ಮೊಳಕೆ ಕಾಳುಗಳು ಎಷ್ಟು ರುಚಿ ರುಚಿಯಾಗಿರುತ್ತದೆಯೂ ಹಾಗೆಯೆ ದೇಹಕ್ಕೆ ಔಷಧಿ ಕೂಡ ಆಗುತ್ತದೆ. ಕಾಳುಗಳನ್ನು ನೆನೆಸಿ, ಮೊಳಕೆ ಬರಿಸಿ ತಿನ್ನಬೇಕು ಎನ್ನುವುದಕ್ಕೆ ಆಯುರ್ವೇದದಲ್ಲಿ ಕಾರಣಗಳಿವೆ. ಮೊಳಕೆ ಕಾಳುಗಳನ್ನು ಯಾವಾಗ ತಿನ್ನಬೇಕು. ಯಾಕೆ ಮೊಳಕೆ ಬರಿಸಿ ಇಲ್ಲವೇ ನೆನೆಸಿಯಾದರೂ ತಿನ್ನಬೇಕು ಎಂಬ ಅಂಶವನ್ನು ಈ ಮಾಹಿತಿಯಿಂದ ಅರಿಯೋಣ.
ಕಾಳುಗಳನ್ನು ನೆನೆಸಿ ಏಕೆ ತಿನ್ನಬೇಕು ಎಂಬ ವಿಚಾರವನ್ನು ಡಾ. ಪ್ರವೀಣ್ ಬಾಬು, ದಾವಣಗೆರೆ ಅವರು ವಿವರಿಸಿದ್ದಾರೆ. ಯಾವುದೇ ಕಾಳುಗಳಿರಲಿ ಶೇಂಗಾ, ಕಡಲೆ, ಬಟಾಣಿ ಇಲ್ಲವೆ ಹೆಸರುಕಾಳು ಯಾವುದೇ ಆದರೂ ಒಣಗಿರುತ್ತದೆ. ಹೀಗೆ ಒಣಗಿದಂತೆ ಕಂಡರು ಅದರೊಳಗೆ ಜೀವ ಹಾಗೆಯೆ ಇರುತ್ತದೆ. ಈ ಜೀವ ಸುಪ್ತಾವಸ್ಥೆಯಲ್ಲಿ ಇದ್ದಿರುತ್ತದೆ. ನೀರು ಅದಕ್ಕೆ ಪ್ರಾಣ ಪ್ರತಿಷ್ಟಾಪನೆ ಆಗುವಂತೆ ಮಾಡುತ್ತದೆ. ಉದಾಹರಣೆಗೆ ಒಂದು ಕಲ್ಲನ್ನು ಕೆತ್ತಿ ಲಿಂಗದ ರೂಪಕ್ಕೆ ತಂದು, ಸರಿಯಾದ ಕ್ರಮಗಳ ಸಂಸ್ಕಾರ ನೀಡಿ ದೇವಾಲಯದಲ್ಲಿ ಪ್ರತಿಷ್ಟಾಪಿಸಿ ಪ್ರಾಣ ಪ್ರತಿಷ್ಟೆ ಮಾಡುವಂತೆಯೆ ಇದು ಕೂಡ. ಹಿರಿಯ ಶಿಲ್ಪಕಾರಕಾನ್ನು ಇಷ್ಟು ಸುಂದರವಾದ ಶಿಲ್ಪ ತಯಾರಿಸಿದ್ದಿರಿ. ಇದು ಹೇಗೆ ಮಾಡಿದಿರಿ ಎಂದು ಕೇಳಿದಾಗ ಅವರು ಅದಾಗಲೆ ಅದರಲ್ಲಿ ಶಿವಲಿಂಗ ಇತ್ತು, ಶಿವಲಿಂಗವನ್ನು ಅಂಟಿಕೊಂಡಿದ್ದ ಹೆಚ್ಚಿರುವ ಕಲ್ಲುಗಳನ್ನು ಮಾತ್ರ ತೆಗೆದುಹಾಕಿದೆ. ಆಗ ಶಿವಲಿಂಗ ಪ್ರತ್ಯಕ್ಷ ಆಯಿತು ಎನ್ನುತ್ತಾರೆ. ನಮಗೆ ಕಲ್ಲಾಗಿ ಕಂಡಿದ್ದು ಶಿಲ್ಪಕಾರನಿಗೆ ಲಿಂಗವಾಗಿ ಕಂಡಿತ್ತು. ಹಾಗೆಯೆ ನಮಗೆ ಬೀಜವಾಗಿ ಕಾಣುವ ಕಾಳುಗಳು, ಆಯುರ್ವೇದ ಡಾಕ್ಟರ್ ಗಳಿಗೆ ಕಾಳುಗಳ ಒಳಗಿನ ಜೀವ ಕಾಣಿಸುತ್ತದೆ. ಕಾಳುಗಳನ್ನು ನೆನೆಸಿ, ಹಸಿ ಬಟ್ಟೆಯಲ್ಲಿ ಕಟ್ಟಿದಾಗ ಪ್ರಾಣ ಪ್ರತಿಷ್ಟಾಪನೆ ಆಗುತ್ತದೆ. ಕಾಳುಗಳು ಮೊಳಕೆಯೊಡೆಯುತ್ತವೆ.
ಜೀವಂತ ಇರಲು ಪರಿಸರದಿಂದ ಜೀವ ತುಂಬಬೇಕಾಗುತ್ತದೆ. ಹಾಗೆಯೆ ಜೀವ ಕಾಪಾಡಲು ಸಜೀವ ಆಗಿರುವ ವಸ್ತು ತಿನ್ನಬೇಕು, ನಿರ್ಜೀವ ವಸ್ತುಗಳನ್ನು ಅಲ್ಲ. ಉದಾಹರಣೆಗೆ ತರಗೆಲೆಯನ್ನು ನೆನೆಸಿದರೆ, ಹೂತಿಟ್ಟರೆ ಅದು ಬದಲಾಗುವುದಿಲ್ಲ ಅದು ನಿರ್ಜೀವ ವಸ್ತು. ಆದರೆ ಅದರ ಬೀಜ ಸಜೀವ ವಸ್ತು. ಸಜೀವ ವಸ್ತುಗಳು ದೇಹದ ಮಾರ್ಪಾಡು ಮಾಡುವಲ್ಲಿ, ಅಣುಗಳ ಉತ್ಪಾದನೆಯಲ್ಲಿ ಸಹಾಯ ಮಾಡಿ ದೇಹಕ್ಕೆ ಆರೋಗ್ಯ ನೀಡುತ್ತದೆ. ಕಾಳುಗಳನ್ನು ನೆನೆಸಿ ತಿಂದರೆ ಹಾಗೆ ತಿನ್ನುವುದಕ್ಕಿಂತ ನೂರು ಪಟ್ಟು ಹೆಚ್ಚಿನ ಶಕ್ತಿ ದೇಹಕ್ಕೆ ನೀಡುತ್ತದೆ. ಮೊಳಕೆಯೊಡೆಸಿ ತಿನ್ನುವುದಕ್ಕೆ ಸಮಯವಿಲ್ಲದಿದ್ದರೆ ಸಂಜೆ ನೆನೆಸಿ ಮರುದಿನ ಬೆಳಿಗ್ಗೆ ತಿನ್ನಬಹುದು. ಒಣ ಇರುವ ಕಾಳುಗಳನ್ನು ತಿಂದಾಗ ಆಹಾರ ಜೀರ್ಣವಾಗುವುದು ಕಡಿಮೆ. ಜೀರ್ಣವಾಗದಿದ್ದರೆ ಶಕ್ತಿ ಸಿಗುವುದಿಲ್ಲ. ಆದ್ದರಿಂದ ನೆನೆಸಿ ತಿನ್ನುವುದು ಉತ್ತಮ. ಹಾಗಾದರೆ ಮೊಳಕೆ ಬರಿಸಿದ ಕಾಳುಗಳನ್ನು ತಿನ್ನುವ ಸಮಯ ಯಾವುದು ಎಂದರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದು. ಮೊಳಕೆ ಬರಿಸಿದ ಕಾಳುಗಳಿಗೆ ರಾಸಾಯನಿಕ ಆಹಾರ ಎನ್ನುತ್ತಾರೆ. ಇಂತಹ ಆಹಾರ ತಿಂದಾಗ ಅದು ಶಕ್ತಿಯಾಗಿ ಬದಲಾಗುತ್ತದೆ. ಯಾವುದೇ ಕಾಳುಗಳನ್ನು ಒಂದು ಕೈ ಮುಷ್ಟಿಯಷ್ಟು ತಿನ್ನಬಹುದು. ಬೇಯಿಸಿದರೆ ಆಹಾರವಾಗುತ್ತದೆ. ಕಾಳುಗಳನ್ನು ಮೊಳಕೆ ಬರಿಸಿ ತಿಂದರೆ ಔಷಧಿಯಾಗುತ್ತದೆ. ಇದನ್ನು ಯಾರು ಬೇಕಾದರೂ ಸೇವಿಸಬಹುದು ಯಾವುದೆ ಅಡ್ಡ ಪರಿಣಾಮಗಳು ಇಲ್ಲ.
ಡಾಕ್ಟರ್. ಪ್ರವೀಣ್ ಬಾಬು ಅವರು ಹೇಳಿದ ರೀತಿಯಲ್ಲಿಯೇ ಕಾಳುಗಳನ್ನು ಮೊಳಕೆ ಬರಿಸಿ ತಿಂದರೆ ರುಚಿಯ ಜೊತೆಗೆ ಆರೋಗ್ಯವೂ ವೃದ್ದಿಸುತ್ತದೆ. ಕಾಳುಗಳನ್ನು ರುಚಿಯಾಗುತ್ತದೆ ಎಂದು ಹಾಗೆ ತಿನ್ನದೆ ನೆನೆಸಿ, ಮೊಳಕೆ ಬರಿಸಿ ನಂತರ ತಿನ್ನುವ ಇದರಿಂದ ನಮ್ಮ ದೇಹಕ್ಕೆ ಆರೋಗ್ಯ ಶಕ್ತಿ ಸಿಗುತ್ತದೆ.