ಯಾವುದೇ ಸ್ವೀಟ್ ಮಾಡಬೇಕೆಂದರೂ ಎಣ್ಣೆ ಅಥವಾ ತುಪ್ಪದ ಅವಶ್ಯಕತೆ ಇರುತ್ತದೆ. ಆದರೆ ಈ ಸ್ವೀಟ್ ಮಾಡಲು ತುಪ್ಪ ಅಥವಾ ಎಣ್ಣೆ ಯಾವುದು ಬೇಕಾಗಿಲ್ಲ. ಇದು ತುಂಬಾ ರುಚಿಯಾಗಿರುತ್ತದೆ. ಹಾಗೆಯೇ ಬಾಯಲ್ಲಿಟ್ಟರೆ ಕರಗುವ ಹಾಗೆ ಇರುತ್ತದೆ. ಹಾಗಾದರೆ ಈ ಸ್ವೀಟ್ ಮಾಡುವ ವಿಧಾನವನ್ನು ನಾವು ಇಲ್ಲಿ ತಿಳಿಯೋಣ.
ಇದಕ್ಕೆ ಹಾಲು ಸಕ್ಕರೆ ಮತ್ತು ಮೊಸರು ಮೂರು ಪದಾರ್ಥಗಳು ಇದ್ದರೆ ಸಾಕು. ಅದರ ಸುಲಭದ ವಿಧಾನ ಹೀಗಿದೆ. ಮೊದಲು ಒಂದು ಪಾತ್ರೆಗೆ ಬಟ್ಟೆಯನ್ನು ಹಾಕಿ ಎರಡು ಕಪ್ ಮೊಸರನ್ನು ಅದಕ್ಕೆ ಹಾಕಬೇಕು. 20 ನಿಮಿಷ ಅದನ್ನು ಹಾಗೆಯೇ ಬಿಟ್ಟು ನಂತರ ನೀರನ್ನು ಸರಿಯಾಗಿ ಹಿಂಡಬೇಕು. ಆ ನೀರನ್ನು ಮತ್ತೆ ಉಪಯೋಗಿಸಬಾರದು. ಗಟ್ಟಿಯಾದ ಮೊಸರನ್ನು ಒಂದು ಕಪ್ನಲ್ಲಿ ಹಾಕಿಕೊಳ್ಳಬೇಕು. ನಂತರ 4 ಚಮಚದಷ್ಟು ಸಕ್ಕರೆ ಏನು ಹಾಕಿಕೊಳ್ಳಬೇಕು. ಈಗ ಸಕ್ಕರೆಯನ್ನು ಇಟ್ಟು ಸಣ್ಣ ಉರಿಯಲ್ಲಿ ನೀರು ಹಾಕದೆ ಸಕ್ಕರೆಯನ್ನು ಕರಗಿಸಬೇಕು. ಮೊದಲೇ ಗಟ್ಟಿಯಾದ ಮೊಸರು ಇದ್ದರೆ ಅದನ್ನು ಶೋಧಿಸುವ ಅವಶ್ಯಕತೆ ಇರುವುದಿಲ್ಲ. ಈಗ ಇದು ಬಂಗಾರದ ಬಣ್ಣಕ್ಕೆ ಬರುತ್ತದೆ. ಅದಕ್ಕೆ ಎರಡು ಚಮಚದಷ್ಟು ಹಾಲನ್ನು ಹಾಕಬೇಕು. ನಂತರ ಅರ್ಧ ಲೀಟರ್ ನಷ್ಟು ಹಾಲನ್ನು ಹಾಕಬೇಕು. ಒಂದೇ ಬಾರಿ ಅರ್ಧ ಲೀಟರ್ ಹಾಕಬಾರದು ಒಂದೊಂದು ಗ್ಲಾಸ್ ಪ್ರಮಾಣ ಹಾಕಬೇಕು.ಚೆನ್ನಾಗಿ ಕುದಿಯಲು ಆರಂಭಿಸುತ್ತದೆ.
ಮತ್ತೆ ನಾಲ್ಕು ಟೀ ಸ್ಪೂನಷ್ಟು ಸಕ್ಕರೆಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಈಗ ಗಟ್ಟಿಯಾಗುತ್ತಾ ಹೋಗುತ್ತದೆ. ಸಿಹಿಪ್ರಮಾಣ ಈ ಸಮಯದಲ್ಲಿ ಜಾಸ್ತಿಯಾಗಿ ಮಾಡಿಕೊಳ್ಳಬೇಕು. ಈಗ ಸ್ಟೋವ್ ಆಫ್ ಮಾಡಿ ಹತ್ತು ನಿಮಿಷ ತಣ್ಣಗಾಗಲು ಬಿಡಬೇಕು. ಈಗ ಬೇಯಿಸಿದ ಹಾಲಿನ ಮಿಶ್ರಣವನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಬೇಕು. ನಂತರ ಒಂದು ಪಾತ್ರೆಗೆ ಮೊಸರನ್ನು ಹಾಕಿ ಸಣ್ಣ ಸಣ್ಣ ಗಂಟುಗಳಿದ್ದರೆ ಅದನ್ನು ಚೆನ್ನಾಗಿ ನೂರಿದುಕೊಳ್ಳಬೇಕು. ಈಗ ಅದಕ್ಕೆ ಹಾಲಿನ ಮಿಶ್ರಣ ಹಾಕಬೇಕು. ಒಂದು ಕಪ್ ಮೊಸರಿಗೆ ಒಂದು ಕಪ್ ಹಾಲಿನ ಮಿಶ್ರಣವನ್ನು ತೆಗೆದುಕೊಳ್ಳಬೇಕು. ಇವೆಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಒಂದು ಸ್ಟೀಲ್ ಬಟ್ಟಲಿಗೆ ಎಣ್ಣೆ ಅಥವಾ ತುಪ್ಪ ಸವರದೇ ಈ ಮಿಶ್ರಣವನ್ನು ಹಾಕಬೇಕು.ಅಲಂಕಾರಕ್ಕೆ ಪಿಸ್ತಾವನ್ನು ಹಾಕಬೇಕು.
ನಂತರ ಒಂದುಪಾತ್ರೆಗೆ ನೀರನ್ನು ಹಾಕಿ ಒಳಗಡೆ ಸ್ಟೋವ್ ಸ್ಟ್ಯಾಂಡ್ ಇಟ್ಟು ನೀರು ಸ್ವಲ್ಪ ಕುದ್ದಿದ ಮೇಲೆ ಮಿಶ್ರಣದ ಪಾತ್ರೆಯನ್ನು ಇಡಬೇಕು. ಒಂದು ಬಟ್ಟಲನ್ನು ಅದಕ್ಕೆ ಮುಚ್ಚಿ ದೊಡ್ಡ ಪಾತ್ರೆಗೂ ಸಹ ಮುಚ್ಚಬೇಕು. 15 ರಿಂದ 20 ನಿಮಿಷ ಬೇಯಿಸಬೇಕು. ನಂತರ ಚಾಕು ಹಾಕಿ ಬೆಂದಿದೆಯೂ ಎಂದು ನೋಡಬೇಕು. ನಂತರ ಅರ್ಧಗಂಟೆ ಫ್ರೀಜರ್ ನಲ್ಲಿಡಬೇಕು. ನಂತರ ಬೇಕಾದ ಆಕಾರಕ್ಕೆ ಕತ್ತರಿಸಬೇಕು.ಈಗ ರುಚಿ ರುಚಿಯಾದ ಸ್ವೀಟ್ ರೆಡಿ.ತಿನ್ನಲು ತುಂಬಾ ಸುಲಭ ಮತ್ತು ರುಚಿಕರವಾಗಿರುತ್ತದೆ.ಇನ್ನು ಗಟ್ಟಿಯಾಗಬೇಕು ಅನಿಸಿದರೆ ಹಾಲುಪುಡಿ ಬಳಸಬಹುದು.