ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನನ್ನ ಬೇಕಾದರೂ ಮಾಡಬಲ್ಲ ಅನ್ನೋ ಸಾಮರ್ಥ್ಯದ ಬಗ್ಗೆ ಈ ವ್ಯಕ್ತಿ ತೋರಿಸಿದ್ದಾನೆ, ತಮ್ಮ ಊರಿನಿಂದ ಸಿಟಿಗೆ ಹೋಗಲು ಯಾವುದೇ ರಸ್ತೆ ಸಂಪರ್ಕವಿಲ್ಲದೆ ಊರಿನ ಜನರು ಪರದಾಡುವಂತ ಪರಿಸ್ಥಿತಿ ಇರುವಾಗ ಯಾರ ಸಹಾಯನು ಇಲ್ಲದೆ ಬರಿ ೬ ದಿನದಲ್ಲಿ ಗುಡ್ಡ ಕಡಿದು ಒಂದು ಕಿ.ಮೀ ದೂರದ ರಸ್ತೆ ನಿರ್ಮಿಸಿದ ಈ ವ್ಯಕ್ತಿಯ ಯಶಸ್ಸಿನ ಕಥೆಯನೊಮ್ಮೆ ತಿಳಿದುಕೊಳ್ಳೋಣ ಬನ್ನಿ.
ಮಾಂಜಿಯ ಕಥೆ ನಿಮಗೊಮ್ಮೆ ಗೊತ್ತಿರುತ್ತದೆ ಅನಿಸುತ್ತೆ ತನ್ನ ಹೆಂಡತಿಗಾಗಿ ಗುಡ್ಡ ಕಡಿದು ರಸ್ತೆಯನ್ನು ನಿರ್ಮಿಸಿದಂತ ಮಾಂಜಿಯ ಕಥೆ ಬಹಳಷ್ಟು ಜನಕ್ಕೆ ಸ್ಪೂರ್ತಿಯಾಗಿತ್ತು, ಇದೀಗ ಇದೆ ರೀತಿಯಲ್ಲಿ ಕಿನ್ಯ ಮೂಲದ ವ್ಯಕ್ತಿ ಒಬ್ಬ ತನ್ನ ಊರಿನ ಜನರಿಗೆ ಅನುಕೂಲಕ್ಕಾಗಿ ಒಬ್ಬನೇ ಗುಡ್ಡ ಕಡಿದು ಒಂದು ಕಿಲೋ ಮೀಟರ್ ಉದ್ದದ ರಸ್ತೆಯನ್ನು ನಿರ್ಮಿಸಿದ್ದಾನೆ. ಹೌದು ಕೀನ್ಯಾದ ಕಗಂಡಾ ಗ್ರಾಮದ ಬಳಿ ಒಂದು ಪುಟ್ಟ ಗ್ರಾಮವಿದ್ದು ಅದರ ಬಳಿ ದಟ್ಟವಾದ ಅರಣ್ಯ ಪ್ರದೇಶವಿದೆ.
ಇಲ್ಲಿ ವಾಸಿಸುತ್ತಿರುವ ಜನರಿಗೆ ಊರಿನ ಸಂಪರ್ಕ ಸಾಧಿಸಲು ಸರಿಯಾದ ಮಾರ್ಗವಿರಲಿಲ್ಲ ಇದರ ಕುರಿತು ಅಲ್ಲಿನ ಸರ್ಕಾರಕ್ಕೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದರು ಕೂಡ ಇದರ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ ಜನರಿಗೆ ರಸ್ತೆ ಸಂಪರ್ಕ ಮಾಡಿಕೊಡಲು ಮುಂದಾಗಲಿಲ್ಲ. ಇದನ್ನು ಅರಿತ ಕೀನ್ಯಾದ ಈ ಮಾಂಜಿ ನಿಕೋಲಸ್ ಮುಚಾಮಿ ಎನ್ನುವ ವ್ಯಕ್ತಿ ಸರ್ಕಾರಕ್ಕೆ ಮನವಿ ಮಾಡಿದರು ಇವರ ಬಗ್ಗೆ ಯಾವುದೇ ರೀತಿಯ ಅನುಕೂಲತೆಯನ್ನು ಮಾಡಿಕೊಡಲಿಲ್ಲ.
ಇವರನ್ನು ನಂಬಿ ಕುಳಿತರೆ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಅರಿತ ಈ ವ್ಯಕ್ತಿ, ಯಾರ ಸಹಾಯವಿಲ್ಲದೆ ಬರಿ 6 ದಿನದಲ್ಲಿ ಒಂದು ಕಿ.ಮೀ ದೂರದ ರಸ್ತೆಯನ್ನು ನಿರ್ಮಿಸಿ ಊರಿನ ಜನರಿಗೆ ರಸ್ತೆ ಸಂಪರ್ಕ ಮಾಡಿ ಕೊಟ್ಟಿದ್ದಾನೆ. ಇದರಿಂದ ತನ್ನ ಊರಿನಲ್ಲಿ ಇರುವಂತ ರೋಗಿಗಳು ಹಾಗೂ ವಯಸ್ಸಾದವರಿಗೆ ಈ ಆಸ್ಪತ್ರೆ ಮುಂತಾದ ಕೆಲಸ ಕಾರ್ಯಗಳಿಗೆ ಹೋಗಲು ಈ ರಸ್ತೆ ಉಪಯೋಗಕಾರಿಯಾಗಿದೆ. ನಿಜಕ್ಕೂ ಅದೇನೇ ಹೇಳಿ ಇವರ ಈ ಕಾರ್ಯ ವೈಖರಿಗೆ ನಿಜಕ್ಕೂ ಮೆಚ್ಚಲೇಬೇಕು.