ಬಡತನವನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿಯಾದ ದಿನಸಿ ವ್ಯಾಪಾರಿಯ ಮಗಳು

ಜೀವನದಲ್ಲಿ ಸಾಧನೆ ಮಾಡುವ ಛಲ ಹಠ ಇದ್ರೆ ಖಂಡಿತ ಯಶಸ್ಸಿನ ದಾರಿಯನ್ನು ಮುಟ್ಟಬಹದು ಎಂಬುದನ್ನು ಈ ಮಹಿಳೆ ತೋರಿಸಿಕೊಟ್ಟಿದ್ದಾರೆ, ಅಷ್ಟೇ ಅಲ್ಲದೆ ಹೆಣ್ಣು ಮನಸ್ಸು ಮಾಡಿರೆ ಯಾವ ಕ್ಷೇತ್ರದಲ್ಲೂ ಕೂಡ ಯಶಸ್ಸಿನ ಹಾದಿಯನ್ನು ಮುಟ್ಟಬಲ್ಲಳು ಅನ್ನೋದನ್ನ ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿರುವಂತ ಸಾಧನೆಗಳು ಕಣ್ಣ ಮುಂದೆ ಇವೆ. ಮನೆಯಲ್ಲಿ ಬಡತನವಿದ್ದರೂ ಆರ್ಥಿಕ ಪರಿಸ್ಥಿತಿ ಕಾಡುತ್ತಿದ್ದರು ಕೂಡ ತಂದೆಯ ಆಸೆಯಂತೆ ದೊಡ್ಡ ಹುದ್ದೆಯನ್ನು ಸ್ವೀಕರಿಸಿದ ಹೆಣ್ಣುಮಗಳು. ಸಮಾಜಕ್ಕಾಗಿ ಹಾಗೂ ಬಡ ಜನರಿಗಾಗಿ ಕೆಲಸ ಮಾಡಬೇಕು ಅನ್ನೋ ಸಿದ್ದಂತವನ್ನು ತೋರಿಸಿದ ತಂದೆ ಇವುಗಳನ್ನು ತಿಳಿದ ಮಗಳು ತಂದೆಯ ಆಸೆಯನ್ನು ಯಶಸ್ಸಿನ ಹಾದಿಯ ಮೂಲಕ ತೋರಿಸಿದ್ದಾರೆ.

ಅಷ್ಟಕ್ಕೂ ಈ ಮಹಿಳೆ ಯಾರು ಮೂಲತಃ ಎಲ್ಲಿಯವರು ಅನ್ನೋದನ್ನ ಈ ಮೂಲಕ ತಿಳಿಯೋಣ ಒಬ್ಬ ಸಾಮಾನ್ಯ ಕಿರಾಣಿ ಅಂಗಡಿಯವರ ಮಗಳು ಆಗಿರುವಂತ ಇವರ ಹೆಸರು ಶ್ವೇತ ಅಗರ್ವಾಲ್ ಎಂಬುದಾಗಿ 2015 ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 19 ನೇ ರ್ಯಾಂಕ್ ಪಡೆಯುವ ಮೂಲಕ ಐಎಎಸ್ ಅಧಿಕಾರಿಯಾಗಬೇಕೆಂಬ ತನ್ನ ಕನಸನ್ನು ನೆನೆಸು ಮಾಡಿಕೊಂಡಂತ ಮಹಿಳೆ. ಮತ್ತೊಂದು ವಿಶೇಷತೆ ಏನು ಅನ್ನೋದನ್ನ ಹೇಳುವುದಾದರೆ ಶ್ವೇತ ಅವರು ಯುಪಿಎಸ್ಸಿಯ ಮಹಿಳಾ ಮೂರೂ ಟಾಪರ್ ಗಳಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ.

ಇನ್ನು ಶ್ವೇತ ಅವರ ವಿದ್ಯಾಭ್ಯಾಸ ಹೇಗಿತ್ತು ಅನ್ನೋದನ್ನ ನೋಡುವುದಾದರೆ ಶ್ವೇತಾ ಅವರ ವಿದ್ಯಾಭ್ಯಾಸಕ್ಕೆ ತಂದೆ ಹಲವು ಬಾರಿ ಕೋಲಿ ಕೆಲಸ ಮಾಡಿ ಮಗಳನ್ನು ಓದಿಸಿದ್ದಾರೆ. ಹೀಗೆ ಮನೆಯಲ್ಲಿ ಒಂದು ದಿನ ತುಂಬಾನೇ ಕಷ್ಟದ ಪರಿಸ್ಥಿತಿ ಬಂದಾಗ ಶ್ವೇತಾ ಅವರನ್ನು ಶಾಲೆ ಬಿಟ್ಟು ಬಿಡು ನಿನಗೆ ವಿದ್ಯಾಭ್ಯಾಸ ಕೊಡಿಸುವುದು ಸುಮ್ಮನೆ ವ್ಯರ್ಥ ಎಂಬುದಾಗಿ ಹೇಳಿದ್ದರು, ಇದರಿಂದ ಹಿಂಜರಿಯದ ಶ್ವೇತಾ ನಾನು ನಿಮ್ಮ ತಲೆ ತಗ್ಗಿಸುವಂತೆ ಎಂದಿಗೂ ಮಾಡುವುದಿಲ್ಲ. ನಾನು ಈ ಕುಟುಂಬದ ಮೊದಲ ಪದವೀಧರೆಯಾಗುತ್ತೇನೆ ಎಂದು ತಂದೆ-ತಾಯಿಯಲ್ಲಿ ಹೇಳಿದಂತೆ ಪದವೀಧರೆಯಾದರು

ಸ್ವೀಟ ಅವರು ತಮ್ಮ ವಿದ್ಯಾಭ್ಯಾಸದ ಕುರಿತಾಗಿ ಪದವಿಯಲ್ಲಿ ಉತ್ತಮ ರಾಂಕ್ ನಲ್ಲಿ ಪಾಸು ಮಾಡಿದ ಶ್ವೇತಾ ಅವರು ಬಳಿಕ MBA ಮಾಡಿ ಅಂತರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತ ಐಎಎಸ್‌ಗಾಗಿ ತಯಾರಿ ನಡೆಸಿದ್ದರು. ಎರಡು ಪ್ರಯತ್ನಗಳಲ್ಲಿ UPSC ಪಾಸು ಮಾಡಿದ್ದರೂ ಐಎಎಸ್ ಸಿಗಲಿಲ್ಲ. ಆದರೆ ಅದರಿಂದ ವಿಚಲಿತರಾಗದೆ ಮತ್ತು ಅಷ್ಟಕ್ಕೇ ತೃಪ್ತಿಯಾಗದೆ ಐಎಎಸ್ ಅಧಿಕಾರಿಯಾಗಬೇಕೆಂಬ ಕನಸನ್ನು ಕೈ ಬಿಡದೆ ಮೂರನೆಯ ಪ್ರಯತ್ನದಲ್ಲಿ 19ನೇ ರ‍್ಯಾಂಕ್‌ನೊಂದಿಗೆ ಪಾಸ್ ಮಾಡಿ ಪ್ರಸ್ತುತ ಐಎಎಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ, ಅದೇನೇ ಇರಲಿ ಸಾಧಿಸುವ ಶ್ರಮ ಇದಾರೆ ಖಂಡಿತ ಯಸ್ಸಸ್ಸು ಅನ್ನೋದು ಸಿಕ್ಕೇ ಸಿಗುತ್ತದೆ. ಇವರ ಈ ಜೀವನ ಕಥೆ ಬಹಳಷ್ಟು ಜನ ಯುವಕ ಯುವತಿಯರಿಗೆ ಸ್ಪೂರ್ತಿಯಾಗುತ್ತದೆ ಅಂದರೆ ನಿಜಕ್ಕೂ ತಪ್ಪಾಗಲಾರದು.

Leave a Comment