ಓದಿಗಾಗಿ ಇವರು ಪಟ್ಟ ಕಷ್ಟಗಳೇನು ಗೊತ್ತೇ? ಇವರ ಜೀವನ ಕಥೆ ಎಂತವರಿಗೂ ಸ್ಪೂರ್ತಿದಾಯಕ

ಇಲ್ಲಿ ನಾವು ನಿಮಗೆ ಗೊತ್ತಿರುವ ಒಂದು ವ್ಯಕ್ತಿಯ ಬಗ್ಗೆ ತಿಳಿಯೋಣ. ಎಷ್ಟೋ ಜನರಿಗೆ ಇವರು ಅಚ್ಚುಮೆಚ್ಚು. ಆದರೆ ಕೆಲವರಿಗೆ ಇವರು ಬೆಳೆದು ಬಂದ ದಾರಿ ಗೊತ್ತಿಲ್ಲ. ಹಮಾಲಿಯಾಗಿ, ಬಾರ್ ಸಪ್ಲಾಯರ್ ಆಗಿ, ಕೋಚಿಂಗ್ ಸೆಂಟರ್ನಲ್ಲಿ ಕಸ ಗುಡಿಸಿ ಹೆಮ್ಮೆಯ ಅಧಿಕಾರಿಯ ಕಥೆ ಇದು. ಇವರ ಹೆಸರು ಕೇಳಿದರೆ ಸಾಕು ಜನರು ನಿಮ್ಮಂತಹ ಅಧಿಕಾರಿ ಬೇಕು ಎನ್ನುವ ವ್ಯಕ್ತಿತ್ವದ ಕಥೆ

ದುಷ್ಟರು ಇವರೆಂದರೆ ಗಡಗಡ ನಡುಗುತ್ತಾರೆ. ಅಂದ ಹಾಗೆ ಅವರು ಬೇರೆ ಯಾರೂ ಅಲ್ಲ. ನಮ್ಮ ಕರ್ನಾಟಕದ ಸಿಂಗಂ ಎಂದು ಖ್ಯಾತಿ ಪಡೆದಿರುವ ರವಿ ಡಿ. ಚೆನ್ನಣ್ಣನವರ್.ಇವರು ನಮ್ಮ ಕರ್ನಾಟಕದ ಗದಗ ತಾಲೂಕಿನನೀಲಗುಂದದಲ್ಲಿ ಕಡು ಬಡ ಕುಟುಂಬದಲ್ಲಿ 23-ಜುಲೈ-1985ರಲ್ಲಿ ಜನಿಸಿದರು. ಇವರಿಗೆ ಹುಟ್ಟಿನಿಂದ ಸಹ ಬಡತನ ಬಳುವಳಿಯಾಗಿ ಬಂದಿತ್ತು. ಕೃಷಿ ಇವರ ಕುಟುಂಬದ ಆದಾಯ. ಇವರಿಗೆ ಚಿಕ್ಕ ವಯಸ್ಸಿನಿಂದಲೂ ಐಪಿಸ್ ಅಧಿಕಾರಿ ಆಗಬೇಕೆಂಬ ಆಸೆ.

ಮನೆಯಲ್ಲಿ ಎಷ್ಟೇ ಕಷ್ಟ ಇದ್ದರೂ ಇವರು ಕಂಡ ಕನಸನ್ನು ನನಸು ಮಾಡಬೇಕೆಂಬ ಛಲದಿಂದ
ಓದುತ್ತಾರೆ. ಗದಗದ ನೀಲಗುಂದದ ಸರಕಾರಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಮುಗಿಸುತ್ತಾರೆ. ನಂತರ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ BA ಪದವಿಯನ್ನು ಪಡೆಯುತ್ತಾರೆ. ಕಾಲೇಜಿನಲ್ಲಿ ಓದುವಾಗ ತಮ್ಮ ಖರ್ಚು ವೆಚ್ಚಗಳನ್ನು ಬಾರ್ನಲ್ಲಿ ಕೆಲಸ ಮಾಡಿ ಪಡೆಯುತ್ತಾರೆ. ಡಿಗ್ರಿ ಮುಗಿದ ನಂತರ ಕಾಂಪಿಟೇಟೀವ್ ಎಕ್ಸಾಮ್ ತರಬೇತಿ ಪಡೆಯಲು ಇವರ ಬಳಿ ಹಣ ಇರುವುದಿಲ್ಲ. ಅಲ್ಲಿ ಬಿಟ್ಟು ಹೈದರಾಬಾದ್ ನ ಟಾರ್ಗೆಟ್ ಕೋಚಿಂಗ್ ಎಂಬ ಸೆಂಟರೆಗೆ ಹೋಗುತ್ತಾರೆ. ಸಾಧಿಸಿಯೇ ಸಾಧಿಸುತ್ತೇನೆ ಎಂಬ ಆತ್ಮವಿಶ್ವಾಸ ಅವರದ್ದು.

ಕೋಚಿಂಗ್ ಸೆಂಟರ್ ನಲ್ಲಿ ನೆಲವರೆಸಿ ಕಸಗುಡಿಸಿ ಕೆಲಸ ಮಾಡುತ್ತಾ ಕೋಚಿಂಗ್ ಮುಗಿಸುತ್ತಾರೆ. 2008ರಲ್ಲಿ “ಯೂನಿಯನ್ ಪಬ್ಲಿಕ್ ಕಮಿಷನ್” ಪ್ರಥಮ ಪ್ರಯತ್ನದಲ್ಲಿಯೇ 703ನೇ ಸ್ಥಾನದಲ್ಲಿ ಪಾಸಾಗುತ್ತಾರೆ. ಕೊನೆಗೂ ಕನಸನ್ನು ನನಸು ಮಾಡಿಕೊಂಡಿಯೇ ಬಿಟ್ಟರು. ಇವರು 2011ರಲ್ಲಿ ಬೆಳಗಾವಿಯ ಹೆಚ್ಚುವರಿ ಅಧೀಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ನಂತರ ಧಾರವಾಡ, ಹೊಸಪೇಟೆ, ಬೆಂಗಳೂರು, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ ಜನರ ಮನ ಗೆದ್ದಿದ್ದಾರೆ. ಈಗ 2019ರಿಂದ ಬೆಂಗಳೂರು ಎಸ್ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಿಳೆಯರ ರಕ್ಷಣೆಗಾಗಿ ಒನಕೆ ಒಬವ್ವ ಪಡೆಯನ್ನು ರಚಿಸಿದ್ದರು. ಬರೀ ಕನಸು ಕಂಡರೆ ಸಾಲದು ಅದಕ್ಕೆ ತಕ್ಕಂತೆ ಶ್ರಮ ಇರಬೇಕು ಎನ್ನುವುದಕ್ಕೆ ರವಿ ಚೆನ್ನಣ್ಣನವರ್ ಒಂದು ಉದಾಹರಣೆಯಾಗಿದ್ದಾರೆ.

Leave a Comment