RBI) 2021-22ನೇ ಸಾಲಿನ ನೇಮಕಾತಿ ಆರಂಭಿಸಿ ಸೆಕ್ಯೂರಿಟಿ ಗಾರ್ಡ್ ಉದ್ಯೋಗಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದ್ದು, ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಇಂದಿನಿಂದ ಆನ್‌ಲೈನ್ ಅಪ್ಲಿಕೇಶನ್ ಸ್ವೀಕೃತಿ ಆರಂಭವಾಗಿದೆ. ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಫೀಶಿಯಲ್ ವೆಬ್‌ಸೈಟ್ rbi.org.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು ಏನು? ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಯಾವುದು? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಪ್ರಕಟಣೆ ಹೊರಡಿಸಿರುವ ಸಂಸ್ಥೆಯ ಹೆಸರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ). ಇಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳು 241 ಹಾಗೂ ಉದ್ಯೋಗ ಸ್ಥಳ ಎಲ್ಲಿ ಎಂದು ನೋಡುವುದಾದರೆ ಭಾರತದೆಲ್ಲೆಡೆಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಫೆಬ್ರವರಿ 12, 2021. ಅರ್ಹ ಮಾಜಿ ಸೈನಿಕ ಅಭ್ಯರ್ಥಿಗಳು RBI ಸೈಟ್‌ನಲ್ಲಿ ದಿನಾಂಕ 22-01-2021 ರಿಂದ 12-02-2021 ರವರೆಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಪ್ರಕ್ರಿಯೆ ಮೂಲಕ 241 ಸೆಕ್ಯೂರಿಟಿ ಗಾರ್ಡ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್ ಟೆಸ್ಟ್ ನಡೆಸಿ ಆಯ್ಕೆ ಮಾಡಲಾಗುತ್ತದೆ. ಕೆಟಗರಿ ಮತ್ತು ಹುದ್ದೆಗಳ ಸಂಖ್ಯೆ ನೋಡುವುದಾದರೆ, ಒಬಿಸಿ113 ಹುದ್ದೆಗಳು
ಒಬಿಸಿ 45 ಇಡಬ್ಲ್ಯೂಎಸ್ 18, ಎಸ್‌ಸಿ 32 ಎಸ್‌ಟಿ 33 ಹುದ್ದೆಗಳು ಖಾಲಿ ಇವೆ.
ಇನ್ನೂ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೊಂದಿರಬೇಕಾದ ಮುಖ್ಯ ಅರ್ಹತೆಗಳು ಎನು ಎಂದು ನೋಡುವುದಾದರೆ ಅರ್ಜಿ ಸಲ್ಲಿಸುವವರು ಮಾಜಿ ಸೈನಿಕ ಅಭ್ಯರ್ಥಿಗಳಾಗಿರಬೇಕು. 10ನೇ ತರಗತಿ ಪಾಸ್ ಮಾಡಿರಬೇಕು. ಅಭ್ಯರ್ಥಿಗೆ ಜನವರಿ 01, 2021 ಕ್ಕೆ 25 ವರ್ಷ ಮೀರಿರಬಾರದು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆ ಮಾದರಿ ಈ ಕೆಳಗಿನಂತಿರುತ್ತದೆ.
ವಿಷಯ ಪ್ರಶ್ನೆಗಳ ಸಂಖ್ಯೆ ಒಟ್ಟು ಅಂಕಗಳು
ರೀಸನಿಂಗ್ 40, ಜೆನೆರಲ್ ಇಂಗ್ಲಿಷ್ 30
ನ್ಯೂಮೆರಿಕಲ್ ಎಬಿಲಿಟಿ 30,
ಒಟ್ಟು100
ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಫಿಸಿಕಲ್ ಟೆಸ್ಟ್‌ಗೆ ಹಾಜರಾಗಬೇಕು ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ರೂ.50 ಶುಲ್ಕ ಪಾವತಿಸಬೇಕು ವಿದ್ಯಾರ್ಹತೆ ಅಭ್ಯರ್ಥಿಗಳು ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶದಿಂದ ಮಾನ್ಯತೆ ಪಡೆದಿರುವ ವಿದ್ಯಾ ಸಂಸ್ಥೆಯಿಂದ 10ನೇ ತರಗತಿಯಲ್ಲಿ ಪಾಸಾಗಿರಬೇಕು. ವಯೋಮಿತಿ ಕನಿಷ್ಠ 25 ವರ್ಷ ಹಾಗೂ ಗರಿಷ್ಠ 45 ವರ್ಷ ವಯಸ್ಸು ಆಗಿರಬೇಕು ಅದೂ ಈಗ ಜನವರಿ 01, 2021ರ ಅನ್ವಯ.
ಹುದ್ದೆಯ ಹೆಸರು: ಸೆಕ್ಯೂರಿಟಿ ಗಾರ್ಡ್
ವಿವರ ಆರ್‌ಬಿಐ ಅಧಿಸೂಚನೆ
ಉದ್ಯೋಗ ವಿಧ Full Time
ಉದ್ಯೋಗ ಕ್ಷೇತ್ರ ಬ್ಯಾಂಕ್ ವಲಯ
ವೇತನ ವಿವರ INR 10,940
ಕೌಶಲ ಮತ್ತು ಶೈಕ್ಷಣಿಕ ಅರ್ಹತೆ
ಕೌಶಲ:ಕಾರ್ಯಾನುಭವ 0 Years
ನೇಮಕಾತಿ ಸಂಸ್ಥೆಸಂಸ್ಥೆಯ ಹೆಸರು ಭಾರತೀಯ ರಿಸರ್ವ್ ಬ್ಯಾಂಕ್
ಅರ್ಜಿ ಶುಲ್ಕ 50 ರೂಪಾಯಿ.
ಪ್ರಮುಖ ದಿನಾಂಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ 22/01/2021ಅರ್ಜಿ ಸಲ್ಲಿಸಲು ಕೊನೆ ದಿನಾಂಕ 12/02/2021 ಆಗಿರುತ್ತದೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ನೋಡುವುದಾದರೆ ಆರ್ ಬಿಐ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಹುದ್ದೆಯನ್ನು ಆಯ್ಕೆ ಮಾಡಿಕೊಂಡು ಅರ್ಜಿ ಭರ್ತಿ ಮಾಡಿ ಅರ್ಜಿ ಸಲ್ಲಿಸಿ. ವೆಬ್‌ಸೈಟ್ ವಿಳಾಸhttps://www.rbi.org.in/home.aspx