ಮಗಳ ಮದುವೆಗೆ ಎತ್ತಿಟ್ಟ ಹಣವನ್ನು ಉದ್ಯಮಿಯೊಬ್ಬ ಯಾವ ಕೆಲಸಕ್ಕೆ ಉಪಯೋಗಿಸಿದ ಗೊತ್ತಾ? ಈ ಕಾಲದಲ್ಲಿ ಇಂಥ ಜನರು ಇರ್ತಾರಾ

ದೊಡ್ಡ ಉದ್ಯಮಿ ಅಂದರೆ ತನ್ನ ಸ್ವಾರ್ಥತೆ ಹೆಚ್ಚು ಎಂದು ತಿಳಿದಿರುತ್ತೇವೆ, ಆದ್ರೆ ಇಲ್ಲೊಬ್ಬ ಮಹಾನ್ ವ್ಯಕ್ತಿ ನಿಜಕ್ಕೂ ಮಾಡಿರುವಂತ ಕೆಲ್ಸಕ್ಕೆ ಮೆಚ್ಚಲೇಬೇಕು. ಉದ್ಯಮಿ ಅಂದರೆ ಸಾಕು ಕೋಟಿ ಗಟ್ಟಲೆ ಹಣ ಖರ್ಚು ಮಾಡಿ ತಮ್ಮ ಕೆಲಸವನ್ನು ಮಾಡಿಕೊಳ್ಳುತ್ತಾರೆ, ಆದ್ರೆ ಈ ವ್ಯಕ್ತಿ ತನ್ನ ಮಗಳ ಮದುವೆಗೆ ಕೂಡಿಟ್ಟ ಹಣವನ್ನು ಬಡ ಜನಗಳಿಗೆ ಮನೆ ಕಟ್ಟಿಸಿ ಆಸರೆಯಾಗಿದ್ದಾರೆ.

ಅಷ್ಟಕ್ಕೂ ಈ ವ್ಯಕ್ತಿ ಯಾರು ಅನ್ನೋದನ್ನ ಈ ಮೂಲಕ ತಿಳಿಯೋಣ ಬನ್ನಿ, ಹೆಸರು ಉದ್ಯಮಿ ಮಜೋನ್ ಮುನೋತ್ ಎಂಬುದಾಗಿ ಮಹಾರಾಷ್ಟ್ರದ ಔರಂಗಾಬಾದ್ ನ ದೊಡ್ಡ ಉದ್ಯಮಿಯಾಗಿದ್ದು, ಬಡ ಜನರಿಗಾಗಿ 90 ಕ್ಕೂ ಹೆಚ್ಚು ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ ಇದರಲ್ಲಿ ಈಗಾಗಲೇ 40 ಮನೆಯಲ್ಲಿ ಜನರು ವಾಸವಾಗಿದ್ದು ಸಂತೋಷದಿಂದ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ.

ಇಂದಿನ ದಿನಗಳಲ್ಲಿ ಶ್ರೀಮಂತರು ತಮ್ಮ ಮಕ್ಕಳ ಮದುವೆಗೆ ಸಾವಿರಾರು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿ ಮಾಡುವೆ ಮಾಡುತ್ತಾರೆ, ಆದ್ರೆ ಈ ಮಹಾನ್ ವ್ಯಕ್ತಿ ಬಡವರಿಗಾಗಿ ಮಾಡಿರುವಂತ ಕೆಲಸಕ್ಕೆ ನಿಜಕ್ಕೂ ಮೆಚ್ಚಬೇಕು ಅಲ್ಲವೇ? ಮಗಳ ಮದುವೆಗೆ ಎಂದು 70 ರಿಂದ 80 ಲಕ್ಷ ಹಣವನ್ನು ಪ್ಲಾನ್ ಮಾಡಿ ಇಡಲಾಗಿತ್ತು ಆದ್ರೆ ಮಗಳ ಮದುವೆಯನ್ನು ಸಿಂಪಲಾಗಿ ಮಾಡಿ ಬಡವರಿಗೆ ಮನೆ ಕಟ್ಟಿಸಿ ಕೊಟ್ಟಿದ್ದಾರೆ.

ಈ ವ್ಯಕ್ತಿ ಈ ರೀತಿಯಾಗಿ ಬಡವರಿಗೆ ಮನೆ ಕಟ್ಟಿಸಲು ಏನು ಕರಣ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು, ಹೌದು ಇವರಿಗೆ ಅಲ್ಲಿನ ಸ್ಥಳೀಯ ಶಾಸಕರ ಮಾತು ಸ್ಪೂರ್ತಿ ನೀಡಿತ್ತು ಹಾಗೂ ಆ ಶಾಸಕ ಇವರಿಗೆ ಮಾದರಿಯಾಗಿದ್ದರು ಆಗಾಗಿ ಅನಾವಶ್ಯಕವಾಗಿ ಹಣವನ್ನು ಖರ್ಚು ಮಾಡುವ ಬದಲು ಬಡವರಿಗೆ ಆಸರೆಯಾಗಲಿ ಅನ್ನೋ ಕಾರಣಕ್ಕೆ ಈ ಕೆಲಸಕ್ಕೆ ಮುಂದಾಗುತ್ತಾರೆ.

ನಿಜಕ್ಕೂ ಅದೆಷ್ಟೋ ಜನ ಮನೆಯಿಲ್ಲದೆ ಕೆಲವರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತ ತಮ್ಮ ದಿನಗಳನ್ನು ಕಳೆಯುತ್ತಿದ್ದರು ಅಂತವರಿಗೆ ಇವರ ಈ ಸಮಾಜ ಸೇವೆ ಹೆಚ್ಚು ಉಪಯೋಗಕಾರಿಯಾಗಿದೆ, ಅಷ್ಟೇ ಅಲ್ಲದೆ ತಂದೆ ಮಡಿದ ಕೆಲಸಕ್ಕೆ ಮಗಳಿಗೆ ಹೆಚ್ಚು ಖುಷಿ ಕೊಟ್ಟಿದೆ ಅನ್ನೋದನ್ನ ಸಹ ಹೇಳಲಾಗುತ್ತದೆ. ಅದೇನೇ ಇರಲಿ ಬರಿ ಸ್ವಾರ್ಥವನ್ನು ತುಂಬಿರುವಂತ ಈ ಜನಗಳ ಮಧ್ಯೆ ಇಂತವರು ಇದ್ದಾರೆ ಅನ್ನೋದು ಹೆಮ್ಮೆಯ ವಿಷಯವೇ ಅನ್ನಬಹುದು. ನಿಮಗೆ ಇವರ ಕಾರ್ಯ ವೈಖರಿ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರಿಂದ ಬೇರೆಯವರಿಗೂ ಸ್ಪೂರ್ತಿಯಾಗಲಿ.

Leave a Comment