ಓದಿದ್ದು ಬರಿ ಹತ್ತನೇ ಕ್ಲಾಸ್ ಆದ್ರೆ ಈತನ ಆಧಾಯ ಎಷ್ಟಿದೆ ಗೊತ್ತೇ? ಹಸು ಸಾಕಣೆಯಲ್ಲಿ ಯಶಸ್ಸು ಕಂಡ ವ್ಯಕ್ತಿ

ಸಾಧಿಸುವವನಿಗೆ ಛಲವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸುತ್ತಾನೆ ಅನ್ನೋದಕ್ಕೆ ಈ ವ್ಯಕ್ತಿ ಉತ್ತಮ ಉದಾಹರಣೆಯಾಗಿದ್ದಾರೆ, ಅಷ್ಟೇ ಅಲಲ್ದೆ ಬಹಳಷ್ಟು ನಿರೋದ್ಯೋಗಿಗಳಿಗೆ ಇವರ ಕಥೆ ಸ್ಪೂರ್ತಿ ಅನ್ನಬಹುದು. ಹೌದು ಇವರ ಯಶಸ್ಸಿನ ಹಾದಿ ಹೇಗಿತ್ತು ಅನ್ನೋದನ್ನ ಈ ಮೂಲಕ ತಿಳಿಯೋಣ. ಈ ವ್ಯಕತಿ ಓದಿದ್ದು ಬರಿ ಹತ್ತನೇ ತರಗತಿ ಆದ್ರೆ ಈತನ ಆದಾಯ ಸಾಫ್ಟ್ ವೆರ್ ಕಂಪನಿಯಲ್ಲಿ ಕೆಲಸ ಮಾಡುವಂತ ವ್ಯಕ್ತಿಯ ಅದಾಯ್ದ ರೀತಿಯಲ್ಲಿ ತಿಂಗಳಿಗೆ ೪೦ ರಿಂದ ೫೦ ಸಾವಿರ ಅಧಾಯವನ್ನು ಗಳಿಸುತ್ತಿದ್ದಾರೆ. ಅಷ್ಟಕ್ಕೂ ಈ ವ್ಯಕ್ತಿ ಯಾರು ಎಲ್ಲಿಯವರು ಅನ್ನೋದನ್ನ ನೋಡೋಣ.

ಇವರ ಹೆಸರು ಮಂಜುನಾಥ ರಂಗಪ್ಪ ಗುರದಿ ಬಾಗಲಕೋಟೆ ಜಿಲ್ಲೆಯ ಬಿಳಗಿ ತಾಲ್ಲೂಕಿನ ರಬಕವಿ ಅನ್ನೋ ಊರಿನವರು ಇವರು ಓದಿದ್ದು ಕಡಿಮೆ ಆದ್ರೂ ಜೀವನದಲ್ಲಿ ಏನಾದರು ಸಾಧಿಸಬೇಕು ಅನ್ನೋ ಛಲ ಹೊಂದಿದ್ದರು ಆಗಾಗಿ ಇವರು ಮೊದ್ಲ ಬಾರಿಗೆ ಯೋಚಿಸಿದ್ದು ಹಸು ಸಾಕಣೆ ಮಾಡಬೇಕು ಅನ್ನೋದನ್ನ ಹೌದು ಮೊದಲ ಬಾರಿಗೆ ಹಣವಿಲ್ಲದೆ ೧೫ ಸಾವಿರ ರೂಗಳನ್ನು ಕೊಟ್ಟು ಒಂದು ಹಸುವನ್ನು ತಂದು ಅದನ್ನು ಸಾಕಿ ಪೋಷಣೆ ಮಾಡಿ ಅದು ಕರು ಹಾಕುವವರೆಗೆ ಕಷ್ಟದ ಮೆಟ್ಟಿಲಿಗಳನ್ನು ಹತ್ತಿದ್ದಾರೆ, ಹೀಗೆ ಒಂದರಿಂದ ಇಂದು ಅವರ ಬಳಿ 10 ಕ್ಕೂ ಹೆಚ್ಚು ಹಸುಗಳಿವೆ.

ದಿನಕ್ಕೆ 60 ರಿಂದ 70 ಲೀಟರ್ ಹಾಲನ್ನು ತಮ್ಮ ಬಳಿ ಇರುವಂತ ಹಸುಗಳು ನೀಡುತ್ತಿವೆ, ಇದರಿಂದ ತಮ್ಮ ಆಧಾಯ ತಿಂಗಳಿಗೆ ೪೦ ರಿಂದ ೫೦ ಸಾವಿರ ರೂಗಳು ಬರುತ್ತಿವೆ, ಅದೇನೇ ಇರಲಿ ಯಾರೇ ಯಶಸ್ಸು ಪಡೆಯಬೇಕೆಂದರೆ ಅಷ್ಟೊಂದು ಸುಲಭ ಇರೋದಿಲ್ಲ ಕಷ್ಟದ ಹಾದಿಗಳನ್ನು ಮೆಟ್ಟಿ ನಿಂತಾಗಲೇ ಯಶಸ್ಸಿನ ಹಾದಿ ಸಿಗುತ್ತದೆ. ಒಂದಂತೂ ನಿಜ ಯಾರು ಸಾಧಿಸಬೇಕು ಅನ್ನೋ ಛಲ ಹಾಗು ಶ್ರಮ ಹೊಂದಿರುತ್ತಾರೋ ಅವರಿಗೆ ಯಶಸ್ಸು ಖಂಡಿತವಾಗಿಯೂ ಸಿಕ್ಕೇ ಸಿಗುತ್ತದೆ ಅನ್ನೋದಕ್ಕೆ ಈ ವ್ಯಕ್ತಿಯೇ ಉತ್ತಮ ಉದಾಹರಣೆಯಾಗಿದ್ದಾರೆ.

ನೀವು ಕೂಡ ಏನಾದರು ಮಾಡಬೇಕು ಸಾಧಿಸಬೇಕು ಅನ್ನೋ ಛಲ ಹೊಂದಿದ್ದರೆ ಮೊದಲು ಕಷ್ಟದ ಹಾದಿಗಳು ಸಿಗುತ್ತವೆ ಅವುಗಳನ್ನು ಮೆಟ್ಟಿ ನಿಂತಾಗ ಕಡಿತ ಯಸ್ಸಸ್ನ ದಾರಿ ಸಿಕ್ಕೇ ಸಿಗುತ್ತದೆ ಅನ್ನೋ ದೃಢತೆ ಇರಲಿ ಹೆಚ್ಚಿನ ಶ್ರಮ ಹಾಗು ಆಸಕ್ತಿಗೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತದೆ ಅನ್ನೋದನ್ನ ಈ ಮೂಲಕ ತಿಳಿಸಲು ಬಯಸುತ್ತೇವೆ. ಈ ಸ್ಪೂರ್ತಿದಾಯಕ ಜೀವನ ಕಥೆ ನಿಮಗೆ ಇಷ್ಟವಾದರೆ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರಿಂದ ಅವರ ಜೀವನದಲ್ಲೂ ಸ್ಪೂರ್ತಿ ಸಿಗಬಹುದು.

Leave a Comment