ಎಳನೀರು ಸೇವನೆಯಿಂದ ಏನೆಲ್ಲಾ ನಿವಾರಣೆಯಾಗುತ್ತೆ ಗೊತ್ತೇ

ಎಳೆ ನೀರು ಕುಡಿಯುವುದರಿಂದ 13 ರೋಗಗಳಿಗೆ ರಾಮಬಾಣ
ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಅತ್ಯಂತ ಸಹಕಾರಿ ಅಥವಾ ಅಮೃತ ಸಂಜೀವಿನ ಎಂದರೇ ಎಳೆನೀರು ಸಾಮಾನ್ಯವಾಗಿ ಅನೇಕ ಕಾಯಿಲೆಗಳಿಗೆ ದಿವ್ಯ ಔಷಧಿಯು ಹೌದು. ಬಳಲಿ ಬೆಂಡಾದ ದೇಹಕ್ಕೆ ಕೆಲವೇ ಗಂಟೆಗಳಲ್ಲಿ ಹೊಸ ಚೈತನ್ಯ ನೀಡಬಹುದಾದ ನೈಸರ್ಗಿಕ ಔಷದಿ ಇದು.

ಬೇಸಿಗೆ ಬಿಸಿಗೆ ಒಣಗಿದ ಬಾಯನ್ನು ತಂಪಾಗಿಸಿ ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಡುವ ಶಕ್ತಿ ಇರುವುದು ಎಳೆನೀರಿಗೆ ಮಾತ್ರ ಬಾಯಾರಿಕೆಯನ್ನು ತಣಿಸುವ ಪಾನಿಯವಾಗಿ ಸೌಂದರ್ಯ ವೃದ್ಧಿಸುವ ಸೌಂದರ್ಯ ವರ್ಧಕವಾಗಿ, ಅನಾರೋಗ್ಯದಿಂದ ಬಳಲುತ್ತಿದ್ದರೇ ಔಷದಿಯಾಗಿ ಚೈತನ್ಯ ನೀಡುವ ಅಮೃತ ಎಳೆನೀರು. ಇದನ್ನು ಸೇವಿಸುವುದರಿಂದ ದೇಹದಲ್ಲಿ ಮಹತ್ತರವಾದ ಬದಲಾವಣೆಗಳನ್ನು ಅಥವ ಚೈತನ್ಯವನ್ನು ಕಾಣಬಹುದು.

ಉಷ್ಣವಲಯಗಳಲ್ಲಿ ಅಥವಾ ಸಮುದ್ರ ತೀರಗಳಲ್ಲಿ ಬೆಳೆಯುವ ನೈಸರ್ಗಿಕ ಬೆಳೆ ಬಲಿಯದೇ ಇರುವುದೇ ಈ ಎಳೆನೀರು. ಕರಾವಳಿ ಪ್ರದೇಶಗಳಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದು ಬೆಳ್ಳಂಬೆಳಗ್ಗೆ ಎಳೆನೀರು ಕುಡಿಯುವುದರಿಂದ ಸಾಕಷ್ಟು ಉಪಯೋಗಗಳಿವೆ ಪುರಾತನ ಕಾಲದಿಂದಲು ಇದನ್ನು ಔಷಧಿ ರೂಪದಲ್ಲೂ ಅಥವಾ ಪಾನೀಯ ರೂಪದಲ್ಲೂ ಬಳಸಲಾಗುತ್ತಿದೆ. ಇದರಿಂದ ಮನುಷ್ಯ ಸಂಕುಲಕ್ಕೆ ಅಪಾರವಾದ ಲಾಭವಿದೆ, ಇದು ಅಧಿಕ ಪ್ರಮಾಣದ ಪ್ರೋಟೀನ್, ಕಾರ್ಬೋಹೈಡ್ರೇಟ್, ಖನಿಜಗಳು, ವಿವಿಧ ಜೀವ ಸತ್ವಗಳು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ.

ಎಳೆನೀರಿನ ಉಪಯೋಗಗಳು:
• ರಕ್ತದ ಒತ್ತಡದ ನಿಯಂತ್ರಣಕ್ಕಾಗಿ ಬಳಸುತ್ತಾರೆ.
• ಹೃದಯದ ಸಮಸ್ಯೆಗಳ ನಿಯಂತ್ರಣಕ್ಕಾಗಿ ಬಳಸುತ್ತಾರೆ.
• ತೂಕ ನಷ್ಟಕ್ಕು ಸಹ ಇದು ಸಹಕಾರಿಯಾಗಿದೆ.
• ದೇಹದಲ್ಲಿ ನೀರಿನ ಅಂಶವನ್ನು ಹೆಚ್ಚಿಸಿ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.
• ದೇಹದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಗೊಳಿಸುತ್ತದೆ.
• ಮೂತ್ರದ ತೊಂದರೆಗಳನ್ನು ಕಡಿಮೆಗೊಳಿಸುತ್ತದೆ.
• ಸೌಂದರ್ಯ ವರ್ಧಕವಾಗಿ ಎಳೆನೀರನ್ನು ಸೇವಿಸಬಹುದು.
• ಕೂದಲಿನ ಸಮಸ್ಯೆಗಳನ್ನು ಎಳೆನೀರು ನೀವಾರಿಸುತ್ತದೆ.

ಎಳೆನೀರಿನಿಂದ ಎಷ್ಟೊಂದು ಪ್ರಮಾಣದ ಲಾಭದಾಯಕಗಳು ಇವೆ. ನೈಸರ್ಗಿಕವಾಗಿ ಸಿಗುವ ಹಾಗೂ ಪರಿಶುದ್ಧವಾದ ಏಕ್ಯಕ ಹಣ್ಣು ಎಂದರೇ ಅದು ತೆಂಗು ಎನ್ನುತ್ತಾರೆ ಆದ್ದರಿಂದ ನೈಸರ್ಗಿಕವಾಗಿ ಸೀಗವ ಎಳೆನೀರಿನಿಂದ ಇಷ್ಟೇಲ್ಲ ಲಾಭಗಳಿವೆ.

Leave a Comment