ಹಲ್ಲಿನ ಮೇಲೆ ಇರುವಂತ ಕಲೆಯನ್ನು ಸುಲಭವಾಗಿ ನಿವಾರಿಸಿಕೊಳ್ಳಿ ಮನೆಮದ್ದು

ಮುಖದಲ್ಲಿ ಕಣ್ಣು, ಮೂಗು ಬಾಯಿಗಳಿಗೆ ಹೇಗೆ ಪ್ರಾಮುಖ್ಯತೆ ಇದೆಯೋ ಅಷ್ಟೇ ಪ್ರಾಮುಖ್ಯತೆ ಹಲ್ಲುಗಳು ಪಡೆದುಕೊಂಡಿವೆ. ಕಣ್ಣು, ಮೂಗು ಗಳು ಹೇಗೆ ಅಂದಕ್ಕೆ ಮೆರುಗು ನೀಡುತ್ತವೆಯೋ ಹಾಗೆಯೆ ಬಿಳಿಯಾದ ಹಲ್ಲುಗಳಿಂದಲೂ ಮುಖದ ಅಂದದ ವ್ಯಾಖ್ಯಾನ ಮಾಡಲಾಗುತ್ತದೆ. ದಾಳಿಂಬೆ ಹಣ್ಣಿನ ಬೀಜಗಳಂತಹ ದಂತಪಂಕ್ತಿ, ಬಿಳಿಯಾದ, ಚಂದ್ರನ ಹೊಳಪು ಹೊಂದಿದ ದಂತಪಂಕ್ತಿ ಹೀಗೆ ಹಲ್ಲುಗಳ ಅಂದದ ಬಗೆಯೂ ಹೊಗಳಿದ್ದಾರೆ. ಆದರೆ ಕೆಲವರಿಗೆ ಹಲ್ಲುಗಳ ಕೆಳಭಾಗ ಕೆಂಪು ಅಥವಾ ಹಳದಿಬಣ್ಣದಿಮನದ ಕೂಡಿರುತ್ತದೆ. ಹಾಗಾದರೆ ಅದು ಏನು? ಅದರ ನಿವಾರಣೆ ಹೇಗೆ ಎನ್ನುವುದನ್ನು ಇಲ್ಲಿರುವ ಮಾಹಿತಿಯಲ್ಲಿ ವಿವರಿಸಲಾಗಿದೆ. ಈ ಮಾಹಿತಿಯ ಮೂಲಕ ಅಂತಹ ಸಮಸ್ಯೆಗಳ ಪರಿಹಾರ ತಿಳಿಯೋಣ.

ಹಲ್ಲಿನ ಕೆಳಭಾಗದಲ್ಲಿ ಕೆಂಪು ಅಥವಾ ಹಳದಿ ಬಣ್ಣದ ಪಾಚಿ ಕಟ್ಟಿದಂತೆ ತೋರುವ ಇದನ್ನು ಟಾರ್ಟಾರ್ ಎನ್ನುತ್ತಾರೆ. ಹಲ್ಲಿನ ವೈದ್ಯರ ಬಳಿ ಹೋದಾಗ ಕ್ಲೀನ್ ಮಾಡಿ ಕೊಡುತ್ತಾರೆ. ಆದರೆ ಈ ಸಮಸ್ಯೆ ಭಾದಿಸದಂತೆ ನೋಡಿಕೊಳ್ಳುವುದೆ ಈ ಸಮಸ್ಯೆಗೆ ಇರುವ ದೊಡ್ಡ ಪರಿಹಾರವಾಗಿದೆ. ಪ್ರಾರಂಭದ ಹಂತದಲ್ಲಿ ಇದ್ದಲ್ಲಿ ಸರಳ ಉಪಾಯಗಳಿಂದ ಇದನ್ನು ಕಡಿಮೆ ಮಾಡಬಹುದು. ಮೊದಲನೆಯದಾಗಿ ಆಯಿಲ್ ಪುಲ್ಲಿಂಗ್. ತೆಂಗಿನ ಎಣ್ಣೆಯನ್ನು ಬಾಯಿಯಲ್ಲಿ ಹಾಕಿ ಇಪ್ಪತ್ತು ನಿಮಿಷಗಳ ಕಾಲ ಅಗೆಯುವಂತೆ ಮಾಡುತ್ತಿದ್ದು ನಂತರದಲ್ಲಿ ಬಿಸಿ ನೀರಿನಿಂದ ಬಾಯಿ ತೊಳೆಯಬೇಕು. ಈ ಪ್ರಯೋಗ ಬೆಳಿಗ್ಗೆ ಹಲ್ಲುಜ್ಜುವ ಮೊದಲು ಮಾಡಬೇಕು. ಆಯುರ್ವೇದ ಹಲ್ಲುಜ್ಜುವ ಪೌಡರ್ ಅಥವಾ ಮನೆಯಲ್ಲಿ ತಯಾರಿಸಿದ ಪೌಡರ್ ತುಂಬಾ ಒಳ್ಳೆಯದು ಜೊತೆಗೆ ಮೃದುವಾದ ಬ್ರೇಷ್ ಒಳ್ಳೆಯದು. ಹಾಗೆಯೆ ಎರಡು ತಿಂಗಳಿಗೆ ಒಮ್ಮೆ ಬ್ರೇಷ್ ಬದಲಾಯಿಸುವುದು ಒಳ್ಳೆಯದು. ಅದರ ಜೊತೆಗೆ ಉಪ್ಪನ್ನು ಬಿಸಿ ನೀರಿಗೆ ಹಾಕಿ ಬಾಯಿ ವಾಶ್ ಮಾಡುವುದು ಒಳ್ಳೆಯದು. ಅರ್ಧ ಕಪ್ ನೀರಿಗೆ ಆಪಲ್ ವಿನೆಗರ್ ಹಾಕಿ ಬಾಯಿಯನ್ನು ವಾಶ್ ಮಾಡಿದರೂ ತೊಂದರೆ ಇಲ್ಲ. ಇದರಿಂದಾಗಿ ಟಾರ್ಟಾರ್ ಸಮಸ್ಯೆ ಕಡಿಮೆ ಆಗುವುದರ ಜೊತೆಗೆ ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ.

ಅಡುಗೆ ಸೋಡಾಗೆ ನಿಂಬೆರಸ ಕಲೆಸಿ, ಈ ಪೇಸ್ಟ್ ಅನ್ನು ಬೆರಳಿನಿಂದಲೆ ಮೃದುವಾಗಿ ಹಲ್ಲುಗಳಿಗೆ ಉಜ್ಜಿ ಹತ್ತು ನಿಮಿಷಗಳ ನಂತರ ಬಾಯಿ ತೊಳೆದರೆ ಟಾರ್ಟಾರ್ ಸಮಸ್ಯೆಗೆ ಪರಿಹಾರ ನೀಡುತ್ತದೆ. ಹಲ್ಲಿಗಾಗಿ ಹರ್ಬಲ್ ಗಮ್ ರಬ್ ಮಾಡುವ ವಿಧಾನ ನೀಡಲಾಗಿದೆ. ಅದಕ್ಕಾಗಿ ಬೇಕಾಗುವ ಸಾಮಗ್ರಿಗಳು ಕಲ್ಲುಪ್ಪು, ನಾಲ್ಕು ಎಸಳು ಬೆಳ್ಳುಳ್ಳಿ, ಮಾವಿನ ಮರದ ಎಲೆ ಹಾಗೂ ಸೀಬೆ ಮರದ ಎಲೆ. ಕೆಂಪು ಬಣ್ಣದ ಕಲ್ಲುಪ್ಪು ಸಿಕ್ಕರೆ ತುಂಬಾ ಒಳ್ಳೆಯದು. ನಂತರ ಇವೆಲ್ಲವನ್ನು ನುಣುಪಾದ ಪೇಸ್ಟ್ ನಂತೆ ತಯಾರಿಸಿಕೊಳ್ಳಬೇಕು. ನಂತರ ಈ ಪೇಸ್ಟ್ ಅನ್ನು ಹಲ್ಲಿಗೆ ನಿಧಾನವಾಗಿ ಮಸಾಜ್ ಮಾಡಿ ಹತ್ತು ನಿಮಿಷದ ನಂತರ ಬಿಸಿ ನೀರಲ್ಲಿ ಬಾಯಿ ತೊಳೆಯಬೇಕು. ಇದರಿಂದ ಟಾರ್ಟಾರ್ ಸಮಸ್ಯೆ ನಿವಾರಣೆ ಸಾಧ್ಯ. ಇವೆಲ್ಲದರ ಹೊರತಾಗಿ ವಿಟಮಿನ್ ಸಿ ಯ ಅಂಶ ಇರುವ ಆಹಾರ ಸೇವಿಸುವುದು ಉತ್ತಮ. ರಿಪೈನ್ಡ್ ಆಯಿಲ್ ಕಡಿಮೆ ಮಾಡಿದಾಗ ಅದರಲ್ಲಿರುವ ಒಮೆಗಾ 6 ಕಡಿಮೆಯಾಗುತ್ತದೆ. ಇದರ ಬದಲಾಗಿ ಒಮೆಗಾ 3 ಬೆಳಿಗ್ಗೆ ಒಂದು ಸಂಜೆ ಒಂದು ಸೇವಿಸುವುದು ಟಾರ್ಟಾರ್ ಸಮಸ್ಯೆಗೆ ಒಳ್ಳೆಯದು. ಸಿಹಿಯನ್ನು ಸೇವಿಸಿದ ನಂತರ ಹಾಗೆ ಮಲಗದೆ ಬ್ರೇಷ್ ಮಾಡಿ ಮಲಗಬೇಕು. ಸಿಹಿ, ಚಾಕೊಲೇಟ್ ತಿನ್ನುವುದು ಕಡಿಮೆ ಮಾಡಿದರೆ ಒಳ್ಳೆಯದು.

ಮನೆಯಲ್ಲಿಯೇ ಸಿಗುವ ವಸ್ತುಗಳಿಂದಲೆ ಟಾರ್ಟಾರ್ ಸಮಸ್ಯೆಗೆ ಔಷಧವನ್ನು ಹೇಗೆ ತಯಾರಿಸಿಕೊಳ್ಳಬೇಕೆಂಬ ಸುಲಭ ಮಾಹಿತಿ ತಿಳಿದುಕೊಂಡ ಹಾಗಾಯಿತು. ಟಾರ್ಟಾರ್ ಸಮಸ್ಯೆಗೆ ಸಿಕ್ಕ ಪರಿಹಾರವನ್ನು ಬಳಸಿ ಸಮಸ್ಯೆಯನ್ನು ಬರದಂತೆ ತಡೆಯುವತ್ತ ಸಾಗೋಣ.

Leave a Comment