ಈಗಿನ ಇಂಟರ್ನೆಟ್ ಯುಗದಲ್ಲಿ ರಾತ್ರೋರಾತ್ರಿ ಸಾಮಾನ್ಯ ಜನರು ಸೆಲೆಬ್ರಿಟಿ ಆಗುತ್ತಾರೆ. ನಾವು ಇಂಥ ಉದಾಹರಣೆಗಳನ್ನು ಸಾಕಷ್ಟು ಕಾಣುತ್ತಿದ್ದೇವೆ. ಇತ್ತೀಚೆಗಷ್ಟೇ ರಸ್ತೆಬದಿಯಲ್ಲಿ ಕಡಲೆಕಾಯಿ ಮಾರುತ್ತಿದ್ದ ವ್ಯಕ್ತಿ ಎಂಬ ಹಾಡು ಹೇಳಿ ಇದೀಗ ಇಡೀ ದೇಶದಾದ್ಯಂತ ಹೆಸರು ಮಾಡಿದ್ದಾರೆ. ಕಡಲೆಕಾಯಿ ಮಾರುವ ಸಾವಿರಾರು ರೂಪಾಯಿ ಸಂಪಾದನೆ ಮಾಡುತ್ತಿದ್ದ ವ್ಯಕ್ತಿಯ ಹಾಡು ಇಂಟರ್ನೆಟ್ ನಲ್ಲಿ ಸದ್ದು ಮಾಡಿದ ನಂತರ ಈ ವ್ಯಕ್ತಿ ಇದೀಗ ಲಕ್ಷಾಂತರ ಹಣವನ್ನು ಸಂಪಾದನೆ ಮಾಡುತ್ತಿದ್ದಾನೆ.
ಹಾಗೆ ಕೆಲವು ದಿನಗಳ ಹಿಂದೆ ರಾನು ಮಂಡಲ್ ಎಂಬ ಒಬ್ಬ ಭಿಕ್ಷುಕಿ ಕೂಡ ಇದೇ ರೀತಿ ಫೇಮಸ್ ಆಗಿದ್ದುಂಟು. ಭಿಕ್ಷೆ ಬೇಡುತ್ತಿದ್ದ ಮೇಲೆ ಹೇಳಿದ ಒಂದೇ ಒಂದು ಹಾಡಿನಿಂದ ಬಾಲಿವುಡ್ ಸೆಲೆಬ್ರಿಟಿ ಆಗುವ ಅದೃಷ್ಟ ಒದಗಿತ್ತು. ಇದೇ ರೀತಿಯ ಘಟನೆಯೊಂದು ಇದೀಗ ಕೇರಳದಲ್ಲಿ ನಡೆದಿದೆ. ರಸ್ತೆ ಬದಿಯಲ್ಲಿ ಬಲೂನು ಮಾರುತ್ತಿದ್ದ ಬಡ ಹುಡುಗಿ ಇದೀಗ ಕೇರಳ ರಾಜ್ಯದ ಸೆಲೆಬ್ರಿಟಿ/ಮಾಡೆಲ್ ಆಗಿದ್ದಾಳೆ. ನೋಡಿ ಇಂಟರ್ನೆಟ್ ಮತ್ತು ಅಷ್ಟು ವಿಸ್ಮಯಕಾರಿ ಅಂದು ರಾತ್ರಿ ಕಳೆಯುವುದು ರೊಳಗಡೆ ಭಿಕ್ಷುಕರು ಸಹ ಶ್ರೀಮಂತರಾಗಿರುತ್ತಾರೆ.
ಈದೀಗ ಫೇಮಸ್ ಆಗುತ್ತಿರುವ ಕೇರಳದ ಈ ಹುಡುಗಿಯ ಹೆಸರು ಕಿಸ್ಬು. ಈಕೆ ತನ್ನ ತಂದೆಯನ್ನು ಚಿಕ್ಕವಯಸ್ಸಿನಲ್ಲೇ ಕಳೆದುಕೊಂಡಿದ್ದಾಳೆ. ದೊಡ್ಡವಳಾದ ಮೇಲೆ ತನ್ನ ತಾಯಿಯ ಜೊತೆ ಬಲೂನು ಮಾರಿಕೊಂಡು ಜೀವನ ಸಾಗಿಸುತ್ತಿದ್ದಾಳೆ. ಕಿಸ್ಬು ಮತ್ತು ತಾಯಿ ಕಳೆದ ವಾರ ಕೇರಳದ ಕುನ್ನೂರು ಜಾತ್ರೆಗೆ ಹೋಗಿದ್ದರು. ಜಾತ್ರೆಯಲ್ಲಿ ಬಲೂನು ಮಾರಿಕೊಂಡು ಹಣ ಸಂಪಾದಿಸಬೇಕು ಎನ್ನುವುದು ಅವರ ಆಸೆಯಾಗಿತ್ತು. ಆದರೆ ಆ ದಿನ ಅಲ್ಲಿ ನಡೆದಿದ್ದೇ ಬೇರೆ. ಆ ದಿವಸ ಕಿಸ್ಬು ನ ಜೀವನದ ದಿಕ್ಕೇ ಬದಲಾಗುತ್ತದೆ ಎಂದು ಕಿಸ್ಬೂ ಗೆ ತಿಳಿದಿರಲಿಲ್ಲ.
ಕೂನ್ನೂರು ಜಾತ್ರೆಗೆ ಬಂದ ಕೇರಳದ ಒಬ್ಬ ಫೋಟೋಗ್ರಾಫರ್ ಗೆ ಈ ಸುಂದರ ಹುಡುಗಿ ಬಲೂನು ಹಿಡಿದಿರುವ ದೃಶ್ಯ ಕಣ್ಣಿಗೆ ಬೀಳುತ್ತದೆ. ಕಿಸ್ಬೂ ಬಳಿ ಅನುಮತಿ ಪಡೆದುಕೊಂಡು ಅವಳ ಫೋಟೋಗಳನ್ನು ಈ ಫೋಟೋಗ್ರಾಫರ್ ಕ್ಲಿಕ್ಕಿಸುತ್ತಾನೆ. ತದನಂತರ ಈ ಹುಡುಗಿಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿದು ಬಿಡುತ್ತಾನೆ. ಈ ಹುಡುಗಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಕೆಲವೇ ಗಂಟೆಗಳಲ್ಲಿ ವೈ’ರಲ್ ಆಗಿಬಿಡುತ್ತದೆ.
ಇಂಟರ್ನೆಟ್ ನಲ್ಲಿ ಈಕೆಯ ಫೋಟೋಗಳು ಹರಿದಾಡುತ್ತಿದ್ದಂತೆ ಕಿಸ್ಬೂಗೆ ಇನ್ನಷ್ಟು ಅವಕಾಶಗಳು ಒದಗುತ್ತವೆ. ಸಲೂನ್ ಗಳು ಈಕೆಗೆ ಮೇಕಪ್ ಮಾಡೋಕೆ ಮುಂದಾಗುತ್ತಿದ್ದಾರೆ. ಅಷ್ಟೇ ಅಲ್ಲದೆ ಕಿಸ್ಬೂ ನನ್ನು ಸ್ಟುಡಿಯೋಗೆ ಕರೆದುಕೊಂಡು ಹೋಗಿ ಫೋಟೋ ಶೂಟ್ ಗಳನ್ನು ಮಾಡಿಸಲು ಫೋಟೋಗ್ರಾಫರ್ ಗಳು ಮುಂದೆ ಬರುತ್ತಿದ್ದಾರೆ . ಬಲೂನು ಮಾರುತ್ತಿದ್ದ ಈ ಸುಂದರಿಯ ಫೋಟೋಗಳನ್ನು ನೋಡಿ ನೆಟ್ಟಿಗರು ಮನಸೋತಿದ್ದಾರೆ. ಬಲೂನು ಮಾರುತ್ತಿದ್ದ ಇದೀಗ ಕೇರಳದಲ್ಲಿ ಸೆಲೆಬ್ರಿಟಿಯಾಗಿದ್ದಾಳೆ.
ಕೇವಲ ಒಂದೇ ಒಂದು ಫೋಟೋ ಈ ಬಲೂನು ಮಾರುತ್ತಿದ್ದ ಹುಡುಗಿಯನ್ನು ಮಾಡೆಲ್ ಆಗಿ ಬದಲಾಯಿಸಿರುವುದು ನಿಜಕ್ಕೂ ರೋಚಕ ಕಥೆ. ತನ್ನ ಮಗಳು ಫೇಮಸ್ ಆಗಿರೋದು ಕಿಸ್ಬು ತಾಯಿಗೆ ತುಂಬಾ ಸಂತೋಷ ತಂದಿದೆಯಂತೆ. ನನ್ನ ಮಗಳು ಒಬ್ಬಂಟಿಯಾಗಿ ಜೀವನ ಸಾಗಿಸುವುದನ್ನು ಕುಳಿತುಕೊಳ್ಳಬೇಕು ಮತ್ತು ಬಲೂನು ಮಾರುವ ಕೆಲಸವನ್ನು ಬಿಟ್ಟು ಒಳ್ಳೆಯ ಶಿಕ್ಷಣವನ್ನು ಪಡೆಯಬೇಕು ಎನ್ನುವುದು ಈ ತಾಯಿಯ ಮಹದಾಸೆಯಾಗಿದೆ. ಸದ್ಯದ ಮಟ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಈ ಹುಡುಗಿ ಇನ್ಮುಂದೆ ಸಿನಿಮಾಗಳಲ್ಲಿ ಅಥವಾ ಧಾರವಾಹಿಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.