PDO ಅಧಿಕಾರಿ ಮಾಡಿದ ಪ್ಲಾನ್, ಇಡೀ ಊರೇ ಬೆಳಕು ಕಂಡಿತು

ಭಾರತವು ಹೆಚ್ಚುವರಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಆದರೆ ಎಲ್ಲ ಅಗತ್ಯವಿರುವವರಿಗೆ ವಿದ್ಯುತ್ ಸರಬರಾಜು ಮಾಡಲು ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ಹೊಂದಿರುವುದಿಲ್ಲ. ಆದರೇ ಪ್ರತಿ ತಿಂಗಳು ವಿದ್ಯುತ್ ಬಿಲ್ ಮಾತ್ರ ಹೆಚ್ಚು ಬರುತ್ತದೆ ವಿದ್ಯುತ್ ಬಿಲ್ ಕಳುಹಿಸುವವರಿಗೂ ಈ ವಸ್ತುನಿಷ್ಠ ಪ್ರಶ್ನೆಗೆ ಉತ್ತರ ಇರುವುದಿಲ್ಲ. ಆದ್ದರಿಂದ ವಿದ್ಯುತ್ ಬಿಲ್ ಬರದಂತೆ ವಿದ್ಯುತ್ ಬಿಲ್ ಕಡಿಮೆ ಮಾಡುವಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ಹಳ್ಳಿಗಳು ಪಟ್ಟಣಗಳು ​​ಮತ್ತು ನಗರಗಳಲ್ಲಿ ಸೌರ ಶಕ್ತಿಯು ವೇಗವಾಗಿ ಪ್ರವೇಶಿಸುತ್ತಿದೆ.

ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು ಅನೇಕ ಯೋಜನೆಗಳನ್ನು ನಡೆಸುತ್ತಿದೆ. ನೀರು ಅಥವಾ ಕಲ್ಲಿದ್ದಲಿನಿಂದ ಉತ್ಪತ್ತಿಯಾಗುವ ವಿದ್ಯುಚ್ಛಕ್ತಿಯ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಸೇರಿದಂತೆ ಎಲ್ಲಾ ರಾಜ್ಯ ಸರ್ಕಾರಗಳು ಸಹ ಸೌರಶಕ್ತಿಗೆ ಸಹಾಯಧನ ನೀಡುತ್ತಿವೆ. ಹೀಗಿದ್ದಾಗ ಕರೆಂಟ್ ಬಿಲ್ ಹೆಚ್ಚಾಗಿ ಬಂದು ಬಿಲ್ ಕಟ್ಟಲು ಆಗದೇ ಇದ್ದ ಸಂದರ್ಭದಲ್ಲಿ ಪಿಡಿಓ ಮಾಡಿದ ಈ ಒಂದು ಉಪಾಯಕ್ಕೆ ಈಗ ಇಡೀ ಗ್ರಾಮವೇ ಬೆಳಕು ಕಾಣುತ್ತಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ದಿನದಿನಕ್ಕೂ ಮಾಲಿನ್ಯ ಪ್ರಮಾಣ ಏರುತ್ತಿದೆ. ಇಂಧನದ ಸ್ವಾಭಾವಿಕ ಮೂಲಗಳೇ ಕಡಿಮೆ ಆಗುತ್ತಿದ್ದು. ಹಸಿರು ಹಾಗೂ ಸ್ಥಿರವಾದ ಇಂಧನ ಮೂಲಗಳು ಈ ಕ್ಷಣದ ಅಗತ್ಯವಾಗಿದೆ. ಮನೆಗಳಿಗೆ ಕೂಡ ಸೌರಶಕ್ತಿ ಬಳಕೆ ಮಾಡುವುದನ್ನು ಜನಪ್ರಿಯಗೊಳಿಸಿದ ಮೊದಲ ಕಂಪೆನಿಗಳಲ್ಲಿ ವರ್ಚಸ್ವ ಕೂಡ ಒಂದು. ಜಗತ್ತಿನಲ್ಲೇ ಅತಿ ಹೆಚ್ಚು ಪ್ರಮಾಣದ ವಿದ್ಯುತ್ ಬಳಕೆ ಮಾಡುವ ರಾಷ್ಟ್ರಗಳ ಪೈಕಿ ಭಾರತಕ್ಕೆ ನಾಲ್ಕನೇ ಸ್ಥಾನ. ವಿದ್ಯುತ್ ಶಕ್ತಿಗೆ ದಿನದಿನಕ್ಕೂ ಬೇಡಿಕೆ ಹೆಚ್ಚುತ್ತಿದೆ. ಸ್ವಾಭಾವಿಕ ಶಕ್ತಿ ಮೂಲಗಳಿಂದ ಈ ಬೇಡಿಕೆಯನ್ನು ಪೂರೈಸುವುದು ಕಷ್ಟ. ಹೀಗೇ ಮುಂದುವರಿದರೆ ವಿದ್ಯುತ್ ಕೊರತೆ ಎದುರಾಗುತ್ತದೆ. ಆದ್ದರಿಂದಲೇ ಸೌರಶಕ್ತಿ ಎಂಬುದು ನಮ್ಮ ದೇಶಕ್ಕೆ ಬಹಳ ಮುಖ್ಯವಾದದ್ದು.

ಇದೆ ರೀತಿ ಸೌರಶಕ್ತಿಯನ್ನು ಬಳಸಿಕೊಂಡು ಈ ಒಂದು ಗ್ರಾಮ ಪಂಚಾಯತಿ ಅಡಿಯಲ್ಲಿ ಬರುವ ಎಲ್ಲಾ ಮನೆಗಳೂ ಬೆಳಕು ನೋಡುವಂತೆ ಆಗಿದ್ದು ಮಾತ್ರವಲ್ಲದೆ ಅತಿಯಾದ ವಿದ್ಯುತ್ ಬಿಲ್ ಕಟ್ಟುವುದರಿಂದ ಸಹ ಪಾರಾಗಿದೆ. ಬೀದರ್ ಗ್ರಾಮ ಪಂಚಾಯತಿಯಲ್ಲಿ ಹೆಚ್ಚಿನ ಕರೆಂಟ್‌ ಬಿಲ್‌ ಬರುತ್ತಿತ್ತು. ಬಿಲ್‌ ಕಟ್ಟಲು ಅಲ್ಲಿಯ ಬೊಕ್ಕಸದಲ್ಲಿದ್ದ ಹಣವೂ ಸಹ ಖಾಲಿಯಾಗಿ ಹೇಗಾದ್ರೂ ಹಣ ಉಳಿಸಬೇಕೆಂದು ಅಲ್ಲಿನ ಪಿಡಿಒ ಹೊಸದಿಂದು ಉಪಾಯ ಮಾಡಿದರು. ಅವರ ಆ ಯೋಜನೆ ಈಗ ಯಶ್ಸಸ್ಸು ಕಂಡಿದ್ದು ರಾಜ್ಯದ ಇತರೆ ಗ್ರಾಮ ಪಂಚಾಯಿತಿಗಳಿಗೂ ಕೂಡ ಇದು ಒಂದು ಮಾದರಿಯಾಗಿದೆ.

ಬೀದರ್ ಜಿಲ್ಲೆಯ ಔರಾದ್‌ ತಾಲೂಕಿನ ಧೂಪತಮಹಾಗಾವ್​ ಗ್ರಾಮ ಪಂಚಾಯಿತಿಯ ಪಿಡಿಓ ಶಿವಾನಂದ ಔರಾದೆ ಗ್ರಾಮ ಪಂಚಾಯಿತಿಯ ಹಣ ಉಳಿಸಲು ಎರಡು ವರ್ಷದ ಹಿಂದೆ ಪಂಚಾಯ್ತಿ ಕಟ್ಟಡ ಸೇರಿದಂತೆ ಗ್ರಾಮದಲ್ಲಿ 250 ಸೋಲಾರ್ ಬೀದಿ ದೀಪಗಳನ್ನ ಅಳವಡಿಸಿದ್ದರು. ಅಲ್ಲದೇ ಗ್ರಾಮದ ಅನೇಕ ಮಂದಿಯೂ ಕೂಡ ಸೋಲಾರ್‌ ಸಿಸ್ಟಮ್‌ ಬಳಕೆ ಮಾಡೋಕೆ ಶುರು ಮಾಡಿದ್ರು. ಈ ಮೂಲಕ ಗ್ರಾಮದಲ್ಲಿ ಅತಿಯಾದ ವಿದ್ಯುತ್ ಬಳಕೆಗೆ ಕಡಿವಾಣ ಹಾಕಿದಂತೆ ಆಗಿ ಇದರಿಂದ ಗ್ರಾಮ ಪಂಚಾಯ್ತಿಗೆ ಸುಮಾರು 45 ಲಕ್ಷಕ್ಕೂ ಹೆಚ್ಚು ವಾರ್ಷಿಕ ಆದಾಯ ಸಂಗ್ರಹವಾಗುತ್ತಿದೆ.

ಇಲ್ಲಿ ಅಳವಡಿಸಲಾಗಿರುವ ಸೋಲಾರ್ ದೀಪಗಳು ಸ್ವಯಂಚಾಲಿತವಾಗಿದ್ದು ಸಂಜೆಯಾಗುತ್ತಿದ್ದಂತೆ ಗ್ರಾಮವನ್ನ ಬೆಳಗಿ, ಬೆಳಗಾಗುತ್ತಿದ್ದಂತೆ ಶಟ್‌ಡೌನ್‌ ಆಗುತ್ತವೆ. ಪಿಡಿಓ ಮಾಡಿದ ಈ ಪ್ಲಾನ್‌ಗೆ ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಸೋಲಾರ್ ವಿದ್ಯುತ್ ಅಳವಡಿಕೆಯಿಂದಾಗಿ ಯಾವಾಗಲೂ ಕರೆಂಟ್ ಇರುತ್ತದೆ. ಮನೆಗಳಲ್ಲಿ ಕರೆಂಟ್ ಇಲ್ಲದಿದ್ದರೂ ಬೀದಿಗಳಲ್ಲಿ ಬೆಳಕು ಇದ್ದೇ ಇರುತ್ತದೆ. ಈ ಯೋಜನೆ ಮೂಲಕ ಉಳಿದ ಮನೆಗಳಿಗೂ ವಿದ್ಯುತ್ ನೀಡಿದರೆ ಇನ್ನೂ ಹೆಚ್ಚಿನ ಖುಷಿಯಾಗುತ್ತದೆ ಅಂತ ಗ್ರಾಮಸ್ಥರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಒಟ್ಟಾರೆ ಇಂತಹದೊಂದು ಸಣ್ಣ ಗ್ರಾಮದಲ್ಲಿ ಪಿಡಿಓ ತಂದ ಯೋಜನೆಯಿಂದ ದುಪ್ಪಟ್ಟು ಕರೆಂಟ್‌ ಬಿಲ್‌ ಕಟ್ಟಿ ಹೈರಾಣಾಗಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

Leave a Comment