ಈ ಮನೆಮದ್ದು ತುಂಬಾನೆ ಅಮೂಲ್ಯವಾದದ್ದು ಮನೆಯಲ್ಲಿ ಇರುವ ಸಾಮಗ್ರಿಗಳನ್ನು ಬಳಸಿ ಈ ಮನೆಮದ್ದನ್ನು ತಯಾರಿಸಬಹುದು. ಜಾಯಿಂಟ್ ಪೇನ್, ಸೊಂಟ ನೋವು, ಮಂಡಿ ನೋವು ನರಗಳಲ್ಲಿ ಬಲಹೀನತೆ, ಕೈ ಕಾಲುಗಳ ಸೆಳೆತ, ಪಾದ ಉರಿಯುವಿಕೆಗೆ, ಮೂಳೆ ಹಾಗೂ ಕೀಲುಗಳಿಗೆ ಸಂಬಂಧಿಸಿದ ನೋವುಗಳಿದ್ದರೆ ಈ ಮನೆಮದ್ದನ್ನು ಮಾಡಿಕೊಳ್ಳಬಹುದು. ಯಾವುದೇ ಮಾತ್ರೆಗಳನ್ನು ತೆಗೆದುಕೊಂಡರೂ ಸಹಿತ ಅದರಿಂದ ಬೇಗನೆ ಗುಣವಾಗುವುದಿಲ್ಲ ನಮ್ಮಲ್ಲಿ ರುವ ಶಕ್ತಿಯಿಂದಲೇ ನಾವು ಇಂತಹ ಕಾಯಿಲೆಗಳನ್ನು ಏದುರಿಸುವಂತಹ ಶಕ್ತಿಯನ್ನು ನಾವು ಪಡೆದುಕೊಳ್ಳಬೇಕು. ಅದಕ್ಕಾಗಿ ನಾವು ಈ ಮನೆಮದ್ದನ್ನು ಹೇಗೆ ಮಾಡಬಹುದು ಎನ್ನುವ ವಿಧಾನ ಈ ಕೆಳಗಿನಂತಿವೆ.
ಈ ಮನೆಮದ್ದನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಲು, ಏಲಕ್ಕಿ, ಸೋಂಪು, ದಾಲ್ಚಿನಿ, ಶುಂಠಿ, ಕಲ್ಲು ಸಕ್ಕರೆ.
ಒಂದು ಪಾತ್ರೆಯಲ್ಲಿ ಒಂದು ಲೋಟ ಹಾಲನ್ನು ಹಾಕಿ ಕಾಯಿಸಲು ಇಡಬೇಕು. ಹಾಲಿನಲ್ಲಿ ಕ್ಯಾಲ್ಸಿಯಂ ಅಂಶ ತುಂಬಾನೆ ಇರುತ್ತದೆ ಹಾಗಾಗಿ ನಾವು ಹಾಲನ್ನು ರಾತ್ರಿ ಕುಡಿದು ಮಲಗಿದರೆ ನಮ್ಮ ದೇಹದಲ್ಲಿ ಕೆಲವೊಂದು ಅಂಗಗಳನ್ನು ಗುಣಪಡಿಸುವ ಶಕ್ತಿ ಹಾಲಿನಲ್ಲಿ ಇದೆ. ನಂತರ ಹಾಲಿಗೆ ನಾವು ಒಂದು ಚಮಚ ಸೋಂಪು ಕಾಳು, ಎರಡು ಏಲಕ್ಕಿಯನ್ನು ಸಣ್ಣಗೆ ಪುಡಿ ಮಾಡಿ ಹಾಕಬೇಕು. ಇದು ನಮ್ಮ ದೇಹವನ್ನು ತಂಪಾಗಿ ಇಡುವಂತೆ ಮಾಡುತ್ತದೆ. ಏಲಕ್ಕಿ ಮತ್ತು ಸೋಂಪು ಕಾಳು ತಿನ್ನುವುದರಿಂದ ರಕ್ತ ಶುದ್ಧವಾಗುತ್ತದೆ, ಮತ್ತು ಹೆಚ್ಚು ಬಿ. ಪಿ ಇರುವವರು ಕೂಡ ಇದನ್ನು ಹಾಲಿನೊಂದಿಗೆ ಸೇರಿಸಿ ಕುಡಿಯಬಹುದು. ಹಾಲು ಕುದಿ ಬಂದ ಮೇಲೆ ಒಂದೂವರೆ ಇಂಚು ದಾಲ್ಚಿನಿಯನ್ನು ಹಾಕಬೇಕು ಇದನ್ನು ಪುಡಿ ಮಾಡುವ ಅವಶ್ಯಕತೆ ಇಲ್ಲ. ದಾಲ್ಚಿನಿ ಎಷ್ಟು ಒಳ್ಳೆಯದು ಅಂದರೆ ಯಾರಿಗೆ ನರಗಳಲ್ಲಿ ರಕ್ತ ಸಂಚಲನ ಸರಿಯಾಗಿ ಆಗುವುದಿಲ್ಲವೊ ಅಂತವರು ದಾಲ್ಚಿನಿ ಸೇವಿಸುವುದರಿಂದ ತುಂಬಾನೆ ಒಳ್ಳೆಯದು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಂತರ ಶುಂಠಿ ಯನ್ನು ಚೆನ್ನಾಗಿ ಜಜ್ಜಿ ಹಾಕಿ ಒಂದು ಚಮಚದಿಂದ ಕೃೆಯಾಡಿಸಬೇಕು. ಹಾಲನ್ನು ಚೆನ್ನಾಗಿ ಕುದಿ ಬರುವವರೆಗೂ ಕುದಿಸಬೇಕು ಇದು ತಣ್ಣಗಾದ ಮೇಲೆ ಕಲ್ಲು ಸಕ್ಕರೆ ಹಾಕಬೇಕು. ಬೆಳಿಗ್ಗೆ ಎದ್ದ ತಕ್ಷಣ ಹಾಗೂ ರಾತ್ರಿ ಮಲಗುವ ವೇಳೆ ಈ ಹಾಲನ್ನು ಕುಡಿಯಬಹುದು. ವಾರದಲ್ಲಿ ಮೂರರಿಂದ ನಾಲ್ಕು ಸಲ ಈ ಹಾಲನ್ನು ಕುಡಿದರೆ ಒಳ್ಳೆಯದು.
ಈ ಮನೆಮದ್ದು ಒಂದು ಒಳ್ಳೆಯ ಅದ್ಭುತವಾದ ಮನೆಮದ್ದು ಅಂತಾನೆ ಹೇಳಬಹುದು. ಇದರಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾಮಗಳಿರುವುದಿಲ್ಲ. ಯಾಕೆ ನಾವೆಲ್ಲರೂ ಈ ತರಹ ಹಾಲನ್ನು ಮಾಡಿಕೊಂಡು ಕುಡಿಯಬಾರದು ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಅಂದರೆ ಈ ಹಾಲನ್ನು ಮಾಡಿಕೊಳ್ಳುವುದರಿಂದ ಎಲ್ಲಾ ರೀತಿಯಿಂದಲೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.