ಚಿಕನ್ ಶವರ್ಮ ತಿಂದು ದೇವರ ಪಾದ ಸೇರಿಕೊಂಡ 16 ವರ್ಷದ ಬಾಲಕಿ. ಈಕೆಯ ಸಾ’ವಿ’ನ ನಂತರ ತಿಳಿದುಬಂತು ಸ್ಫೋ’ಟ’ಕ ಮಾಹಿತಿ

ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನಬೇಕಾದರೆ ತುಂಬಾ ಜಾಗರೂಕತೆಯಿಂದ ಇರಬೇಕಾಗುತ್ತದೆ ನಾವು ಯಾವ ರೆಸ್ಟೋರೆಂಟ್ಸ್ ಹೋಗುತ್ತಿದ್ದೀವಿ ಅಲ್ಲಿನ ಫುಡ್ ಕ್ವಾಲಿಟಿ ಹೇಗಿರುತ್ತೆ..ಅಲ್ಲಿ ಕೆಲಸ ಮಾಡುವ ಜನ ಹೇಗಿದ್ದಾರೆ ಎಂಬುದನ್ನು ಮುಂಚೆಯೇ ತಿಳಿದುಕೊಂಡು ಹೋಗಬೇಕಾಗುತ್ತದೆ. ಮೊನ್ನೆ ಮೊನ್ನೆಯಷ್ಟೇ ಕೇರಳದಲ್ಲಿ ಚಿಕ್ಕ ಬಾಲಕ ಪರೋಟ ತಿಂದು ಅಸ್ವಸ್ಥಗೊಂಡು ಜೀವ ಕಳೆದುಕೊಂಡ ಸುದ್ದಿ ನಾವೆಲ್ಲ ಕೇಳಿದ್ದೆವು ಇದೀಗ ಕೇರಳದ 16 ವರ್ಷದ ಬಾಲಕಿ ಚಿಕನ್ ಶವರ್ಮ ತಿಂದು ಇಹಲೋಕ ತ್ಯಜಿಸಿರುವ ಘಟನೆ ಬೆಳಕಿಗೆ ಬಂದಿದೆ.

ಕೇರಳ ರಾಜ್ಯದ ಕಣ್ಣೂರು ಮೂಲದ ದೇವಾನಂದಾ ಎಂಬ 16 ವರ್ಷದ ಹುಡುಗಿ ಕಣ್ಣೂರ್ ಸರ್ಕಾರಿ ಶಾಲೆಯಲ್ಲಿ ಹತ್ತನೆ ತರಗತಿ ಓದುತ್ತಿದ್ದಳು. ಭಾನುವಾರ ಮೇ ೧ ರಂದು ದೇವಾನಂದಾ ತನ್ನ 16 ಜನ ಸ್ನೇಹಿತರೊಂದಿಗೆ ಉಪಹಾರ ಮಾಡಲು ಚೆರುವತ್ತೂರು ಪಟ್ಟಣದ ರೆಸ್ಟೋರೆಂಟ್ ಗೆ ಹೋಗಿದ್ದಳು. ಆಗ ದೇವಾನಂದಾ ಮತ್ತು ಸ್ನೇಹಿತರೆಲ್ಲರೂ ಸೇರಿ ಚಿಕನ್ ಶವರ್ಮ ಆರ್ಡರ್ ಮಾಡಿ ತಿಂದಿದ್ದಾರೆ. ಶವರ್ಮ ತಿಂದ ದೇವಾನಂದ ಮತ್ತು ಅವಳ ಹದಿನಾರು ಸ್ನೇಹಿತರಲ್ಲಿ ಕೂಡ ಕೆಲವೇ ಗಂಟೆಗಳಲ್ಲಿ ಅನಾರೋಗ್ಯ ಕಾಣಿಸಿಕೊಂಡಿತ್ತು.

ದೇವಾನಂದಾ ಗೆ ಜೋರಾಗಿ ಜ್ವರ ಭೇದಿ ವಾಂತಿ ಕಾಣಿಸಿಕೊಂಡಿದ್ದು ತಕ್ಷಣವೇ ಮನೆಯವರು ಇವಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾಳೆ. ಆಹಾರದ ಏರುಪೇರಿನಿಂದಲೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ವರದಿ ನೀಡಿದ್ದರು. ಆದರೆ ಯಾವ ಆಹಾರದಿಂದ ಆರೋಗ್ಯ ದಲ್ಲಿ ಏರುಪೇರು ಉಂಟಾಗಿ ತಮ್ಮ ಮಗಳನ್ನು ಕಳೆದುಕೊಂಡೆವು ಅ೦ತ ದೇವಾನಂದಳ ಮನೆಯವರಿಗೆ ಆ ಕ್ಷಣ ತಿಳಿಯಲಿಲ್ಲ. ಆದರೆ ಅದೇ ದಿನ ಸಂಜೆಯ ಹೊತ್ತಿಗೆ ದೇವಾನಂದಾ ಮನೆಯವರಿಗೆ ಇನ್ನೊಂದು ಶಾಕಿಂಗ್ ನ್ಯೂಸ್ ತಿಳಿಯುತ್ತೆ.

ಅದೇನೆಂದರೆ ದೇವನಂದಾಳ ಜೊತೆಗೆ ರೆಸ್ಟೋರೆಂಟ್ ಗೆ ಹೋಗಿದ್ದ ಹದಿನಾರು ಸ್ನೇಹಿತರಿಗೆ ಕೂಡ ಆರೋಗ್ಯದಲ್ಲಿ ಅಸ್ತವ್ಯಸ್ತವಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಅಂತ . ಆ ಕ್ಷಣ ಅವರಿಗೆ ರೆಸ್ಟೋರೆಂಟ್ ನ ಆಹಾರದಿಂದಲೇ ತನ್ನ ಮಗಳನ್ನು ಕಳೆದುಕೊಂಡೆವು ಎಂಬ ಅರಿವಾಗುತ್ತದೆ. ತಕ್ಷಣ ಊರಿನವರೆಲ್ಲ ಸೇರಿ ಕೊಂಡು ಈ ರೆಸ್ಟೋರೆಂಟ್ ಮೇಲೆ ಕೇಸ್ ದಾಖಲು ಮಾಡಿದ್ದಾರೆ. ತನಿಖೆ ನಡೆಸಿದಾಗ ಪೊಲೀಸರು ರೆಸ್ಟೋರೆಂಟ್ ನ ಕೆಲಸಗಾರರಾದ ಸಂದೇಶ ಮತ್ತು ಅನಿಕ್ಸ್ ಎಂಬುವರನ್ನು ತನಿಖೆಗೆ ಒಳಪಡಿಸಿದರು.

ತೀವ್ರವಾದ ತನಿಖೆಯ ನಂತರ ಆ ಒಂದು ರೆಸ್ಟೋರೆಂಟ್ ಆಹಾರ ಸುರಕ್ಷತೆಯ ಲೈಸನ್ಸ್ ಹೊಂದಿಲ್ಲ ಎಂಬುದು ಬೆಳಕಿಗೆ ಬಂದಿದೆ. ಈ ರೆಸ್ಟೋರೆಂಟ್ ನ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಪುಟ್ಟ ಜೀವ ಬ’ಲಿ’ಯಾಗಿದೆ. ಮೃ’ತ’ ಪಟ್ಟ ಬಾಲಕಿ ದೇವಾನಂದಾ ತಾಯಿಗೆ ಒಬ್ಬಳೇ ಮಗಳಾಗಿದ್ದಳು. 6 ತಿಂಗಳ ಹಿಂದೆಯಷ್ಟೇ ತನ್ನ ತಂದೆಯನ್ನು ಕಳೆದುಕೊಂಡಿದ್ದಳು. ತಂದೆಯನ್ನು ಕಳೆದುಕೊಂಡ ಮೇಲೆ ತಾಯಿ ಜೊತೆ ದೇವಾನಂದ ಅತ್ತೆಯ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಇದೀಗ ತಾಯಿಯನ್ನು ಒಂಟಿಯಾಗಿ ಬಿಟ್ಟು ದೇವಾನಂದಾ ಕೂಡ ದೇವರ ಪಾದ ಸೇರಿದ್ದಾಳೆ. ಸ್ನೇಹಿತರೇ, ದಯವಿಟ್ಟು ನೀವು ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನುವುದು ಕ್ಕಿಂತಲೂ ಮುಂಚೆ ಆ ಹೋಟೆಲ್ ನ ಗುಣಮಟ್ಟ ಮತ್ತು ಆಹಾರದ ಸುರಕ್ಷತೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮ.

Leave a Comment