ಪ್ರಯಾಣ ಮಾಡುವಾಗ ವಾಂತಿ ಬರೋದೇಕೆ, ಇದಕ್ಕೆ ಪರಿಹಾರ ನೋಡಿ

ಪ್ರಯಾಣ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ತುಂಬಾ ಇಷ್ಟ. ಸಂಬಂಧಿಕರ ಮನೆಗೆ ಹೋಗುವುದು, ಪ್ರವಾಸ, ಟೂರ್, ಹೋಗುವುದು ಆಸಕ್ತಿ. ಆದರೆ ಬಸ್ಸು, ಕಾರುಗಳಲ್ಲಿ ಪ್ರಯಾಣಿಸುವುದು ಒಬ್ಬರಿಗೆ ಹಿತಕರ ಇನ್ನೊಬ್ಬರಿಗೆ ತಲೆ ಸುತ್ತವುದು, ಹೊಟ್ಟೆ ತೊಳಸುವುದು, ಇದರಿಂದ ವಾಂತಿಯಾಗುವುದು ಈ ಸಮಸ್ಯೆ ಕಾಡುತ್ತದೆ. ಕೆಲವರಿಗೆ ತಾವು ಪ್ರಯಾಣ ಮಾಡುವಾಗ ವಾಂತಿ ಆಗುತ್ತದೆ ಎಂದು ಮೊದಲೇ ಗೊತ್ತಿರುತ್ತದೆ ಹೀಗಾಗಿ ಮಾತ್ರೆ, ಕವರ್ ಗಳನ್ನು ಸಿದ್ಧತೆ ಮಾಡಿಕೊಂಡು ಬಂದಿರುತ್ತಾರೆ. ಇದು ನಮ್ಮ ದೇಹದಲ್ಲಿ ಯಾವ ರೀತಿ ಆಗುತ್ತದೆ? ವಾಂತಿ ಯಾಕೆ ಆಗುತ್ತದೆ ? ಈ ಸಮಸ್ಯೆಗಳಿಂದ ಹೇಗೆ ತಪ್ಪಿಸಿಕೊಳ್ಳಬಹುದು? ಕೆಲವು ಮಾಹಿತಿಗಳಿವೆ ಈ ಕೆಳಗೆ ನೋಡೊಣ.

ಕಣ್ಣು ಮತ್ತು ಕಿವಿ ಪಂಚೇಂದ್ರಿಯಗಳಲ್ಲಿ ಒಂದು. ಕಣ್ಣು ಕಿವಿಯ ನಡುವೆ ತಾಳಮೇಳ ಇರುತ್ತದೆ. ಕಣ್ಣು ಮತ್ತು ಕಿವಿ ಇವೆರಡು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡುತ್ತದೆ. ಕಣ್ಣು ನೋಡಿರುವುದನ್ನು, ಕಿವಿ ಶಬ್ದ ಗಳನ್ನು ಮೆದುಳಿಗೆ ಕಳುಹಿಸುತ್ತದೆ. ಮೆದುಳು ಉಳಿದ ಅಂಗಗಳಿಗೆ ಕಳುಹಿಸುತ್ತದೆ. ಅದರಂತೆ ದೇಹದ ಪ್ರತಿಯೊಂದು ಅಂಗಗಳು ಕೆಲಸ ಮಾಡುತ್ತದೆ. ಚಲಿಸುವಾಗ ನಮಗೆ ವಾಹನದಲ್ಲಿರುವ ಒಳಭಾಗ ಕಾಣಿಸುತ್ತದೆ ಸೀಟ್, ಅಕ್ಕ ಪಕ್ಕದ ಜನರನ್ನು ಕಾಣಬಹುದು ಅಷ್ಟೇ, ಕಣ್ಣಿಗೆ ದೂರ ಪ್ರಮಾಣದ ಚಲನೆ ಕಾಣಿಸುವುದಿಲ್ಲ. ಆದರೆ ಕಿವಿ ತುಂಬಾ ಚುರುಕು ಅದು ಚಲನೆಯನ್ನು ಗ್ರಹಿಸುವುದು, ವಾಹನದ ಹೊರಗಡೆ ಆಗುವ ಗಾಡಿಗಳ ಶಬ್ದ ಚಲಿಸುತ್ತಿರುವುದು ಬೇಗನೆ ಗೊತ್ತಾಗುತ್ತದೆ. ಕಣ್ಣು ಮತ್ತು ಕಿವಿಯ ಬೇರೆ ಬೇರೆ ಸಂದೇಶ ಗ್ರಹಿಸಿ ಮೆದುಳಿಗೆ ಗೊತ್ತಾಗದೆ ಹೊಟ್ಟೆಗೆ ಎಲ್ಲವನ್ನು ಹೊರಹಾಕು ಅನ್ನುವ ಸಂದೇಶ ನೀಡುತ್ತದೆ ಹೀಗಾಗಿ ವಾಂತಿಯಾಗುತ್ತದೆ. ಕಿವಿಗೆ ಚಲನೆ ಹೇಗೆ ಗೊತ್ತಾಗುತ್ತದೆ ಅನ್ನುವುದು ಪ್ರಶ್ನೆಯಾಗುತ್ತದೆ. ಕಿವಿಯೊಳಗೆ ರೆಸ್ಟಿಬೂಲರ್ ಸಿಸ್ಟಮ್ ಇರುತ್ತದೆ ಅದರಲ್ಲಿ ಒಂದು ಕಡೆ ಲಿಕ್ವಿಡ್ ತುಂಬಿರುತ್ತೆ ಅಲ್ಲದೆ ಕೂದಲುಗಳು ಇರುತ್ತೆ. ವಾಹನದಲ್ಲಿ ಚಲಿಸುವಾಗ ಈ ರೀತಿ ಲಿಕ್ವಿಡ್ ನಲ್ಲಿ ಚಲನೆ ಉಂಟಾಗುತ್ತದೆ. ಲಿಕ್ವಿಡ್ ನ ಚಲನೆಯಿಂದ ಕೂದಲು ಸಹಿತ ಅಲುಗಾಡುತ್ತದೆ. ಇದರಿಂದ ಕಿವಿಯ ಮೂಲಕ ಮೆದುಳಿಗೆ ಚಲನೆಯ ಸಂದೇಶ ರವಾನೆಯಾಗುತ್ತದೆ. ಕಿವಿ ಕಣ್ಣುಗಳಿಂದ ಬೇರೆ ಬೇರೆ ಸಂದೇಶಗಳು ಬಂದು ವಾಂತಿ ಯಾಕೆ ಆಗುತ್ತದೆ ಅನ್ನುವುದಕ್ಕೆ ಇದೇ ಕಾರಣ ಅಂತ ಹೇಳಲು ಸಾಧ್ಯವಿಲ್ಲ.

ಈ ಸಮಸ್ಯೆ ಇರುವವರು ಪ್ರಯಾಣಿಸುವಾಗ ಹೊರಗಿನ ಪ್ರಪಂಚವನ್ನು ಮರಿಯಬಾರದು., ಪುಸ್ತಕ ಓದುವುದು, ಸಿನೆಮಾ ನೋಡುವುದು, ಅಕ್ಕ ಪಕ್ಕದ ಪ್ರಯಾಣಿಕರ ಜೊತೆ ಮಾತನಾಡುವುದು ಉತ್ತಮ. ಕಿಟಕಿಯ ಹತ್ತಿರ ಕುಳಿತು ಹೊರಗೆ ನೋಡುವುದು, ಶುದ್ಧ ಗಾಳಿಯನ್ನು ತೆಗೆದುಕೊಳ್ಳುವುದು. ಈ ರೀತಿ ಮಾಡುವುದರಿಂದ ಈ ಸಮಸ್ಯೆ ಗಳನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು.

Leave a Comment