ನಮಗೆ ಆರೋಗ್ಯದಿಂದ ಇದ್ದರೆ ಸಾಕು ಮತ್ತೆನು ಬೇಡ ಅನ್ನಿಸಿರುತ್ತದೆ. ಆರೋಗ್ಯ ಸರಿಯಾಗಿ ಇದ್ದಲ್ಲಿ ದುಡಿಯಲು ಸುಲಭವಾಗುತ್ತದೆ. ಇರುವ ಹಣದಿಂದ ನೆಮ್ಮದಿಯ ಜೀವನ ನಡೆಸಲು ಆಗುತ್ತದೆ. ಆದರೆ ಆರೋಗ್ಯವೇ ಕೈ ಕೊಟ್ಟರೆ ಜೀವನವೇ ಸಾಕು ಅನ್ನಿಸಿಬಿಡುತ್ತದೆ. ಮಾನಸಿಕವಾಗಿಯು ಕುಗ್ಗಿ ಹೋಗುತ್ತೇವೆ. ಆದ್ದರಿಂದ ಆರೋಗ್ಯ ತುಂಬಾ ಮುಖ್ಯ. ನಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಮೂವತ್ತೈದು ಸೂತ್ರಗಳನ್ನು ನೀಡಲಾಗಿದೆ. ಆ ಸೂತ್ರಗಳ ಬಗೆಗೆ ಈ ಮಾಹಿತಿಯ ಮೂಲಕ ತಿಳಿದುಕೊಳ್ಳೊಣ.
ಸಂಪೂರ್ಣವಾಗಿ ಆರೋಗ್ಯಯುತವಾಗಿ, ನೆಮ್ಮದಿಯಾಗಿ ಇರಬೇಕೆಂದು ಬಯಸುವವರು ಈ ಕೆಳಗಿನ ಮೂವತ್ತೈದು ಸೂತ್ರಗಳನ್ನು ಪಾಲಿಸಬೇಕು. ಇವುಗಳು ಹಿಂದಿನವರ ಕೆಲವು ತತ್ವಗಳಾಗಿದ್ದು ಇಂದಿನ ಪೀಳಿಗೆ ಇದನ್ನು ಮರೆತಿದೆ. ಅದೆನೆಂದರೆ ಬೆಳಿಗ್ಗೆ 4:30 ಕ್ಕೆ ಏಳಬೇಕು ಯಾಕೆಂದರೆ ಇದು ಬ್ರಹ್ಮ ಮುಹೂರ್ತ. ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ನಿದ್ದೆಯಿಂದ ಎದ್ದ ಕೂಡಲೆ ಕುಡಿಯಬೇಕು. ಐಸ್ ಕ್ರೀಂಗಳಿಂದ ದೂರವಿರಬೇಕು. ಪ್ರಿಡ್ಜ್ ನಲ್ಲಿ ಇಟ್ಟು ತೆಗೆದ ಆಹಾರಗಳನ್ನು ಒಂದು ಗಂಟೆಯ ಮೊದಲು ಉಪಯೋಗಿಸಬಾರದು. ಹೊರಗೆ ಸಿಗುವ ತಂಪು ಪಾನಿಯ ಸೇವನೆ ಮಾಡಬಾರದು. ಅಡುಗೆ ಮಾಡಿದ 40 ನಿಮಿಷದೊಳಗೆ ಬಿಸಿಯಿರುವಾಗಲೆ ಸೇವಿಸಬೇಕು. ಊಟವಾದ ನಂತರ ವಜ್ರಾಸನದಲ್ಲಿ ಹತ್ತು ನಿಮಿಷ ಕುಳಿತುಕೊಳ್ಳಬೇಕು. ಬೆಳಿಗ್ಗೆಯ ತಿಂಡಿಯನ್ನು 8:30 ಗೂ ಮೊದಲೆ ಸೇವನೆ ಮಾಡಬೇಕು.
ಹಣ್ಣಿಮ ರಸ ತಿಂಡಿಯ ನಂತರ ಸೇವಿಸಬೇಕು. ತಿಂಡಿಯ ನಂತರದಲ್ಲಿ ಕೆಲಸ ಮಾಡುವುದು ಅವಶ್ಯಕ. ಎರಡರಿಂದ ಮೂರು ಲೋಟ ನೀರನ್ನು ಮಧ್ಯಾಹ್ನದ ಒಳಗೆ ಕುಡಿಯ ಬೇಕು. ನೀರನ್ನು ಊಟದ 48 ನಿಮಿಷಗಳ ಮೊದಲು ಸೇವಿಸಿರಬೇಕು. ಊಟ ಮಾಡುವಾಗ ಕುಳಿತುಕೊಂಡಿರಬೇಕು. ಆಹಾರವನ್ನು ಚೆನ್ನಾಗಿ ಅಗೆದು, ಜಗಿದು ನಂತರ ನುಂಗಬೇಕು. ಓಮದ ಪುಡಿಯನ್ನು ಮಧ್ಯಾಹ್ನದ ಸಾಂಬಾರಿನಲ್ಲಿ ಬಳಸಬೇಕು. ಮಧ್ಯಾಹ್ನ ಹೊಟ್ಟೆ ತುಂಬ ಇಉಟವನ್ನು ಮಾಡಬೇಕು. ಊಟದ ನಂತರ ಮಜ್ಜಿಗೆ ಸೇವನೆ ಉತ್ತಮ. ಊಟದ ನಂತರ ಸ್ವಲ್ಪ ವಿಶ್ರಾಂತಿ ಮಾಡಬೇಕು. ಸೂರ್ಯಾಸ್ತದ ಒಳಗೆ ಊಟ ಮಾಡುವುದು ಉತ್ತಮ. ಮಿತವಾದ ಆಹಾರ ರಾತ್ರಿ ವೇಳೆ ಉತ್ತಮ. ಸುಮಾರು ಒಂದು ಕಿ.ಮೀ. ಆದರೂ ಊಟದ ನಂತರ ನಡೆದಾಡಬೇಕಂತೆ. ಊಟದ ಒಂದು ಗಂಟೆ ನಂತರ ಹಾಲು ಸೇವನೆ ಉಚಿತ. ಲಸ್ಸಿ ಮಜ್ಜಿಗೆ ಸೇವನೆ ಬೇಡ. ಹುಳಿ ಇರುವ ಹಣ್ಣುಗಳ ತಿನ್ನುವುದು ಒಳ್ಳೆಯದಲ್ಲ.
ರಾತ್ರಿ ಹತ್ತು ಗಂಟೆಯ ಒಳಗೆ ಮಲಗುವುದು ಉತ್ತಮವಾದ ದಾರಿ. ಕೆಲವು ವಸ್ತುಗಳು ಅಂದರೆ ಮೈದಾ, ಸಕ್ಕರೆ, ಉಪ್ಪು ಇವುಗಳ ಬಳಕೆ ಕಡಿಮೆ ಮಾಡಬೇಕು. ಸಲಾಡ್ ರಾತ್ರಿ ವೇಳೆ ಒಳ್ಳೆಯದಲ್ಲ. ರಾತ್ರಿ ವಿದೇಶಿಯರ ಆಹಾರ ಪದ್ಧತಿ ಒಳ್ಳೆಯದಲ್ಲ. ಟೀ, ಕಾಫಿ ಕುಯಬಾರದು ಆದಷ್ಟು ಕಡಿಮೆ ಮಾಡುತ್ತಾ ಇದ್ದರೆ ಉತ್ತಮ. ಅರಿಶಿನವನ್ನು ಹಾಲಿನಲ್ಲಿ ಬೆರೆಸಿ ಕುಡಿದರೆ ಕ್ಯಾನ್ಸರ್ ಮುಂತಾದ ರೋಗಗಲಿಂದ ಮುಕ್ತಿ ಹೊಂದಬಹುದು. ಚಿಕಿತ್ಸೆಗೆ ಆಯುರ್ವೇದ ಪದ್ಧತಿ ಉತ್ತಮ. ಚಳಿಗಾಲದಲ್ಲಿ ಬೆಳ್ಳಿ ಅಥವಾ ಬಂಗಾರದ ತಟ್ಟೆಯಲ್ಲಿ ಆಹಾರ ಅಥವಾ ಪಾನೀಯ ಸೇವನೆ ಉತ್ತಮ. ತಾಮ್ರದ ಪಾತ್ರೆಯಲ್ಲಿ ಮಳೆಗಾಲದಲ್ಲಿ ನೀರು ಕಯಡಿಯಬೇಕು. ಮಣ್ಣಿನ ಪಾತ್ರಯ ನೀರು ಬೇಸಿಗೆ ಕಾಲದಲ್ಲಿ ತಂಪು. ಊಟ ಮಾಡುವಾಗ ಅವಶ್ಯಕತೆ ಇದ್ದರೆ ಮಾತ್ರವೇ ನೀರು ಕುಡಿಯಬೇಕು.
ಇವೆಲ್ಲವೂ ನಮ್ಮ ಆರೋಗ್ಯ ಕಾಯುವ ಕೆಲವು ಸೂತ್ರಗಳು. ಇವುಗಳನ್ನೂ ಅನುಸರಿಸಿ ನಮಗೆ ಖಾಯಲೆಗಳು ಬರದಂತೆ ತಡೆಯಬಹುದು. ಖಾಯಿಲೆ ಬಂದಾಗ ಉಪಶಮನ ಮಾಡುವುದರ ಬದಲು ಖಾಯಿಲೆ ಬರದಂತೆ ತಡೆಯುವುದು ಮೇಲು