ಸ್ನೇಹಿತರೆ ನಿಮಗೆ ಪದೇ ಪದೇ ಕೆಮ್ಮು ನೆಗಡಿ ಎದೆಯಲ್ಲಿ ಕಫ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು ನೀವು ಅದಕ್ಕೆ ಎಷ್ಟೇ ಔಷಧಿಗಳನ್ನು ತೆಗೆದುಕೊಂಡರು ಅದು ಗುಣವಾಗುವುದಿಲ್ಲ ಎಂದರೆ ನಾವಿಂದು ನಿಮಗೆ ಅದನ್ನ ಕಡಿಮೆ ಮಾಡುವುದಕ್ಕಾಗಿ ಸುಲಭವಾಗಿ ಮನೆಯಲ್ಲಿಯೇ ಹೇಗೆ ಔಷದವನ್ನು ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ. ನಾವು ನಿಮಗೆ ತಿಳಿಸುವ ಔಷಧಿಯನ್ನು ನೀವು ತೆಗೆದುಕೊಳ್ಳುವುದರಿಂದ ಪದೇಪದೇ ಕೆಮ್ಮು ನೆಗಡಿ ಆಗುವುದು ಕಡಿಮೆಯಾಗಿಗುತ್ತದೆ. ಜೊತೆಗೆ ಇದು ನಿಮ್ಮ ಎದೆಯಲ್ಲಿ ಸೇರಿ ಹೋಗಿರುವಂತಹ ಕಫವನ್ನು ಪೂರ್ತಿಯಾಗಿ ದೇಹದಿಂದ ಹೊರ ಹಾಕುವುದಕ್ಕೆ ಸಹಾಯವಾಗುತ್ತದೆ.
ನಾವು ನಿಮಗೆ ತಿಳಿಸುವ ಮನೆ ಮದ್ದನ್ನು ನೀವು ಎರಡರಿಂದ ಮೂರು ಸಲ ತೆಗೆದುಕೊಂಡರೆ ನಿಮ್ಮ ಎದೆಯಲ್ಲಿರುವಂತಹ ಕಫವನ್ನು ತೊಲಗಿಸಿ ನೀವು ಚೆನ್ನಾಗಿ ಉಸಿರಾಡುವುದಕ್ಕೆ ಸಹಾಯವಾಗುತ್ತದೆ. ಹಾಗಾದರೆ ಈ ಮನೆಮದ್ದನ್ನು ಹೇಗೆ ತಯಾರಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ. ಈ ಮನೆಮದ್ದನ್ನು ತಯಾರಿಸುವುದಕ್ಕೆ ನಿಮಗೆ ಮುಖ್ಯವಾಗಿ ಬೇಕಾದಂತಹ ವಸ್ತುಗಳು ಹಸಿ ಶುಂಠಿ. ಶುಂಠಿ ಕೆಮ್ಮು ನೆಗಡಿಯಂತಹ ತೊಂದರೆಗಳನ್ನು ಕಡಿಮೆ ಮಾಡುವುದಕ್ಕೆ ಅದ್ಭುತವಾಗಿ ಕೆಲಸ ಮಾಡುತ್ತದೆ. ಎಲ್ಲರ ಮನೆಯಲ್ಲಿಯೂ ದೊರೆಯುವಂತಹ ಆಯುರ್ವೇದಿಕ ಔಷಧಿ ಎಂದು ಹೇಳಬಹುದು. ನಂತರ ಲವಂಗ ಇದು ಕೆಮ್ಮು ಮತ್ತು ಗಂಟಲು ನೋವನ್ನು ಕಡಿಮೆ ಮಾಡುವುದಕ್ಕೆ ಸಹಾಯವಾಗುತ್ತದೆ.
ಅರ್ಧ ಇಂಚಿನಷ್ಟು ಹಸಿಶುಂಠಿ ಮತ್ತು ಐದು ಲವಂಗವನ್ನು ತೆಗೆದುಕೊಂಡು ಇವುಗಳನ್ನು ಜಜ್ಜಿ ಇಟ್ಟುಕೊಳ್ಳಬೇಕು. ನಂತರ ಒಂದು ಪಾತ್ರೆಯಲ್ಲಿ ಒಂದು ಲೋಟದಷ್ಟು ಹಾಲನ್ನು ತೆಗೆದುಕೊಂಡು ಅದಕ್ಕೆ ಜಜ್ಜಿ ಕೊಂಡಿರುವಂತಹ ಶುಂಠಿ ಮತ್ತು ಲವಂಗವನ್ನು ಹಾಕಿ ಎರಡರಿಂದ ಮೂರು ನಿಮಿಷ ಚೆನ್ನಾಗಿ ಕುದಿಸಬೇಕು ನಂತರ ಇದನ್ನು ಒಂದು ಗ್ಲಾಸ್ ಗೆ ಸೋಸಿಕೊಳ್ಳಬೇಕು. ನಂತರ ಅದಕ್ಕೆ ಸಿಹಿಗಾಗಿ ಒಂದು ಸ್ವಲ್ಪ ಜೇನುತುಪ್ಪವನ್ನು ಸೇರಿಸಿಕೊಳ್ಳಬೇಕು. ಇದು ಗಂಟಲು ಮತ್ತು ಸ್ವಾಶಕೋಶವನ್ನು ಬಲವಾಗಿ ಮಾಡುವುದಕ್ಕೆ ಸಹಾಯವಾಗುತ್ತದೆ. ಹಾಲು ಬಿಸಿಯಾಗಿರುವಾಗ ಅದಕ್ಕೆ ಜೇನುತುಪ್ಪವನ್ನು ಬೆರೆಸಬಾರದು ಉಗುರುಬೆಚ್ಚಗಾದ ನಂತರ ಅದಕ್ಕೆ ಒಂದು ಚಮಚ ಜೇನು ತುಪ್ಪ ಬೆರೆಸಬೇಕು.
ಯಾರಿಗೆ ಡಯಾಬಿಟಿಸ್ ಸಮಸ್ಯೆ ಇರುತ್ತದೆ ಅಂಥವರು ಜೇನುತುಪ್ಪವನ್ನು ಬಳಸುವುದು ಬೇಡ. ಈ ಹಾಲನ್ನು ನೀವು ರಾತ್ರಿ ಮಲಗುವ ಒಂದು ಗಂಟೆ ಮೊದಲು ತೆಗೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ನಿಮ್ಮ ಸ್ವಾಶಕೋಶದಲ್ಲಿ ಇರುವಂತಹ ಕಫ ಸುಲಭವಾಗಿ ತೊಲಗಿ ಹೋಗುತ್ತದೆ. ಈ ರೀತಿಯಾಗಿ ನೀವು ಮೂರು ದಿನ ಇದನ್ನು ತೆಗೆದುಕೊಂಡರೆ ಕೆಮ್ಮು ನೆಗಡಿ ಕಫ ಇವೆಲ್ಲವೂ ಕೂಡ ಸುಲಭವಾಗಿ ಕಡಿಮೆಯಾಗುತ್ತದೆ. ನೀವು ಕೂಡ ಈ ಮನೆಮದ್ದನ್ನು ಮಾಡುವುದರ ಮೂಲಕ ಅದರ ಪ್ರಯೋಜನವನ್ನು ಪಡೆದುಕೊಳ್ಳಿ ಕೆಮ್ಮು ನೆಗಡಿ ಕಫದಂತಹ ತೊಂದರೆಗಳಿಂದ ದೂರ ಇರಬಹುದು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಸ್ನೇಹಿತರಿಗೂ ತಿಳಿಸಿರಿ.