ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದೆ ಒಂದು ಮಹಾಮಾರಿ. ಆ ಮಹಾಮಾರಿ ಯಾವುದು ಎಂದು ಎಲ್ಲರಿಗೂ ತಿಳಿದಿದೆ. ಅದೇ ಕೊರೊನ ವ್ಯೆರಸ್. ಇದಕ್ಕೆ ಇನ್ನೂ ಮದ್ದನ್ನು ಕಂಡುಹಿಡಿಯಲಾಗಲಿಲ್ಲ. ಇದು ಇಡೀ ಪ್ರಪಂಚದಲ್ಲಿ ಭಯ ಹಾಗೂ ಆತಂಕವನ್ನು ಸ್ರಷ್ಟಿಸಿದೆ. ಯಾರಿಗೆ ರೋಗ ನಿರೋಧಕ ಶಕ್ತಿ ಹೆಚ್ಚು ಇರುವುದೋ ಅವರು ಇದರಿಂದ ಮುಕ್ತರಾಗಬಲ್ಲರು. ಈ ವ್ಯೆರಸ್ ಅವರನ್ನು ಏನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲರೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಿದೆ. ಆದ್ದರಿಂದ ಆಯುಷ್ ಇಲಾಖೆಯು ಒಂದು ಕಷಾಯವನ್ನು ಮಾಡಿ ಕುಡಿಯುವ ಸಲಹೆಯನ್ನು ನೀಡಿದೆ. ಅದನ್ನು ನಾವು ಇಲ್ಲಿ ತಿಳಿಯೋಣ.
ಅದಕ್ಕೆ ಹೆಚ್ಚಿನ ಖರ್ಚಿನ ಅವಶ್ಯಕತೆ ಇಲ್ಲ. ಆ ರೋಗ ನಿರೋಧಕ ಶಕ್ತಿಯ ಕಷಾಯ ಮಾಡುವ ವಿಧಾನವನ್ನು ಸುಲಭವಾಗಿ ಇಲ್ಲಿ ತಿಳಿಯೋಣ.ಮೊದಲು ಒಂದು ಪಾತ್ರೆಗೆ 3ಗ್ಲಾಸ್ ನೀರು ಹಾಕಬೇಕು. ಅದಕ್ಕೆ ಒಂದರಿಂದ ಒಂದೂವರೆ ಇಂಚು ಚಕ್ಕೆ ಹಾಕಬೇಕು. ಚಕ್ಕೆಯನ್ನು ತುಂಡು ತುಂಡಾಗಿ ಮಾಡಿ ಹಾಕಬೇಕು. ಅದಕ್ಕೆ 2 ಏಲಕ್ಕಿಯನ್ನು ಸಿಪ್ಪೆ ಸಹಿತ ತೆಗೆದು ಹಾಕಬೇಕು. ನಂತರ 6 ರಿಂದ 8 ಲವಂಗ ಹಾಕಬೇಕು. ನಂತರ ಒಂದು ಫಲಾವ್ ಎಲೆ ಹಾಕಬೇಕು. ಈ ಎಲೆ ಹಾಕುವುದರಿಂದ ನೆಗಡಿ, ಕೆಮ್ಮು ಆದಾಗ ಉಂಟಾಗುವ ಚಳಿಯನ್ನು ಹೋಗಲಾಡಿಸುತ್ತದೆ.
ನಂತರ 5 ರಿಂದ 6 ಮೆಣಸಿನಕಾಳನ್ನು ಪುಡಿ ಮಾಡಿ ಹಾಕಬೇಕು. ಇದು ಕಫ,ಗಂತಲುನೋವು, ಗಂಟಲು ಕೆರೆತವನ್ನು ದೂರ ಮಾಡುತ್ತದೆ. ಮುಕ್ಕಾಲು ಅಥವಾ ಒಂದು ಇಂಚು ಶುಂಠಿಯನ್ನು ಜಜ್ಜಿ ಹಾಕಬೇಕು. ಇದು ಜೀರ್ಣಶಕ್ತಿಗೆ ತುಂಬಾ ಒಳ್ಳೆಯದು. ನಂತರ ಹಸಿ ಅರಿಶಿನದ ಕೊಂಬನ್ನು ತುರಿದು ಹಾಕಬೇಕು. ಇಲ್ಲವಾದಲ್ಲಿ ಅರಿಶಿನದ ಪುಡಿ ಬಳಸಬಹುದು.ನಂತರ 7 ರಿಂದ8 ಎಲೆ ತುಳಸಿ ಹಾಕಬೇಕು. ಅದರಲ್ಲಿ ಕಪ್ಪು ತುಳಸಿ ಆದರೆ ಒಳ್ಳೆಯದು. ನಂತರ ಒಂದು ಚಮಚ ಬೆಲ್ಲ ಹಾಕಬೇಕು. ಇವೆಲ್ಲವನ್ನು 5 ರಿಂದ 10 ನಿಮಿಷ ಕುದಿಸಬೇಕು. ಕುಡಿಯುವಾಗ ಬರುವ ಹವೆಯನ್ನು ನಾವು ತೆಗೆದುಕೊಳ್ಳುವುದರಿಂದ ತುಂಬಾ ರಿಲೀಫ್ ಆಗುತ್ತದೆ.ನಂತರ ಚೆನ್ನಾಗಿ ಕುದಿಯಬೇಕು. ಕುದ್ದಿದ ನೀರು 3 ಲೋಟ ನೀರು 2ಲೋಟ ಆಗಬೇಕು. ಕೊನೆಯದಾಗಿ ಇದನ್ನು ಗ್ಯಾಸ್ ಓಫ್ ಮಾಡಿ ಸೋಸಬೇಕು.
ಚಿಕ್ಕ ಮಕ್ಕಳಿಗೆ 2 ಚಮಚ ಕೊಡಬೇಕು. ಇದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಇದರಿಂದ ಯಾವುದೇ ವ್ಯೆರಸ್ ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ. ಏಕೆಂದರೆ ಈ ಕಷಾಯದಿಂದ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ.