Health Tips: ಬಾಯಿಗಳ ದುರ್ವಾಸನೆಯಿಂದ ಹೊರಬರುವುದು ಹೇಗೆ ಇಲ್ಲಿದೆ ನೋಡಿ ಸುಲಭ ಉಪಾಯ.

Health Tips ಸಾಮಾನ್ಯವಾಗಿ ಇದೊಂದು ಸಮಸ್ಯೆಯನ್ನು ಪ್ರತಿಯೊಬ್ಬರೂ ಕೂಡ ಅನುಭವಿಸುತ್ತಿರುತ್ತಾರೆ ಆದರೆ ಇದರ ಬಗ್ಗೆ ಹೇಳಿಕೊಳ್ಳಲು ಅಥವಾ ಇದರ ಸಮಸ್ಯೆಗೆ ಪರಿಹಾರವನ್ನು ಹುಡುಕುವಂತಹ ಪ್ರಯತ್ನವನ್ನು ಮಾಡೋರು ಕಡಿಮೆ. ಹಾಗಿದ್ದರೆ ಇಂದಿನ ಲೇಖನಿಯಲ್ಲಿ ಇದರ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಹೌದು ನಾವು ಮಾತನಾಡಲು ಹೊರಟಿರುವುದು ಬಾಯಿಯ ದುರ್ವಾಸನೆಯ(Moutg Badsmell) ಬಗ್ಗೆ. ಇದನ್ನು ಹೋಗಲಾಡಿಸಲು ಏನೆಲ್ಲ ಮಾಡಬಹುದು ಎಂಬುದನ್ನು ಇಂದಿನ ಲೇಖನಿಯಲ್ಲಿ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ ಮೊದಲಿಗೆ, ಪ್ರತಿದಿನ ಬೆಳಗ್ಗೆ ಎದ್ದ ನಂತರ ಹಾಗೂ ರಾತ್ರಿ ಮಲಗುವ ಮುನ್ನ ಅಂದರೆ ಊಟ ಆದನಂತರ ಹಲ್ಲುಜ್ಜುವ ಅಭ್ಯಾಸವನ್ನು ಮಾಡಿಕೊಂಡರೆ ಕೂಡ ಇದು ಹೋಗುತ್ತದೆ.

ಆಗಾಗ ಸೋಂಪು ಕಾಳನ್ನು ಅಗೀಹುಳು ಕೂಡ ನಿಮ್ಮ ಬಾಯಿಯ ತಾಜಾತನವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪುದಿನಾ ತುಳಸಿಗಳಂತಹ ಆರೋಗ್ಯಭರಿತ ಎಲೆಗಳನ್ನು ಕೂಡ ಆಗಾಗ ಜಗಿಯುವುದರ ಮೂಲಕ ನೀವು ಬಾಯಿಯ ದುರ್ನಾಥವನ್ನು ತೊಡೆದು ಹಾಕಬಹುದು. ಇದು ಆರೋಗ್ಯದ ದೃಷ್ಟಿಯಿಂದ ಹಾಗೂ ನಿಮ್ಮ ಬಾಯಿಯ ಸುವಾಸನೆ ದೃಷ್ಟಿಯಿಂದ ಕೂಡ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.

ಸಿಟ್ರಿಕ್ ಅಂಶ ಹೆಚ್ಚಾಗಿರುವಂತಹ ನಿಂಬೆಹಣ್ಣು ಅಥವಾ ಮೂಸಂಬಿ(Orange) ಹಣ್ಣಿನ ಸಿಪ್ಪೆಯನ್ನು ಬಾಯಿಗೆ ಹಾಕಿ ಆಗಾಗ ಜಗಿಯುತ್ತಿರಿ. ನಂಜು ನಿರೋಧಕ ಆಗಿರುವಂತಹ ಲವಣದ ಸೇವನೆ ಕೂಡ ನಿಮ್ಮ ಬಾಯಿಂದ ಕೆಟ್ಟ ವಾಸನೆ ಹೋಗಲಾಡಿಸುವಂತೆ ಮಾಡುವಲ್ಲಿ ಪರಿಣಾಮಕಾರಿಯಾದ ಪಾತ್ರವನ್ನು ವಹಿಸುತ್ತದೆ.

Leave a Comment