ಭಾರತೀಯ ಸಂಪ್ರದಾಯದಲ್ಲಿ ಸಾಮುದ್ರಿಕ ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರ ಪ್ರಮುಖ ಪಾತ್ರ ವಹಿಸುತ್ತದೆ. ಸಾಮುದ್ರಿಕ ಶಾಸ್ತ್ರದ ಪ್ರಕಾರ ಶರೀರದ ಅಂಗಗಳು ಇರುವ ರೀತಿಯ ಮೇಲೆ ಅವರ ಭವಿಷ್ಯ, ವ್ಯಕ್ತಿತ್ವದ ಬಗ್ಗೆ ತಿಳಿಯಬಹುದು. ಶರೀರದ ಯಾವ ಅಂಗ ಹೇಗಿದ್ದರೆ ಶುಭ, ಹೇಗಿದ್ದರೆ ಅಶುಭ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಸಾಮುದ್ರಿಕ ಶಾಸ್ತ್ರದ ಮೂಲಕ ಮನುಷ್ಯನ ಶರೀರದ ಅಂಗಗಳ ಆಧಾರದ ಮೇಲೆ ಅವರ ಭವಿಷ್ಯ ಹಾಗೂ ವ್ಯಕ್ತಿತ್ವವನ್ನು ತಿಳಿಯಬಹುದು. ಭಾರತೀಯ ಸಂಪ್ರದಾಯದಲ್ಲಿ ಶುಭ, ಅಶುಭ, ಶಕುನ, ಅಪಶಕುನಗಳಿಗೆ ಮಹತ್ವ ನೀಡಲಾಗುತ್ತದೆ. ನಮ್ಮ ಜ್ಯೋತಿಷ್ಯ ಶಾಸ್ತ್ರವು ಸಮೃದ್ಧವಾಗಿದೆ. ಪ್ರತಿಯೊಬ್ಬ ಮನುಷ್ಯನು ಬೇರೆ ಬೇರೆ ಸ್ವಭಾವ, ಗುಣ, ವಿಚಾರ ಶೈಲಿ, ಬಣ್ಣವನ್ನು ಹೊಂದಿರುತ್ತಾನೆ. ನಮ್ಮ ಶರೀರದ ಕೆಲವು ಅಂಗಗಳು ಇರುವ ರೀತಿ ನಮಗೆ ಶುಭ ಸಂಕೇತವಾಗಿರುತ್ತದೆ, ಕೆಲವು ಅಂಗಗಳು ಇರುವ ರೀತಿ ಅಶುಭವಾಗಿರುತ್ತದೆ. ದುಂಡ ಮುಖವುಳ್ಳ ಜನರು ಬಹಳ ಭಾಗ್ಯಶಾಲಿಗಳಾಗಿರುತ್ತಾರೆ, ಇವರಿಗೆ ಒಳ್ಳೆಯ ಜಾಬ್, ಒಳ್ಳೆಯ ಸಂಗಾತಿ ಸಿಗುತ್ತಾರೆ. ಮಧ್ಯಮ ಎತ್ತರದಲ್ಲಿ ಇರುವವರು ಒಳ್ಳೆಯ ಜೀವನ ಹೊಂದುತ್ತಾರೆ. ಉದ್ದವಾದ ಮೂಗು ಮತ್ತು ಅದರ ಮೇಲೆ ಚುಕ್ಕೆ ಇದ್ದರೆ ಒಳ್ಳೆಯದಾಗುತ್ತದೆ. ಕಿವಿಗಳು ದೊಡ್ಡದಾಗಿದ್ದರೆ ಅವರು ಭಾಗ್ಯಶಾಲಿಗಳಾಗಿರುತ್ತಾರೆ. ಕೂದಲು ಇಲ್ಲದ ಜನರು ಭಾಗ್ಯಶಾಲಿಗಳಾಗಿರುತ್ತಾರೆ. ನಮ್ಮ ಮುಖದ, ಶರೀರದ ಮೇಲೆ ಮಚ್ಚೆ ಇರುವುದರ ಮೇಲೂ ಅವರ ಬಗ್ಗೆ ಭವಿಷ್ಯ ಹೇಳಬಹುದು. ಹಣೆಯ ಮಧ್ಯೆ ಮಚ್ಚೆ ಇದ್ದರೆ ಅವರು ಅದೃಷ್ಟವಂತರು. ಕೈಗಳು, ಗಲ್ಲದ, ಬಲಭಾಗದ ಕಣ್ಣಿನ ಹತ್ತಿರ ಮಚ್ಚೆ ಇದ್ದರೆ ಅವು ವಿಶೇಷವಾಗಿರುತ್ತವೆ. ಸಾಮುದ್ರಿಕ ಶಾಸ್ತ್ರದ ಪ್ರಕಾರ ಹಲ್ಲುಗಳಲ್ಲಿ ಗ್ಯಾಪ್ ಇದ್ದರೆ ಅವರು ಸೌಭಾಗ್ಯಶಾಲಿಗಳಾಗಿದ್ದು, ಆರ್ಥಿಕವಾಗಿ ಅವರು ಸಬಲರಾಗಿರುತ್ತಾರೆ. ಹಲ್ಲುಗಳು ಸ್ವಲ್ಪ ಮುಂದೆ ಇದ್ದರೆ ಹಠವಾದಿಗಳು, ಮಾತನಾಡುವ ವ್ಯಕ್ತಿತ್ವ ಹೊಂದಿದ್ದು, ಅದೃಷ್ಟವಂತರು ಆಗಿರುತ್ತಾರೆ.
ಅಂಗೈ, ಅಂಗಾಲು ಗುಲಾಬಿ ಬಣ್ಣದಲ್ಲಿ ಇದ್ದರೆ ಜೊತೆಗೆ ಅಂಗೈ ರೇಖೆಗಳು ಸ್ಪಷ್ಟವಾಗಿದ್ದರೆ ಭಾಗ್ಯಶಾಲಿಗಳಾಗಿರುತ್ತಾರೆ. ಉದ್ದ ಬೆರಳುಗಳಿದ್ದರೆ ಒಳ್ಳೆಯದು. ಅಂಗಾಲಿನ ಮೇಲೆ ಸೂರ್ಯ, ಚಂದ್ರ, ನಕ್ಷತ್ರ, ಸಿಂಹ, ಕಮಲ, ಶಂಖ ಚಕ್ರಗಳು, ಧ್ವಜದ ರೀತಿ ಆಕೃತಿ ಇದ್ದರೆ ಅವರು ಅದೃಷ್ಟವಂತರು. ಸ್ತ್ರೀ ಅಥವಾ ಪುರುಷನ ನಾಭಿ ಆಳವಾಗಿದ್ದರೆ ಅವರು ಅದೃಷ್ಟವಂತರಾಗಿರುತ್ತಾರೆ. ಕಣ್ಣುಗಳ ಮೂಲಕವೂ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು. ಕಪ್ಪು ಬಣ್ಣದ ಕಣ್ಣಿನವರು ಬುದ್ಧಿವಂತರು, ಧನವಂತರು ಆಗಿರುತ್ತಾರೆ. ಹುಬ್ಬುಗಳು ಕೂಡಿದ್ದರೆ ಒಳ್ಳೆಯದಾಗುತ್ತದೆ. ಈ ರೀತಿ ಶುಭ, ಅಶುಭ ಸೂಚನೆಗಳನ್ನು ತಿಳಿಯಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಶುಭ, ಅಶುಭ ವಿಷಯಗಳನ್ನು ತಿಳಿಯಿರಿ.