ರಾಜ್ಯದಿಂದ ಹಿಡಿದು ದೇಶ ಮಟ್ಟದವರೆಗೂ ಈ ಸಿನಿಮಾದ ಚರ್ಚೆಯೇ ಮುನ್ನುಡಿಯಲ್ಲಿದೆ. ಸೆಲೆಬ್ರಿಟಿಗಳಿಂದ ಹಿಡಿದು ದೇಶದ ದೊಡ್ಡ ದೊಡ್ಡ ನಾಯಕರು ಸಹ ಈ ಸಿನಿಮಾದ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡುತ್ತಿದ್ದಾರೆ. ಯಾವುದೇ ದೊಡ್ಡ ನಟರನ್ನು ಒಳಗೊಂಡಿರದೆ ಕೇವಲ ಕಲೆ ಮತ್ತು ಚಿತ್ರಕತೆ ಸಂಭಾಷಣೆಯ ಮೂಲಕ ಜನರ ಮನಸ್ಸನ್ನು ಗೆದ್ದಿರುವ ಈ ಚಿತ್ರ ಇದೀಗ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಈ ಸಿನಿಮಾವನ್ನು ನೋಡಿ ಪ್ರತಿಯೊಬ್ಬರು ಈ ಸಿನಿಮಾವನ್ನು ಪ್ರತಿಯೊಬ್ಬರೂ ಕೂಡ ನೋಡಲೇಬೇಕು ಎಂದು ಹೇಳುತ್ತಿದ್ದಾರೆ.
ಹಾಗೆ ಇದು ಕೇವಲ ಸಿನಿಮಾವಲ್ಲ ಇದು ಪ್ರತಿಯೊಬ್ಬ ಭಾರತೀಯನ ಭಾವನೆಯನ್ನು ಟಚ್ ಮಾಡುವ ಭಾವಚಿತ್ರ. ಈ ಚಿತ್ರದ ಕ್ಲೈಮ್ಯಾಕ್ಸ್ ನೋಡಿದ ನಂತರ ಎಷ್ಟೇ ಕಲ್ಲು ಮನಸಿದ್ದರೂ ಕೂಡ ಮನುಷ್ಯ ಅತ್ತೆ ಬಿಡುತ್ತಾನೆ. 1990 ರಲ್ಲಿ ಕಾಶ್ಮೀರ ಪಂಡಿತರ ಮೇಲೆ ಮು ಸ್ಲಿಮರಿಂದ ದೌ’ರ್ಜನ್ಯಗಳನ್ನು ಎಳೆಎಳೆಯಾಗಿ ಈ ಚಿತ್ರದಲ್ಲಿ ಬಿಚ್ಚಿಟ್ಟಿದ್ದಾರೆ. ಕಾಶ್ಮೀರಿ ಪಂಡಿತರು ಆ ದಿನಗಳಲ್ಲಿ ಪಟ್ಟ ಕಷ್ಟಗಳನ್ನು ಈ ಚಿತ್ರದಲ್ಲಿ ತೋರಿಸಿರುವ ಪರಿ ನೋಡಿದರೆ ನಮ್ಮ ಮನಸ್ಸು ಚುರ್ ಅನ್ನುತ್ತದೆ.
ಸ್ನೇಹಿತರೆ, ಈ ಚಿತ್ರ ದ ಹೆಸರು ಕಾಶ್ಮೀರ ಫೈಲ್ಸ್. ಇದು ಮೂಲತಃ ಹಿಂದಿ ಭಾಷೆಯ ಚಿತ್ರ. ಈ ಚಿತ್ರ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಿಲ್ಲ ನಾವೇಕೆ ಈ ಚಿತ್ರವನ್ನು ನೋಡಬೇಕು ಎಂದು ಪ್ರಶ್ನೆ ಮಾಡುವವರಿಗೆ ಕಿರಿಕ್ ಕೀರ್ತಿ ಮತ್ತು ಒಳ್ಳೆ ಹುಡುಗ ಪ್ರಥಮ್ ಅವರು ತಕ್ಕ ಉತ್ತರ ನೀಡಿದ್ದಾರೆ. ನಮಗೆ ಸ್ವಾತಂತ್ರ್ಯ ಸಿಕ್ಕಿ ಸುಮಾರು ನಲವತ್ತು ವರ್ಷ ಕಳೆದ ಮೇಲೆ ಇಂತಹದ್ದೊಂದು ಘಟನೆ ಕಾಶ್ಮೀರದಲ್ಲಿ ನಡೆದಿದೆ ಎನ್ನುವುದು ಹಲವರಿಗೆ ಗೊತ್ತಿಲ್ಲ. ಈ ಘಟನೆ ನಡೆದಿರುವುದು ನಿಜಕ್ಕೂ ತಲೆ ತಗ್ಗಿಸುವಂತಹ ಕೆಲಸ.
ಕಾಶ್ಮೀರ ಪಂಡಿತರಿಗೆ ಆಗಿರುವ ಅನ್ಯಾಯಕ್ಕೆ ತಕ್ಕ ನ್ಯಾಯ ಸಿಗಲೇಬೇಕು. ಒಂದು ಸಿನಿಮಾದ ಮೂಲಕ ನಮ್ಮ ದೇಶದ ಇತಿಹಾಸವನ್ನು ತಿಳಿದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆಯೆಂದರೆ ಇದು ನಮಗೆಲ್ಲಾ ಅವಮಾನ. ನಮ್ಮ ಶಾಲೆಯ ಪಠ್ಯಪುಸ್ತಕದಲ್ಲಿ ಇರಬೇಕಾದದ್ದು ಇದು. ನೀವು ನಿಮ್ಮ ಕುಟುಂಬದವರ ಜೊತೆ ಹೋಗಿ ಈ ಸಿನಿಮಾವನ್ನು ಇತಿಹಾಸವನ್ನು ತಿಳಿದುಕೊಂಡು ಪ್ರತಿಯೊಬ್ಬರೂ ಈ ಸಿನಿಮಾವನ್ನು ನೋಡಿ ಇಂದು ಕಿರಿಕ್ ಕೀರ್ತಿ ಅವರು ಒತ್ತಾಯಿಸಿದ್ದಾರೆ. ಪ್ರಥಮ್ ಅವರು ಕೂಡ ತಮ್ಮದೇ ಆದ ಶೈಲಿಯಲ್ಲಿ ಈ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ…
ದಯವಿಟ್ಟು ಬಂದು ಈ ಸಿನಿಮಾವನ್ನ ನೋಡಿ ಬುದ್ಧಿ ಕಲಿತುಕೊಳ್ಳಿ ನೀವು ಈ ಸಿನಿಮಾವನ್ನು ನೋಡದಿದ್ದರೆ ಭಾರತೀಯನೇ ಅಲ್ಲ. ನೀವೇನಾದ್ರೂ ಹಿಂ ದು ಆದ್ರೆ ಈ ಸಿನಿಮಾ ನೋಡದಿದ್ದರೆ ನೀವು ಹಿಂ’ದುನೇ ಅಲ್ಲ.ಬೇಕಾದ್ರೆ ನಾನು ದುಡ್ಡು ಕೊಡ್ತೆನೆ. ಬಂದು ಸಿನೆಮಾ ನೋಡ್ರಯ್ಯ ..ನಮಗೆಲ್ಲಾ ಹಿಟ್ಲರ್ ಗೊತ್ತು ಆದರೆ ನಮ್ಮ ದೇಶದಲ್ಲಿಯೇ ಹಿಟ್ಲರ್ ಗಳ ಬಗ್ಗೆ ನಮಗೆಲ್ಲ ತಿಳಿದಿಲ್ಲ. ನಮ್ಮ ದೇಶದಲ್ಲಿ ನಡೆದ ದುಃಖದ ರ ಇತಿಹಾಸವೊಂದನ್ನು ಈ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ತೋರಿಸಿದ್ದಾರೆ. ಈ ಸಿನಿಮಾ ನೋಡಿ ಬುದ್ಧಿ ಕಲಿತಿರಿ.. ಇಲ್ಲಾ ಅಂದ್ರೆ ನಿಮ್ಮ ಹಣೆಬರಹ ಇಷ್ಟೇ ಎಂದು ಪ್ರಥಮ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.