ಈ ಎಲೆಯ ಕಷಾಯ ಮಾಡಿದರೆ ಸಾಕು ಇಂತಹ ಭಾದೆಗಳು ಕಾಡೋದಿಲ್ಲ

ಸೀಬೆಹಣ್ಣು ಜನಪ್ರಿಯ ಹಣ್ಣುಗಳಲ್ಲಿ ಒಂದಾಗಿದೆ. ಸುಲಭವಾಗಿ ಎಲ್ಲರ ಮನೆಯಲ್ಲಿ ಸಿಗುವಂತಹ ಹಣ್ಣು ಇದಾಗಿದ್ದು, ಬಡವರ ಸೇಬು ಎಂದೇ ಗುರುತಿಸಿಕೊಂಡಿರುವ ಸೀಬೆಹಣ್ಣು ವರ್ಷದ ಎಲ್ಲಾ ಅವಧಿಯಲ್ಲೂ ಸಿಗುತ್ತದೆ. ಸೀಬೆಹಣ್ಣು ಒಂದೇ ಪ್ರಯೋಜನಕಾರಿಯಾಗದೆ ಅದರ ಎಲೆಯೂ ಸಹ ಔಷಧಿಯ ಗುಣಗಳನ್ನು ಹೊಂದಿದೆ. ಸೀಬೆಹಣ್ಣಿನ ಎಲೆ ಆರೋಗ್ಯಕ್ಕೆ ಎಷ್ಟು ಉಪಕಾರಿ ಮತ್ತು ಅದರಿಂದಾಗುವ ಪ್ರಯೋಜನವೇನು?, ಲಾಭಗಳೇನು?, ನಾವು ಅದನ್ನು ಹೇಗೆ ಉಪಯೋಗಿಸಿಕೊಳ್ಳಬಹುದು ಅನ್ನುವುದು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ.

ವಿಟಮಿನ್ ಎ. ಬಿ ಹಾಗೂ ಸಿ ಮತ್ತು ಪೊಟ್ಯಾಸಿಯಂ ಅಂಶಗಳನ್ನು ಹೊಂದಿದೆ. ಬೊಜ್ಜಿನ ಸಮಸ್ಯೆ ಇರುವವರು ಸೀಬೆ ಎಲೆಗಳ ಕಷಾಯವನ್ನು ಕುಡಿಯುವುದರಿಂದ ಬೊಜ್ಜು ಕಡಿಮೆಯಾಗುತ್ತದೆ. ಕಾಮಾಲೆ ರೋಗವಿದ್ದರೆ ಎಲೆಗಳನ್ನು ಬಿಸಿ ನೀರಿನಲ್ಲಿ ಕುದಿಸಿ ಅದಕ್ಕೆ ಬೆ ಬೆಲ್ಲ ಸೇರಿಸಿ ಕುಡಿಯಬೇಕು. ಈಗಂತೂ ಯುವಕ ಯುವತಿಯರಲ್ಲಿ ಕಾಡುವ ಅತಿದೊಡ್ಡ ಸಮಸ್ಯೆ ಎಂದರೆ ಕೂದಲು ಉದುರುವುದು, ತುಂಡಾಗುವುದು ಈ ಸಮಸ್ಯೆ ಹೇರಳವಾಗಿದೆ ಇದಕ್ಕೆ ಹತ್ತು ಸೀಬೆ ಎಲೆಗಳನ್ನು ಒಂದು ಲೀಟರ್ ನೀರಿನಲ್ಲಿ ಕಾಲು ಗಂಟೆ ಕುದಿಸಿ ಆ ನೀರನ್ನು ಸೋಸಿ ನಂತರ ತಲೆಗೆ ಮತ್ತು ಕೂದಲಿಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿಕೊಂಡು ಇಪ್ಪತ್ತು ನಿಮಿಷಗಳ ಕಾಲ ಹಾಗೆ ಬಿಟ್ಟು ತೊಳೆದುಕೊಳ್ಳಬೇಕು. ಇದನ್ನು ಮಾಡುವುದರಿಂದ ತಲೆಹೊಟ್ಟು, ಕೂದಲು ಉದುರುವುದು ಕಡಿಮೆ ಆಗುತ್ತದೆ.

ಮೊಡವೆಗಳನ್ನು ನಿವಾರಿಸುವ ಶಕ್ತಿ ಇದರಲ್ಲಿದೆ. ಈ ಎಲೆಗಳನ್ನು ನುಣ್ಣಗೆ ಅರೆದು ಪೇಸ್ಟ ಮಾಡಿ ಮೊಡವೆ ಇರುವ ಜಾಗಕ್ಕೆ ಹಚ್ಚಿದರೆ ಮೊಡವೆಗಳು ಬೇಗನೆ ಮಾಯವಾಗುವುದು .ಬಾಯಿಯಲ್ಲಿ ಹುಣ್ಣಾದರೆ ಸೀಬೆ ಎಲೆಗಳನ್ನು ಅರೆದು ಹುಣ್ಣಾಗಿರುವ ಜಾಗಕ್ಕೆ ಹಚ್ಚಿದರೆ ಬಾಯಿ ಹುಣ್ಣು ಕಡಿಮೆ ಆಗುತ್ತದೆ. ಆಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿ ಇರುವುದರಿಂದ ಅನೇಕ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ. ಕೆಮ್ಮು, ನೆಗಡಿ, ತಲೆ ನೋವು, ಕ್ಯಾನ್ಸರ್, ಸಕ್ಕರೆ ಕಾಯಿಲೆ, ಭೇದಿ ಮತ್ತಿತರ ರೋಗಗಳಿಗೆ ಮನೆಮದ್ದಾಗಿದೆ. ಸೀಬೆಹಣ್ಣು ಒಂದೆ ಪ್ರಯೋಜನವಲ್ಲದೆ ಅದರ ಎಲೆಯಿಂದಲೂ ಅನೇಕ ಮನೆಮದ್ದನ್ನು ತಯಾರಿಸಬಹುದು. ಇದರಿಂದ ನಮಗೆ ಯಾವುದೇ ಹಾನಿಯಿಲ್ಲ.

Leave a Comment