ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರು ಮನೆಯ ಜವಾಬ್ದಾರಿ ಹೊತ್ತು ಆಟೋ ರಿಕ್ಷಾ ಚಾಲನೆ ಮಾಡುತ್ತಿರುವ ಮಹಿಳೆ

ಸಾಮಾನ್ಯವಾಗಿ ಮಹಿಳೆಯರು ಮನೆಗೆಲಸ ನೋಡಿಕೊಳ್ಳುವುದು ಮತ್ತು ಪುರುಷರು ಹೊರಗಡೆ ಹೋಗಿ ದುಡಿದು ಮನೆಯನ್ನು ನಿಭಾಯಿಸುವುದು ಬಹಳ ಹಿಂದಿನಿಂದಲೂ ನಡೆದುಬಂದಂತಹ ಲೋಕ ರೂಡಿ, ಆದರೆ ಇಂದಿನ ದಿನಗಳಲ್ಲಿ ನಾವು ಹಾಗೆ ತಿಳಿದುಕೊಂಡರೆ ತಪ್ಪಾಗುತ್ತದೆ ಯಾಕಂದ್ರೆ ಮಹಿಳೆಯರು ತಾವು ಯಾರಿಗೇನು ಕಮ್ಮಿ ಇಲ್ಲ ಎಂಬಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಹ ತಮ್ಮನ್ನು ತಾವು ತೊಡಗಿಸಿಕೊಂಡವರಿದ್ದಾರೆ ಪೊಲೀಸ್ ಇಲಾಖೆ ಆಸ್ಪತ್ರೆ ಖಾಸಗಿ ಕಂಪನಿ ಹೀಗೆ ಇನ್ನೂ ಹತ್ತು ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರೂ ಸಹ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಆದರೆ ಈ ಎಲ್ಲಾ ಕೆಲಸಗಳನ್ನು ನಿಭಾಯಿಸುವ ಮಹಿಳೆಯರು ಚಾಲಕ ವೃತ್ತಿಯನ್ನು ನಿಭಾಯಿಸುವುದು ತುಸು ಕಷ್ಟವೇ ಸರಿ

ಆದರೆ ನಾವು ಹೇಳಬಯಸುವುದು ಆಟೋ ಚಾಲಾಕಿಯಾದ ಮಹಿಳೆಯ ಬಗ್ಗೆ
ಅಹಮದಾಬಾದ್ ನಗರದ ವಾಸಿಯಾದ ಅಂಕಿತ ಎಂಬ ಮಹಿಳೆಯ ಬಗೆಗಿನ ಒಂದು ಚಿಕ್ಕ ನೋಟವನ್ನ ತಮ್ಮ ಹುಟ್ಟಿನಿಂದಲೂ ಅಹಮದಾಬಾದ್ ನಗರದಲ್ಲೇ ಇರುವ 35 ರ ಮಹಿಳೆ ಈ ಅಂಕಿತ ಹೌದು ಅಂಕಿತ ಹುಟ್ಟಿದ್ದು ಬೆಳೆದದ್ದು ಎಲ್ಲ ಅಹಮದಾಬಾದ್ ನಲ್ಲೇ ಆದರೆ ಅಂಕಿತ ಈಗ ತಾನೇ ಆಟೋ ಓಡಿಸುತ್ತಾ ಜೀವನ ಸಾಗಿಸುತ್ತಿದ್ದಾರೆ ತಂದೆ ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಹೊಂದಿರುವ ಅಂಕಿತ ಅಹಮದಾಬಾದ್ ನಲ್ಲಿ ಆಟೋ ಓಡಿಸುತ್ತಾ ತಿಂಗಳಿಗೆ ಇಪ್ಪತ್ತರಿಂದ ಇಪ್ಪತ್ತೈದು ಸಾವಿರ ರುಪಾಯಿಗಳನ್ನು ಸಂಪಾದನೆ ಮಾಡುತ್ತಿದ್ದರಲ್ಲದೆ ತಾನೇ ದುಡಿದು ಮನೆಯ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ

ತಿಂಗಳಿಡೀ ಆಟೋ ಓಡಿಸುವ ಅಂಕಿತ ತಾನು ದುಡಿದ ಹಣದಿಂದ ತನ್ನ ತಾಯಿಯನ್ನ ಮನೆಯ ಖರ್ಚು ವೆಚ್ಚಗಳನ್ನು ಹಾಗೂ ಸಹೋದರಿಯರ ವಿದ್ಯಾಭ್ಯಾಸದ ಖರ್ಚನ್ನೂ ಸಹ ತಾವೇ ಬರಿಸುತ್ತಿದ್ದಾರೆ ಅಷ್ಟಕ್ಕೂ ಈ ಮಹಿಳೆ ತಂದೆ ಇದ್ದರೂ ಆಟೋ ಓಡಿಸುತ್ತಿರಿದ್ಯಾಕೆ ಗೊತ್ತೇ ತನ್ನ ತಂದೆಯು ಅನಾರೋಗ್ಯದಿಂದ ಬಳಲುತ್ತಿದ್ದು ಅವರಲ್ಲಿ ದುಡಿಯುವ ಶಕ್ತಿಯಿಲ್ಲದ ಕಾರಣ ಸಂಪೂರ್ಣ ಮನೆಯ ಜವಾಬ್ದಾರಿಯನ್ನು ತಾವೇ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ ಅಲ್ಲದೆ ಅಂಕಿತಾ ಮೊದಲಿಗೆ ಒಂದು ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದು ಎಂಟು ಸಾವಿರ ಸಂಬಳ ಪಡೆಯುತ್ತಿದ್ದರು ಆದರೆ ಆ ಸಂಬಳ ತಮಗೆ ಮನೆಯನ್ನು ನಿಭಾಯಿಸಲು ಮತ್ತು ತಮ್ಮ ಸಹೋದರಿಯರ ವಿದ್ಯಾಭ್ಯಾಸಕ್ಕಾಗಿ ಸಾಕಾಗುತ್ತಿರಲಿಲ್ಲವಾದ್ದರಿಂದ ಅಂಕಿತ ಲೋನ್ ಮೂಲಕ ತಾವೇ ಆಟೋ ಖರೀದಿಸಿ ಇಂದು ಮಾಸಿಕ ಇಪ್ಪತ್ತರಿಂದ ಇಪತ್ತೈದು ಸಾವಿರಗಳನ್ನು ಸಂಪಾದಿಸುತ್ತಿದ್ದಾರೆ

ಅಷ್ಟಕ್ಕೂ ಇದೇನು ಹೊಸದಲ್ಲ ಯಾಕಂದ್ರೆ ಇಂತಹ ಸುಮಾರು ಮಹಿಳೆಯರು ನಮ್ಮ ಸುತ್ತ ಮುತ್ತಲೂ ಇದ್ದಾರೆ ಆದರೆ ನಾವು ಹೇಳುತ್ತಿರುವ ಅಹಮಹದಾಬಾದ್ ನ 35 ರ ಮಹಿಳೆ ಅಂಕಿತ ತಾನು ಚಿಕ್ಕ ವಯಸ್ಸಿನಲ್ಲಿಯೇ ಪೋಲಿಯೋಗೆ ತುತ್ತಾಗಿ ಒಂದು ಕಾಲನ್ನು ಕಳೆದುಕೊಂಡಿದ್ದಾರೆ, ಆದರೂ ಸಹ ಒಂದೇ ಕಾಲಿನಲ್ಲಿ ಆಟೋ ಓಡಿಸುತ್ತಾ ಮನೆಯ ಸಂಪೂರ್ಣ ಜವಾಬ್ದಾರಿಯನ್ನೂ ಕೂಡ ನಿಭಾಯಿಸುತ್ತಾ ಎಲ್ಲರಿಗೂ ಮಾದರಿಯಾಗಿದ್ದಾರೆ ಇಂತಹ ಲಕ್ಷಾಂತರ ಜನರು ಇವರನ್ನು ನೋಡಿ ಕಲಿಯಬೇಕಿದೆ.

Leave a Comment