ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳಿಂದ ಹಿಡಿದು ವೃದ್ದರವರೆಗೆ ಮಲಬದ್ಧತೆ ಸಮಸ್ಯೆಯನ್ನು ಎದುರಿಸುತ್ತಾರೆ. ಈ ಸಮಸ್ಯೆಯಿಂದ ಇನ್ನೂ ಅನೇಕ ಸಮಸ್ಯೆಗಳು ಕಂಡುಬರುತ್ತದೆ. ಮಲಬದ್ಧತೆ ಉಂಟಾಗಲು ಕಾರಣ ಅದಕ್ಕೆ ಪರಿಹಾರವನ್ನು ಈ ಲೇಖನದ ಮೂಲಕ ತಿಳಿಯೋಣ.
ಬಹಳಷ್ಟು ಜನರಿಗೆ ಬೆಳಗ್ಗೆ ಮಲಬದ್ಧತೆ ಸಮಸ್ಯೆ ಕಂಡುಬರುತ್ತದೆ. ಈ ಸಮಸ್ಯೆ ಇದ್ದವರು ಹೆಚ್ಚು ಸಮಯ ವಾಷ್ ರೂಮನಲ್ಲಿ ಕಳೆಯುತ್ತಾರೆ. ಈ ಸಮಸ್ಯೆಗೆ ಹಲವು ಕಾರಣಗಳಿವೆ ಸರಿಯಾಗಿ ನೀರು ಕುಡಿಯದೆ ಇರುವುದರಿಂದ ನಮ್ಮ ಶರೀರದ ಹೈಪೋ ಥೈರಾಯ್ಡ್ ನಿಂದ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಪೇನ್ ಕ್ಯೂಲರ್ ಟ್ಯಾಬ್ಲೆಟ್ಸ್ ತೆಗೆದುಕೊಳ್ಳುವುದರಿಂದ ಮಲಬದ್ಧತೆ ಉಂಟಾಗುತ್ತದೆ. ಕೆಲವರು ಎದೆ ಉರಿಗೆ ಅನಾಸಿಡ್ ತೆಗೆದುಕೊಳ್ಳುತ್ತಾರೆ ಇದರಿಂದ ಮಲಬದ್ಧತೆ ಸಮಸ್ಯೆ ಕಂಡುಬರುತ್ತದೆ ಇದರಲ್ಲಿ ಕ್ಯಾಲ್ಶಿಯಂ ಹೆಚ್ಚಿರುತ್ತದೆ ಕೆಲವರಿಗೆ ಹಾಲು, ಮೊಸರು ಆಗುವುದಿಲ್ಲ ಆಗ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ ಅಲ್ಲದೇ ಇವರಿಗೆ ಡಯೇರಿಯಾ ಕೂಡ ಆಗುತ್ತದೆ. ಥೈರಾಯ್ಡ್ ಗ್ರಂಥಿ ಸರಿಯಾಗಿ ಕೆಲಸ ಮಾಡದೇ ಇದ್ದಾಗ ಅವರ ಮೆಟಾಬೊಲಿಸಂ ಕುಗ್ಗಿ ಹೋಗುತ್ತದೆ. ಹೈಪೋ ಥೈರಾಯ್ಡಿಸಮ್ ಇರುವವರು ಅನಿಯಮಿತವಾಗಿ ಮಾಡಿದ ಊಟ ಸರಿಯಾಗಿ ಜೀರ್ಣವಾಗದೆ ಮಲಬದ್ಧತೆ ಸಮಸ್ಯೆ ಕಂಡುಬರುತ್ತದೆ.
ನಾವು ತೆಗೆದುಕೊಳ್ಳುವ ಆಹಾರದಲ್ಲಿ ಸಮತೋಲನ ಇಲ್ಲದಿದ್ದಾಗಲೂ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಯೋಗ, ವ್ಯಾಯಾಮ ಮಾಡುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಕೆಲವರು ಕಾರಣಾಂತರಗಳಿಂದ ಟಾಯ್ಲೆಟ್ ಗೆ ಹೋಗುವುದನ್ನು ಬಹಳ ಸಮಯದವರೆಗೆ ತಡೆಯುತ್ತಾರೆ ಈ ರೀತಿ ಹಲವು ಬಾರಿ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಡಿಪ್ರೆಶನ್ ಸಮಸ್ಯೆಯಿಂದ ಬಳಲುವವರು ಮಲಬದ್ಧತೆ ಸಮಸ್ಯೆಯನ್ನು ಎದುರಿಸುತ್ತಾರೆ. ಹೆಚ್ಚು ನೀರು ಕುಡಿಯುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚನೆಯ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಮಲಬದ್ಧತೆ ಸಮಸ್ಯೆಯನ್ನು ಸಾಮಾನ್ಯವಾಗಿ ಎಲ್ಲರೂ ಎದುರಿಸುತ್ತಾರೆ ಅವರಿಗೆ ಈ ಮಾಹಿತಿ ಉಪಯೋಗವಾಗುತ್ತದೆ.