ಸ್ವಾರ್ಥದಿಂದ ತುಂಬಿರುವಂತ ಜನಗಳ ಮಧ್ಯೆ ಇಲ್ಲೊಬ್ಬ ನಿಸ್ವಾರ್ಥ ಜೀವಿ ತಮ್ಮ ಕೈಲಾದಷ್ಟು ನಿರ್ಗತಿಕರಿಗೆ ದಿಕ್ಕಿಲ್ಲದವರಿಗೆ ಊಟ ಬಟ್ಟೆ ಕೊಟ್ಟು ಹಸಿವು ನೀಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ, ಹೌದು ನಿಜಕ್ಕೂ ಇವರ ಈ ಕಾರ್ಯ ವೈಖರಿಗೆ ಮೆಚ್ಚಲೇ ಬೇಕು ಅದೆಷ್ಟೋ ಜನ ಹೊಟ್ಟೆ ಹಿಟ್ಟಿಲ್ಲದೆ ದೇಹಕ್ಕೆ ಬಟ್ಟೆ ಇಲ್ಲದೆ ಇನ್ನು ಬದುಕುತ್ತಿದ್ದಾರೆ, ಅಂತವರಿಗೆ ಈ ದಂಪತಿ ಆಸರೆಯಾಗುತ್ತಿದ್ದಾರೆ.
ಬಸ್ಟ್ಯಾಂಡ್ ರೈಲ್ವೆ ನಿಲ್ದಾಣ ಮುಂತಾದ ಸ್ಥಳಗಳಲ್ಲಿ ಯಾರು ಊಟವಿಲ್ಲದೆ ಬಟ್ಟೆಯಿಲ್ಲದೆ ಭಿಕ್ಷೆ ಬೇಡುತ್ತ ಇರುತ್ತಾರೋ ಅಂತವರಿಗೆ ಈ ದಂಪತಿ ಊಟ ಬಟ್ಟೆ ಕೊಟ್ಟು ಆಸರೆಯಾಗುತ್ತಿದ್ದಾರೆ, ಅಷ್ಟಕ್ಕೂ ಇವರು ಯಾರು ಇವರ ಸೇವೆ ಬಡವರಿಗೆ ಹೇಗೆ ಸಹಕಾರಿಯಾಗಿದೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ ಬನ್ನಿ.
ಹೆಸರು ಕರಿಯಪ್ಪ ಶಿರಹಟ್ಟಿ ಎಂಬುದಾಗಿ ಮೂಲತಃ ಗದಗ ಜಿಲ್ಲೆಯವರು ಇವರು ನೆಲೆಸಿರುವುದು ಸದ್ಯ ಹುಬ್ಬಳ್ಳಿಯಲ್ಲಿ ಇವರ ಕುಟುಂಬ ಸದಸ್ಯರು ಎಲ್ಲರು ಕೂಡ ಇವರಿಗೆ ಸಹಾಯ ಮಾಡುತ್ತಾರೆ, ಇವರು ಹುಬ್ಬಳಿಯ ನನಗರದಲ್ಲಿ ಬಾಡಿಗೆ ಮನೆಯಲ್ಲಿದ್ದು ಆಹಾರವನ್ನು ತಯಾರಿಸಿ ನಿರ್ಗತಿಕರಿಗೆ ತಮ್ಮ ಸ್ವಂತ ಹಣದಿಂದ ಊಟ ಬಟ್ಟೆ ಕೊಡುವ ಕೆಲಸ ಮಾಡುತ್ತಾರೆ. ಇವರು ಹೇಳಿಕೊಳ್ಳುವಂತ ಶ್ರೀಮಂತ ವ್ಯಕ್ತಿಯೇನಲ್ಲ ಆದ್ರೆ ಮಾನವೀಯತೆಯ ದೃಷ್ಟಿಯಿಂದ ತನ್ನ ದುಡಿಮೆಯ ಹಣದಲ್ಲಿ ಈ ಕಾಯಕಕ್ಕೆ ಕೈಹಾಕಿದ್ದಾರೆ.
ಕರಿಯಪ್ಪನವರು ಈ ಹಿಂದೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು ನಂತರ ಇದೀಗ ತೆಂಗಿನಕಾಯಿ ವ್ಯಾಪಾರದಲ್ಲಿ ತೊಡಗಿರುವ ಸಣ್ಣ ವ್ಯಾಪಾರಿಯಾಗಿದ್ದಾರೆ, ಇವರ ಪತ್ನಿ ಹಾಗೂ ತಾಯಿ ಮನೆಯಲ್ಲೇ ರೊಟ್ಟಿ ಮಾಡಿ ಮಾರಾಟ ಮಾಡುತ್ತಾರೆ, ಅಷ್ಟೇ ಅಲ್ಲದೆ ಎನ್‌ಜಿಒವೊಂದನ್ನು ಪ್ರಾರಂಭಿಸಿ ಆ ಮೂಲಕ ಕಳೆದ ಹಲವಾರು ವರ್ಷಗಳಿಂದ ನಿರ್ಗತಿಕರಿಗೆ ಸೇವೆ ಸಲ್ಲಿಸುತ್ತಿದ್ದಾರೆ, ಆಗಂತ ಇವರಿಗೇನು ಲಕ್ಷಗಟ್ಟಲೆ ಹಣ ಬರುತ್ತಿಲ್ಲ ತಮ್ಮ ಸ್ವಂತ ಹಣದಿಂದಲೇ ಅನ್ನ ನೀರು ಬಟ್ಟೆ ಕೊಟ್ಟು ನಿರ್ಗತಿಕರಿಗೆ ಆಸರೆಯಾಗಿದ್ದಾರೆ.
ಇವರು ಹೇಳೋದು ಇಷ್ಟೇ ನಿರಗತಿಕರಿಗೆ ಹಣ ಕೊಡುವ ಬದಲು ಅನ್ನ ನೀರು ಬಟ್ಟೆ ಕೊಟ್ಟು ಆಸರೆಯಾದರೆ ಸಾಕು ಆ ಕ್ಷಣಕ್ಕಾದರೂ ಆ ವ್ಯಕ್ತಿಗಳ ದಾಹ ಹಸಿವು ನೀಗಿಸಬಹುದು ಅಲ್ಲವೇ ಎಂಬುದಾಗಿ ಹೇಳುತ್ತಾರೆ. ಅದೇನೇ ಇರಲಿ ನಿಜಕ್ಕೂ ಇವರ ಈ ನಿಸ್ವಾರ್ಥ ಸೇವೆಗೆ ಜನರ ಪ್ರೋತ್ಸಹ ಸಿಗಲಿ ಇವರ ಈ ಸೇವೆ ಬಡವರಿಗಾಗಿ ಸದಾಕಾಲ ಹಾಗೆ ಇರಲಿ ಅನ್ನೋದೇ ನಮ್ಮ ಆಶಯ.