ಹುಡುಗರಿಗಿಂತ ಹುಡುಗಿಯರೇ ಈ ಕೆಲಸವನ್ನು ಹೆಚ್ಚು ಮಾಡ್ತಾರಂತೆ ನಿಜವೇ?

ಆಹಾರ, ನಿದ್ರೆ ಹಾಗೂ ಬ್ರಹ್ಮಚರ್ಯ ಪಾಲನೆ ಇವು ಮೂರು ಮನುಷ್ಯನ ಜೀವನ ನಿರ್ವಹಣೆಯಲ್ಲಿ ಆಧಾರ ಸ್ತಂಭಗಳು. ಇವುಗಳಲ್ಲಿ ನಿದ್ರೆ ಅತಿ ಮುಖ್ಯವಾಗಿ ಬೇಕಾದ ಅಂಶ. ಬದಲಾದ ಜೀವನ ಶೈಲಿ, ಫಾಸ್ಟ್ ಫುಡ್, ಜಂಕ್ ಫುಡ್‍ಗಳ ಸೇವನೆ, ಅತಿಯಾದ ಕೆಲಸದ ಒತ್ತಡ, ಅನಿಯಮಿತ ಕಾಲದಲ್ಲಿ ಆಹಾರ ಸೇವನೆ, ಅನಿಯಮಿತವಾದ ದಿನನಿತ್ಯದ ಚಟುವಟಿಕೆಗಳಿಂದಾಗಿ ನಿದ್ರಾಹೀನತೆ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಂಡು ಬರುವಂಥಹ ಸಮಸ್ಯೆ. ನಮ್ಮ ಜೀವನಕ್ಕೆ ಅತ್ಯವಶ್ಯಕವಾಗಿ ಬೇಕಾಗಿರುವುದು ಹಾಗೂ ನಮ್ಮ ಆರೋಗ್ಯಕರ ಜೀವನಕ್ಕೆ ನಿದ್ದೆ ಎಂಬುದು ಬಹಳ ಮುಖ್ಯವಾದದ್ದು ಈ ನಿದ್ದೆ. ಒಬ್ಬ ವ್ಯಕ್ತಿಗೆ ಪ್ರತಿನಿತ್ಯ 6 ರಿಂದ 8 ಗಂಟೆಗಳ ಸಮಯ ಅವಶ್ಯವಾಗಿ ಮಲಗಲೇ ಬೇಕು. ಹಾಗಂತ ಹೆಚ್ಚು ಸಮಯ ಎಂದರೆ 8 ಗಂಟೆಗೂ ಹೆಚ್ಚು ಸಮಯ ನಿದ್ರಿಸಿದರೆ ನಿಮಗೆ ಆರೋಗ್ಯದಲ್ಲಿ ಸಮಸ್ಯೆ ಬರುವುದಿ ಕಟ್ಟಿಟ್ಟ ಬುತ್ತಿ. ವಿಪರೀತವಾದ ನಿದ್ದೆಯಿಂದಾಗಿ ನಿಮಗೆ ಜೀರ್ಣ ಕ್ರಿಯೆಯಲ್ಲಿ ತೊಂದರೆ, ಬೊಜ್ಜಿನ ಸಮಸ್ಯೆ ಕಾಡ ತೊಡುಗುತ್ತದೆ. ಆದುದರಿಂದ ನಮ್ಮ ದೇಹ 6 ರಿಂದ 8 ಗಂಟೆಗಳ ಕಾಲ ವಿಶ್ರಮಿಸದರೆ ಸಾಕು.

ಹೆಲ್ಸೆಂಕಿ ವಿಶ್ವ ವಿದ್ಯಾಲಯದ ಸಂಶೋಧಕರು ಸುಮಾರು 20 ವರ್ಷ ವಯಸ್ಸಿನ 17 ಸಾವಿರ ಮಂದಿ ಮೇಲೆ 2 ವಾರಗಳ ಕಾಲ ಸಂಶೋಧನೆ ನಡೆಸಿದಾಗ ಈ ಸಂಗತಿ ಹೊರಬಿದ್ದಿದೆ. ಆರೋಗ್ಯರ ಜೀವನಕ್ಕೆ ನಿದ್ದೆ ಕೂಡ ಅತ್ಯಾವಶ್ಯಕ. ಒಬ್ಬ ವ್ಯಕ್ತಿಗೆ ಪ್ರತಿದಿನ 6 ರಿಂದ 8 ಹೊತ್ತು ನಿದ್ದೆ ಅವಶ್ಯಕವಾಗಿದೆ. ಹಾಗೆಂದ ಮಾತ್ರಕ್ಕೆ ಅತಿಹೆಚ್ಚು ನಿದ್ದೆ ಮಾಡಿದರೂ ಸಮಸ್ಯೆ ತಪ್ಪಿದ್ದಲ್ಲ. ವಿಪರೀತ ನಿದ್ದೆ ಮಾಡಿದರೆ ಬೊಜ್ಜಿನ ಸಮಸ್ಯೆ, ಜೀರ್ಣ ಕ್ರೀಯೆ ಸಮಸ್ಯೆಗೆ ಕಾರಣವಾಗುತ್ತಿದೆ. ಹಾಗಾಗಿ ದಿನದಲ್ಲಿ 6 ರಿಂದ 8 ಗಂಟೆಯಷ್ಟು ಹೊತ್ತು ನಿದ್ದೆ ಅವಶ್ಯಕ. ನಿದ್ದೆ ವಿಚಾರ ಬಂದಾಗೆಲ್ಲ ಯುವಕರು ಹೆಚ್ಚು ನಿದ್ದೆ ಮಾಡುತ್ತಾರೋ ಅಥವಾ ಯುವತಿಯರು ಹೆಚ್ಚು ನಿದ್ದೆ ಮಾಡುತ್ತಾರೋ? ಎನ್ನುವ ಪ್ರಶ್ನೆ ಮೂಡುತ್ತದೆ. ಯುವಕರು ಹೆಚ್ಚು ನಿದ್ದೆ ಮಾಡುತ್ತಾರೆ ಎನ್ನುವುದು ಯುವತಿಯರ ಆರೋಪ. ಯುವತಿಯರೇ ಹೆಚ್ಚು ನಿದ್ದೆ ಮಾಡುತ್ತಾರೆ ಎನ್ನುವುದು ಯುವಕರ ವಾದ.

ಹಗಲಿನ ಸಮಯ ನಿದ್ರಿಸುವುದನ್ನು 30 ನಿಮಿಷಗಳವರೆಗೆ ಸೀಮಿತಗೊಳಿಸಬೇಕು. ಇದನ್ನು ನೇಪ್ಪಿಂಗ್‌ ಅಥವಾ ಕಿರು ನಿದ್ರೆ ಎನ್ನುತ್ತಾರೆ. ಆದರೂ 20-30 ನಿಮಿಷಗಳ ಕಿರು ನಿದ್ರೆಯ ಮನಸ್ಥಿತಿ, ಜಾಗರೂಕತೆ ಮತ್ತು ಕಾರ್ಯಕ್ಷ ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕೆಫೀನ್‌ ಮತ್ತು ನಿಕೋಟಿನ್‌ ಮುಂತಾದ ಉತ್ತೇಜಕಗಳನ್ನು ನಿದ್ರೆಯ ಸಮಯಕ್ಕೆ ಹತ್ತಿರವಿರುವುದನ್ನು ತಪ್ಪಿಸುವುದು. ಮತ್ತು ಇದು ಮದ್ಯಪಾನಕ್ಕೆ ಬಂದಾಗ, ಮಿತಗೊಳಿಸುವಿಕೆ ಪ್ರಮುಖವಾಗಿರುತ್ತದೆ. ಮದ್ಯವು ವೇಗವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಆದರೆ ಮಲಗುವ ಸಮಯಕ್ಕೆ ತುಂಬಾ ಹತ್ತಿರದಲ್ಲಿಯೇ ರಾತ್ರಿಯ ಎರಡನೇ ಅರ್ಧದಲ್ಲಿ ತೊಂದರೆ ಆಗಬಹುದು. ಏಕೆಂದರೆ ದೇಹವು ಆಲ್ಕೊಹಾಲ್‌ ಅನ್ನು ಹೊರಹಾಕುವ ಪ್ರಕ್ರಿಯೆಯನ್ನು ಪ್ರಾರಂಭ ಮಾಡುತ್ತದೆ. ಉತ್ತಮ ಗುಣಮಟ್ಟದ ನಿದ್ರೆಯನ್ನು ಉತ್ತೇಜಿಸಲು ವ್ಯಾಯಾಮ ಅತ್ಯಗತ್ಯ. ವಾಯುವಿಹಾರ ಅಥವಾ ಸೈಕ್ಲಿಂಗ್‌ನಂತಹ ಏರೋಬಿಕ್‌ ವ್ಯಾಯಾಮದ ಸುಮಾರು 10 ನಿಮಿಷಗಳ ಕಾಲ ಮಾಡಿದಾಗ, ರಾತ್ರಿಯ ನಿದ್ರೆಯ ಗುಣಮಟ್ಟವನ್ನು ತೀವ್ರವಾಗಿ ಸುಧಾರಿಸಬಹುದು. ಉತ್ತಮ ನಿದ್ರೆಗಾಗಿ ಹೆಚ್ಚಿನ ಜನರು ನಿದ್ರೆಗೆ ಹತ್ತಿರವಿರುವ ಸಮಯಕ್ಕೆ ಶ್ರಮದಾಯಕ ಕೆಲಸಗಳನ್ನು ತಪ್ಪಿಸಬೇಕು.

ನಿದ್ರೆಗೆ ಮುಂಚೆ ಭಾರೀ ಅಥವಾ ಸಮೃದ್ಧ ಆಹಾರಗಳು, ಕೊಬ್ಬಿನ ಅಥವಾ ಹುರಿದ ಊಟ, ಮಸಾಲೆ ಭಕ್ಷ ್ಯಗಳು, ಸಿಟ್ರಸ್‌ ಹಣ್ಣುಗಳು ಮತ್ತು ಕಾರ್ಬೊನೇಟೆಡ್‌ ಪಾನೀಯಗಳು ಕೆಲವು ಜನರಿಗೆ ಅಜೀರ್ಣವನ್ನು ಉಂಟು ಮಾಡಬಹುದು. ಇದು ಬೆಡ್ಟೈಮ್‌ ಹತ್ತಿರ ಸೇವಿಸಿದಾಗ, ಅದು ನಿದ್ರಾಹೀನತೆಗೆ ಕಾರಣವಾಗುವ ನೋವಿನ ಎದೆಯುರಿಗೆ ಕಾರಣವಾಗಬಹುದು. ನೈಸರ್ಗಿಕ ಬೆಳಕನ್ನು ಸಾಕಷ್ಟು ಮಾನ್ಯತೆ ಕೊಟ್ಟು ನಮ್ಮ ದೈನಂದಿನದ ಕಾರ್ಯಗಳಲ್ಲಿ ಮಾಡಿಕೊಳ್ಳುವುದು. ಆಗಾಗ್ಗೆ ಹೊರಗಡೆ ಕೆಲಸ ಮಾಡದಿರುವ ವ್ಯಕ್ತಿಗಳಿಗೆ ಇದು ಮುಖ್ಯವಾಗಿದೆ. ದಿನದಲ್ಲಿ ಸೂರ್ಯನ ಬೆಳಕನ್ನು ಬಹಿರಂಗಪಡಿಸುವುದು, ಅಲ್ಲದೆ ರಾತ್ರಿಯಲ್ಲಿ ಕತ್ತಲೆ, ಆರೋಗ್ಯಕರ ನಿದ್ರಾಹೀನತೆ ಚಕ್ರವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಯಾರು ಅತೀ ಹೆಚ್ಚು ನಿದ್ರಿಸುತ್ತರೆ ಎನ್ನುವ ಈ ಪ್ರಶ್ನೆಗೆ ಈಗ ಸಮೀಕ್ಷೆಯೇ ಉತ್ತರ ನೀಡಿದೆ. ಸಮೀಕ್ಷೆಯೊಂದರ ಪ್ರಕಾರ ಅತಿ ಹೆಚ್ಚು ನಿದ್ದೆ ಮಾಡುವುದು ಹುಡುಗಿಯರಂತೆ! ಹೆಲ್ಸೆಂಕಿ ವಿಶ್ವ ವಿದ್ಯಾಲಯದ ಸಂಶೋಧಕರು ಸುಮಾರು 20 ವರ್ಷ ವಯಸ್ಸಿನ 17 ಸಾವಿರ ಮಂದಿ ಮೇಲೆ 2 ವಾರಗಳ ಕಾಲ ಸಂಶೋಧನೆ ನಡೆಸಿದಾಗ ಈ ಸಂಗತಿ ಹೊರಬಿದ್ದಿದೆ. ಸಂಶೋಧನೆಯ ಪ್ರಕಾರ ಯುರೋಪ್ ಮತ್ತು ಉತ್ತರ ಅಮೆರಿಕ ಯುವಕರು ಹೆಚ್ಚು ಹೊತ್ತು ನಿದ್ದೆ ಮಾಡುತ್ತಾರಂತೆ. ಆದರೆ ಏಷ್ಯನ್ನರು ಕಡಿಮೆ ನಿದ್ದೆ ಮಾಡುತ್ತಾರೆ. ಯುವಕರಿಗಿಂತ ಯುವತಿಯರು ಹೆಚ್ಚು ನಿದ್ದೆ ಮಾಡುತ್ತಾರಂತೆ. ಅದರಲ್ಲೂ ವಯಸ್ಸಾದವರು ಬೇಗನೆ ನಿದ್ದೆ ಮಾಡುತ್ತಾರೆ ಎಂದು ಹೇಳಲಾಗಿದೆ.

Leave a Comment