ಎದೆಯಲ್ಲಿ ಕಟ್ಟಿರುವ ಕಫದಿಂದ ಮುಕ್ತಿ ಪಡೆಯಲು ಮನೆ ಮದ್ದನ್ನು ಮಾಡುವುದು ಹೇಗೆಂದು ಹಾಗೂ ಅದನ್ನು ಯಾವಾಗ ಸೇವಿಸಬೇಕು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ
ಎದೆಯಲ್ಲಿ ಕಟ್ಟಿರುವ ಕಫದಿಂದ ಜ್ವರ, ಶೀತ, ಕೆಮ್ಮು ಉಂಟಾಗುತ್ತದೆ. ಇದಕ್ಕೆ ಪರಿಹಾರವೆಂದರೆ ಅರ್ಧ ಈರುಳ್ಳಿಯನ್ನು ಮೊದಲು ಜಜ್ಜಿ ಬಟ್ಟೆಯಲ್ಲಿ ಹಾಕಿ ರಸವನ್ನು ತೆಗೆದು ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ನಂತರ ಒಂದು ತುಂಡು ಶುಂಠಿಯನ್ನು ಜಜ್ಜಿ ಇದರ ರಸವನ್ನು ತೆಗೆದು ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ನಂತರ ಸ್ವಲ್ಪ ತುಳಸಿ ಎಲೆಗಳನ್ನು ಜಜ್ಜಿ ಇದರ ರಸವನ್ನು ಈರುಳ್ಳಿ ರಸಕ್ಕೆ ಸೇರಿಸಬೇಕು ಇದರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ. ನಂತರ ಶುಂಠಿ ರಸದಲ್ಲಿ ಕೆಳಗಡೆ ಸುಣ್ಣದ ಅಂಶವಿರುತ್ತದೆ ಅದನ್ನು ಬಿಟ್ಟು ರಸವನ್ನಷ್ಟೆ ಈರುಳ್ಳಿ ರಸಕ್ಕೆ ಸೇರಿಸಬೇಕು ಶುಂಠಿಯಲ್ಲಿರುವ ಸುಣ್ಣದ ಅಂಶ ಮಕ್ಕಳಿಗೆ ಒಳ್ಳೆಯದಲ್ಲ.
ಈ ರಸಕ್ಕೆ ಬೇಕಿದ್ದರೆ ಒಂದು ಸ್ಪೂನ್ ಹನಿಯನ್ನು ಹಾಕಬಹುದು ಅದರೊಂದಿಗೆ ಸ್ವಲ್ಪ ಅರಿಶಿಣ, ಪೆಪ್ಪರ್ ಪುಡಿ ಹಾಕಿ ಮಕ್ಕಳಿಗಾದರೆ ಪೆಪ್ಪರ್ ಪುಡಿ ಹಾಕಬಾರದು ಇದನ್ನು ಮಿಕ್ಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಕಫ ವಾಂತಿಯಾಗಿ ಹೋಗುತ್ತದೆ. ಸಣ್ಣ ಮಕ್ಕಳಾದರೆ ಒಂದು ಸ್ಪೂನ್ ಕುಡಿಸಬೇಕು. ದೊಡ್ಡವರಾದರೆ 2-3 ಸ್ಪೂನ್ ಕುಡಿಯಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.