ಜಗದೀಶ್ ಚಂದ್ರ ಮಹೇಂದ್ರ ಮತ್ತು ಕೈಲಾಸ್ ಚಂದ್ರ ಮಹೇಂದ್ರ ಎನ್ನುವ ಸಹೋದರರು 1945 ಅಕ್ಟೋಬರ್ ನಲ್ಲಿ ಮೊಹಮ್ಮದ್ ಎನ್ನುವರ ಜೊತೆ ಸೇರಿ ಮಹೇಂದ್ರ ಮತ್ತು ಮಹಮ್ಮದ್ ಎನ್ನುವ ಕಂಪನಿಯೊಂದನ್ನು ಆರಂಭಿಸುತ್ತಾರೆ. ಇದು ಸ್ಟೀಲ್ ಟ್ರೇನಿಂಗ್ ಘಟಕವಾಗಿತ್ತು. ನಂತರ ಸ್ವಾತಂತ್ರ್ಯದ ಬಳಿಕ ಮಹೇಂದ್ರ ಮತ್ತು ಮಹೇಂದ್ರ ಎನ್ನುವ ಕಂಪನಿ ಆರಂಭವಾಯಿತು. ಇಂದಿಗೂ ಮಹೇಂದ್ರ ಅಂದ್ರೆ ನೆನಪಿಗೆ ಬರೋದೇ ದೇಶದ ಹೊಲ ಗದ್ದೆಗಳಲ್ಲಿ ಓಡಾಡುವ ಸ್ಟ್ರಾಂಗ್ ಅದ ಮಹೇಂದ್ರ ಟ್ರಾಕ್ಟರ್ ಗಳು!
ಈ ಇಬ್ಬರು ಸಹೋದರರು ವಿದೇಶಕ್ಕೆ ಹೋದಾಗ ಅಲ್ಲಿನ ಜೀಪ್ ಮಾದರಿಯನ್ನು ನೋಡಿಕೊಂಡು ಬಂದು ದೇಶದಲ್ಲಿಯೂ ಇಂತಹ ಗಾಡಿ ರಸ್ತೆಯಲ್ಲಿ ಓಡುವುದಕ್ಕೆ ಬೇಕು ಅಂತ ಮಹೇಂದ್ರ ಜೀಪ್ಗಳನ್ನು ತಯಾರಿಸುತ್ತಾರೆ. ಆಗಿಲ್ಲ ಪೊಲೀಸರಲ್ಲಿ ಮಾತ್ರ ಹೆಚ್ಚಾಗಿ ಮಹೇಂದ್ರ ಬಳಸುತ್ತಿದ್ದರು. ಇಂದು ಈ ಸಂಸ್ಥೆಯ ರೂವಾರಿ ಈ ಸಹೋದರ ಮೊಮ್ಮಗನಾದ ಆನಂದ್ ಮಹೇಂದ್ರ.
ಹಾರ್ಡ್ವರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮುಗಿಸಿ ದೇಶಕ್ಕೆ ಹಿಂದುರಿಗೆ ಬಂದು ಅಪ್ಪ ಹಾಗೂ ತಾತನಂತೆ ಬಿಸಿನೆಸ್ ನೋಡಿಕೊಳ್ಳುವತ ಗಮನಹರಿಸಿದ್ರು. ಅಮೆರಿಕನ್ ಕಂಪನಿಯ ಜೊತೆ ಡಯಟ್ ಆಗಿ ದೇಶದಲ್ಲಿ ಟ್ರ್ಯಾಕ್ಟರ್ ಮತ್ತು ಕೃಷಿಗೆ ಬೇಕಾಗಿರುವ ಉಪಕರಣಗಳನ್ನು ತಯಾರಿಸಿತು ಮಹೇಂದ್ರ ಕಂಪನಿ. ಮಹೇಂದ್ರ ಟ್ಯಾಕ್ಟರ್ ಗಳು ಕೇವಲ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ ವಿದೇಶಗಳಲ್ಲಿಯೂ ಕೂಡ ಮಹೇಂದ್ರ ಟ್ಯಾಕ್ಟರ್ ಗಳು ಇಂದಿಗೋ ಫೇಮಸ್. ತಮ್ಮದೇ ಕಂಪನಿಯಲ್ಲಿ ಸಾಮಾನ್ಯ ಕೆಲಸಗಾರರಂತೆ ಕೆಲಸ ಮಾಡಿದ್ದ ಆನಂದ್ ಮಹೇಂದ್ರ ಕ್ರಮೇಣವಾಗಿ ಮೇಲಕ್ಕೆ ಬಂದು 2012ರ ಹೊತ್ತಿಗೆ ಕಂಪನಿಯ ಎಂಡಿ ಆದರು. ಈ ಸಮಯದಲ್ಲಿ ವಿದೇಶಿ ಕಂಪನಿಯಾದ ಫೋರ್ಡ್ ಜೊತೆ ಕೈಜೋಡಿಸಿ ಮಹೇಂದ್ರ ಕಂಪನಿಯಿಂದ ಒಂದು ಕಾರ್ ತಯಾರಿಸಲಾಯಿತು. ಅದುವೇ ಮಹೇಂದ್ರ ಎಕ್ಸ್ ಕಾರ್ಡ್.
ಆದರೆ ಈ ಕರಣ ದೇಶದಲ್ಲಿ ಯಾರು ಒಪ್ಪಿಕೊಳ್ಳಲೇ ಇಲ್ಲ ಮಹೇಂದ್ರ ಅವರು ದೊಡ್ಡ ವೈಫಲ್ಯವನ್ನು ಎದುರಿಸಿದರು. ಈ ವೈಫಲ್ಯದ ನಂತರ ಎದೆಕುಂದದ ಆನಂದ್ ಮಹೇಂದ್ರ ಅವರು ತಮ್ಮದೇ ಯೋಚನೆಯಲ್ಲಿ ತಮ್ಮದೇ ಕಂಪೆನಿಯಿಂದ ಒಂದು ಹೊಸ ಕಾರ್ ಅನ್ನ ಉತ್ಪಾದಿಸಿದರು. ಅದುವೇ ಬುಲೆರೋ ಎಕ್ಸ್ ಯು ವಿ. ಬುಲೆರೋ ಭಾರತದಲ್ಲಿ ಅತ್ಯಂತ ಯಶಸ್ವಿಯಾಯಿತು. ಆಗಿನ ಕಾಲದಲ್ಲಿ ಮಾರಾಟವಾಗುತ್ತಿದ್ದ ಟಾಪ್ ನಂಬರ್ ಒನ್ ಕಾರು ಬುಲೆರೋ ಆಗಿತ್ತು.
ಆದರೆ ಇದಕ್ಕೂ ಅತಿವ ಪೈಪೋಟಿ ನೀಡಿದ ಮಾರುತಿ ಮೊದಲಾದ ಕಂಪನಿಗಳು ಮಹೇಂದ್ರ ಕಂಪನಿ ಅತೀವ ನಷ್ಟವನ್ನು ಅನುಭವಿಸುವುದಕ್ಕೆ ಕಾರಣವಾದವು. ಆದರೆ ಎಷ್ಟೇ ನಷ್ಟವನ್ನು ಅನುಭವಿಸಿದರೂ ತಮ್ಮ ಪ್ರಯತ್ನದಿಂದ ಹಿಂದೆ ಸರಿಯಲಿಲ್ಲ ಆನಂದ ಮಹೇಂದ್ರ ಮಹೇಂದ್ರ ಕಂಪನಿ ಸ್ಕಾರ್ಪಿಯೋ ಎನ್ನುವ ರಫ್ ಅಂಡ್ ಟಫ್ ಗಾಡಿಯನ್ನ ಬಿಡುಗಡೆ ಮಾಡ್ತು. ಮಹಿಂದ್ರಾ ಇವರಿಗೆ ಅನುಭವಿಸಿದ ಎಲ್ಲಾ ನಷ್ಟಗಳನ್ನ ಸ್ಕಾರ್ಪಿಯೋ ತುಂಬಿಕೊಟ್ಟಿದ್ದು.
ಹೀಗೆ ಹಂತ ಹಂತವಾಗಿ ಮೇಲೆ ಬಂದ ಆನಂದ ಮಹೇಂದ್ರ ಇಂದು ಟ್ರ್ಯಾಕ್ಟರ್ ಕಾರು, ಜೀಪ್ ಗಳನ್ನ ಮಾತ್ರವಲ್ಲ ಫೈನಾನ್ಸಿಯಲ್, ಅಗ್ರಿ ಏಜೆನ್ಸಿ ಎಜುಕೇಶನ್ ಐಟಿ ಮೊದಲಾದ ಎಲ್ಲಾ ಕ್ಷೇತ್ರಗಳಲ್ಲಿಯು ಕೈಜೋಡಿಸಿದೆ. ಒಟ್ಟಿನಲ್ಲಿ ಆನಂದ್ ಮಹೇಂದ್ರ ಅವರ ಪರಿಶ್ರಮ, ಛಲ ಮಹೇಂದ್ರ ಕಪನಿಯನ್ನು ಈ ಮಟ್ಟಿಗೆ ಬೆಳೆಸಿದ್ದು ಮಾತ್ರವಲ್ಲದೆ ಹಲವು ಉದ್ಯಮಿಗಳಿಗೆ ಮಾದರಿ.