬ್ಬರು ಮದುವೆಯಾಗೋಕೆ ನಿರ್ಧಾರ ಮಾಡುತ್ತಾರೆ. ಮನೆಯವರ ವಿರೋಧವಿದ್ದರೂ ಕೂಡ ಮನೆಯವರನ್ನು ಸಮಾಧಾನ ಮಾಡಿ ಹಾಗೂ ಹೀಗೂ ಹರಸಾಹಸ ಮಾಡಿ ಇಬ್ಬರೂ ಮದುವೆಯಾಗುತ್ತಾರೆ. ಅನುಷಾ ವ್ಯಾಸಂಗ ಮಾಡುತ್ತಿರುವ ಸಮಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾಳೆ.

ಮದುವೆಯಾದ ಮೇಲೆ ಕೂಡ ‍ಅನುಷಾ ಬಿಬಿಎಂ ಕಾಲೇಜಿಗೆ ಹೋಗಿ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಳು. ಒಂದು ವರ್ಷಗಳ ಕಾಲ ಇವರ ದಾಂಪತ್ಯ ಜೀವನದಲ್ಲಿ ಏನಾಯಿತೋ ಏನೋ ಗೊತ್ತಿಲ್ಲ. ಅನುಷಾ ಇದ್ದಕ್ಕಿದ್ದಂತೆ ತನ್ನ ತನ್ನ ಮನೆಯ ಕೋಣೆಯಲ್ಲಿ ನೇ ಣು ಬಿಗಿದುಕೊಂಡು ಜೀವವನ್ನು ಕಳೆದುಕೊಂಡಿದ್ದಾಳೆ. ಈ ದಂಪತಿಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂಬ ಮಾಹಿತಿ ಕೂಡ ಕೇಳಿಬರುತ್ತಿದೆ. ಆದರೆ ಅನುಷಾಳ ಸಾ’ವು’ ನಿಜಕ್ಕೂ ಅನುಮಾನಾಸ್ಪದವಾಗಿದೆ ಯಾಕೆಂದರೆ ಇದು ಸಾಮಾನ್ಯವಾದ ಕೇಸ್ ಅಲ್ಲವೇ ಅಲ್ಲ.

ಅನುಷಾ ತನ್ನ ಜೀವವನ್ನೇ ತೆಗೆದುಕೊಂಡ ಮೇಲೆ ಅನುಷಾಳ ಗಂಡ ಹೋಗಿ ಪೊಲೀಸ್ ದೂರನ್ನು ದಾಖಲು ಮಾಡಿದ್ದಾನೆ. ಮನೆಗೆ ಬಂದು ಪರಿಶೀಲನೆ ಮಾಡಿದ ಪೊಲೀಸರಿಗೆ ಅಚ್ಚರಿಯ ಸಂಗತಿ ಕಾದಿತ್ತು. ಇಹಲೋಕ ತ್ಯಜಿಸಿದ ಅನುಷಾಳ ದೇಹದ ಭಾಗಗಳಲ್ಲಿ ಅನುಮಾನಾಸ್ಪದ ಗಾಯಗಳು ಕಂಡು ಬಂದವು. ಅಷ್ಟೇ ಅಲ್ಲದೆ ನೇ’ಣು’ಬಿಗಿದುಕೊಂಡ ಅನುಷಾಳ ಬಲಗಿವಿ ಕಟ್ ಆಗಿತ್ತು . ಮತ್ತು ಅನುಷಾಳ ಕಟ್ ಆದ ಬಲಗಿವಿ ಎಲ್ಲಿ ಹುಡುಕಿದರೂ ಸಿಗಲಿಲ್ಲ.

ಈ ಎಲ್ಲಾ ಘಟನೆಗಳನ್ನು ಪರಿಶೀಲನೆ ಮಾಡಿದಮೇಲೆ ಅನುಷಾಳ ಪಾಲಕರು ಅನುಷಾಳ ಗಂಡನ ಮೇಲೆ ಅನುಮಾನ ಹೊರಹಾಕಿದ್ದಾರೆ. ಅನುಷಾಳ ಈ ಸ್ಥಿತಿಗೆ ಅನುಷಾಳ ಗಂಡ ಅಭಿಷೇಕನೇ ಕಾರಣ. ಅಭಿಷೇಕ್ ವರದಕ್ಷಿಣೆ ಕೊಡು ಎಂದು ತನ್ನ ಮಗಳಿಗೆ ಕಿ’ರು’ಕುಳ ಕೊಟ್ಟಿದ್ದಾನೆ ಎಂದು ಪಾಲಕರು ದೂರು ದಾಖಲು ಮಾಡಿದ್ದಾರೆ. ಇನ್ನೊಂದು ಕಡೆ ಪೊಲೀಸರು ಅಭಿಷೇಕ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅನುಷಾಳ ಈ ಸ್ಥಿತಿಗೆ ಅಭಿಷೇಕ್ ನೇ ಕಾರಣ ಎಂಬುದು ಇನ್ನೂ ಖಚಿತವಾಗಿಲ್ಲ.

Leave a Comment