800 ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಪ್ರತಿದಿನ ಊಟ ಹಾಕಿ ಸಾಕುತ್ತಿರುವ ಈ ಮಹಾ ತಾಯಿ ಯಾರು ಅಂತ ಗೊತ್ತಾ

ದಿನೇದಿನೇ ಮನುಷ್ಯ ಸ್ವಾರ್ಥಿ ಆಗುತ್ತಿದ್ದಾನೆ. ಪ್ರತಿದಿನ ತಾನು ತನ್ನದು ಎಂದು ದುಃಖಿಸುವ ಮನುಷ್ಯ ಪರೋಪಕಾರಿ ಮನೋಭವ ಮರೆತುಬಿಟ್ಟಿದ್ದಾನೆ. ವನ್ಯ ಮತ್ತು ವನ್ಯಜೀವಿಗಳ ಹಂಗಿನಲ್ಲಿ ಬದುಕುತ್ತಿರುವ ಮಾನವನಿಗೆ ಸ್ವಲ್ಪವೂ ಕೂಡ ಕನಿಕರ ಹಾಗೂ ನಿಸ್ವಾರ್ಥ ಮನೋಭಾವ ಇಲ್ಲ. ನಿಸ್ವಾರ್ಥ ಮನಸ್ಥಿತಿ ಇರುವ ಮನುಷ್ಯರು ಈಗಿನ ಕಾಲದಲ್ಲಿ ಲಕ್ಷಕ್ಕೊಬ್ಬರು ಅಂತನೇ ಹೇಳಬಹುದು. ಇಂಥವರಲ್ಲಿ ರಜನಿ ಶೆಟ್ಟಿ ಎಂಬ ಮಹಿಳೆ ಒಬ್ಬರಾಗಿದ್ದಾರೆ.

ಮಂಗಳೂರಿನ ಮೂಲದ ರಜತ್ ಶೆಟ್ಟಿ ಎಂಬ ಧೀರ ಹಾಗೂ ಸೃಜನಶೀಲ ಮಹಿಳೆಯ ಬಗ್ಗೆ ನೀವೆಲ್ಲಾ ಇಂದು ತಿಳಿದುಕೊಳ್ಳಲೇಬೇಕು. ಬೀದಿ ನಾಯಿಗಳನ್ನು ಕಂಡರೆ ಕಲ್ಲು ಎಸೆಯುವವರೆ ಜಾಸ್ತಿ. ಆದರೆ ರಜನಿ ಶೆಟ್ಟಿ ಎಂಬ ಈ ಮಹಿಳೆ ಸುಮಾರು 800 ಬೀದಿ ನಾಯಿಗಳ ಲಾಲನೆ ಪಾಲನೆ ಮಾಡುತ್ತಿದ್ದಾರೆ. ಇಂತಹ ಚಿನ್ನದಂಥ ಮನಸ್ಸು ಎಲ್ಲರಿಗೂ ಇರುವುದಿಲ್ಲ ಆದರೆ ರಜನಿ ಶೆಟ್ಟಿಯವರಿಗೆ ಇಂಥ ಆಲೋಚನೆ ಬಂದಿದ್ದು ಆಕಸ್ಮಿಕವಾಗಿ. 2007 ರಲ್ಲಿ ಒಂದು ದಿನ ರಜನಿ ಶೆಟ್ಟಿಯವರು ಮಂಗಳೂರಿನಿಂದ ಉಡುಪಿಗೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದರು.

ಅಂಗಡಿಯ ಮುಂದೆ ನಿಂತಿದ್ದ ಒಬ್ಬ ಯುವಕ ಆಮ್ಲೆಟ್ ತಿಂದು ನಂತರ ಖಾಲಿ ಪೇಪರ್ ಅನ್ನು ರಸ್ತೆಯ ಮೇಲೆ ಎಸೆಯುತ್ತಾನೆ. ಆಗ ಅಲ್ಲೇ ಪಕ್ಕದಲ್ಲಿದ್ದ ಬಡ ಬೀದಿ ನಾಯಿ ಹಸುವಿನಿಂದ ಬಳಲುತ್ತಿತ್ತು ಹಸಿವನ್ನ ತಡೆಯಲಾರದೇ ಯುವಕ ಎಸೆದಿದ್ದ ಖಾಲಿ ಪೇಪರನ್ನೇ ತಿನ್ನುತ್ತ ಹೊಟ್ಟೆ ತುಂಬಿಸಿ ಕೊಂಡಿತು. ಈ ದೃಶ್ಯವನ್ನು ನೋಡಿ ರಜನಿ ಶೆಟ್ಟಿಯ ಹೃದಯ ಕರಗಿ ಹೋಗುತ್ತದೆ. ತಕ್ಷಣವೇ ಬಸ್ಸಿನಿಂದ ಇಳಿದು ರಜನಿ ಶೆಟ್ಟಿ ಅಂಗಡಿಗೆ ಹೋಗಿ ಆಮ್ಲೆಟ್ ಖರೀದಿ ಮಾಡಿ ಆ ನಾಯಿಗೆ ಆಮ್ಲೇಟ್ ತಿನ್ನಿಸುತ್ತಾಳೆ.

ಹಸಿವಿನಿಂದ ಬಳಲುತ್ತಿದ್ದ ನಾಯಿಗೆ ಆಮ್ಲೆಟ್ ಸಿಕ್ಕಿದ್ದು ಅಮೃತ ಕುಡಿದಷ್ಟು ಸಂತೋಷ ವಾಗುತ್ತದೆ. ಆಮ್ಲೆಟ್ ತಿಂಗಳ ನಂತರ ನಾಯಿ ಮುಖದಲ್ಲಿ ಒಂದು ಕಳೆ ಬರುತ್ತದೆ ಆ ಬೀದಿನಾಯಿ ಖುಷಿಯಾಗಿರುವುದನ್ನು ಕಂಡು ರಜನಿ ಶೆಟ್ಟಿಗೆ ಮನಸ್ಸಿಗೆ ಸಮಾಧಾನವಾಗುತ್ತದೆ. ಆ ದಿನವೇ ರಜನಿ ಶೆಟ್ಟಿ ಒಂದು ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ. ಬೀದಿ ನಾಯಿಗಳಿಗೆ ಆಸರೆಯಾಗುವಂಥ ಕೆಲಸ ಮಾಡಬೇಕೆಂಬ ಛಲ ತೊಡುತ್ತಾಳೆ. ಆ ದಿನದಿಂದ ಬೀದಿ ನಾಯಿಗಳನ್ನು ಸಾಕಲು ಶುರು ಮಾಡಿದ ರಜನಿ ಶೆಟ್ಟಿ ಎಂದಿಗೂ ನಿಲ್ಲಿಸಲಿಲ್ಲ . ಮೂಕ ಪ್ರಾಣಿಗಳ ನೆಮ್ಮದಿಯೇ ನನ್ನ ಸುಖ ಎಂಬುದು ರಜನಿ ತತ್ವ.

ಇಂದಿಗೆ ರಜನಿ ಶೆಟ್ಟಿ ಬೀದಿ ನಾಯಿಗಳ ಲಾಲನೆ ಪಾಲನೆ ಶುರು ಮಾಡಿ ಸುಮಾರು ಹದಿನೈದು ವರ್ಷಗಳು ಕಳೆದಿವೆ. ಬೀದಿ ನಾಯಿಗಳಿಗೆ ಸಲುವಾಗಿ ಈಕೆ ಯಾವ ಕೆಲಸ ಮಾಡುವುದಕ್ಕೂ ರೆಡಿ ಇದ್ದಾಳೆ. ಆಳವಾದ ಬಾವಿಗೆ ಇಳಿದು ಬೇಕಾದರೂ ಈಕೆ ನಾಯಿಯನ್ನ ಸಂರಕ್ಷಣೆ ಮಾಡುತ್ತಾಳೆ. ಚರಂಡಿಯಲ್ಲಿ ಇಳಿದು ಬೇಕಾದರೂ ನಾಯಿಯ ರಕ್ಷಣೆ ಮಾಡುತ್ತಾಳೆ. ಇಲ್ಲಿಯವರೆಗೆ ಸುಮಾರು 2 ಸಾವಿರಕ್ಕೂ ಹೆಚ್ಚು ನಾಯಿಗಳ ಸಂರಕ್ಷಣೆ ಮಾಡಿದ್ದಾಳೆ. ತನ್ನ ಜೀವವನ್ನೇ ಪಣಕ್ಕಿಟ್ಟು ಬೀದಿನಾಯಿಗಳ ಜೀವವನ್ನು ಕಾಪಾಡುತ್ತಾಳೆ.

ಪ್ರತಿದಿನ 800 ಕ್ಕೂ ಹೆಚ್ಚು ಬೀದಿನಾಯಿಗಳಿಗೆ ರಜನಿ ಶೆಟ್ಟಿ ಊಟ ಹಾಕುತ್ತಾಳೆ ಪ್ರತಿದಿನ ತಪ್ಪದೆ ನೂರಾರು ಕೆಜಿ ಅನ್ನವನ್ನು ಬೇಯಿಸಿ ನಾಯಿಗಳಿಗೆ ಊಟ ಹಾಕುವ ಮಹಾತಾಯಿ ಇವಳು. ವಿಶೇಷವಾಗಿ 200 kg ಚಿಕನ್ ರೈಸ್ ಕುಕ್ ಮಾಡಿ ನಾಯಿಗಳಿಗೆ ಬಡಿಸುತ್ತಾಳೆ. ಪ್ರಾಣಿಗಳಿಗೆ ಎಂದಿಗೂ ಹಿಂಸೆ ಕೊಡಬಾರದು ಅವುಗಳ ಮೇಲೆ ಪ್ರೀತಿ ಹಾಗೂ ಕಾಳಜಿ ತೋರಿಸಬೇಕು ಎನ್ನುವುದು ರಜನಿಯವರ ತಿಳಿಮಾತು. ಕಲಿಯುಗದಲ್ಲಿ ಕೂಡ ಇಂಥವರ ನಿಸ್ವಾರ್ಥದ ಜೀವನ ನಡೆಸುತ್ತಿರುವ ರಜನಿ ಶೆಟ್ಟಿಯವರಿಗೆ ನಿಜಕ್ಕೂ ಕೋಟಿಕೋಟಿ ನಮನಗಳು.

Leave a Comment