ಕೆಲವೊಂದು ಆಹಾರಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ಅವುಗಳನ್ನು ತಿಂದರೆ ಹೊಟ್ಟೆ ಉಬ್ಬರಿಸುವುದು, ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು. ಈ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸುವ ಸುಲಭ ವಿಧಾನವನ್ನು ತಿಳಿಯೋಣ.
ಜೀರಿಗೆ ಕುದಿಸಿದ ನೀರು: ವಾಯುಪ್ರಕೋಪಕ್ಕೆ ಜೀರಿಗೆ ಕುದಿಸಿದ ನೀರಿನ ಸೇವನೆ ಅತ್ಯುತ್ತಮ ಮನೆಮದ್ದುಗಳಲ್ಲಿ ಒಂದಾಗಿದೆ. ಜೀರಿಗೆಯಲ್ಲಿರುವ ಅವಶ್ಯಕ ತೈಲಗಳು ಲಾಲಾರಸವನ್ನು ಹೆಚ್ಚು ಹೆಚ್ಚಾಗಿ ಸ್ರವಿಸುವಂತೆ ಪ್ರಚೋದಿಸುತ್ತವೆ ಹಾಗೂ ಇದು ಆಹಾರವನ್ನು ಇನ್ನಷ್ಟು ಸುಲಭವಾಗಿ ಜೀರ್ಣಗೊಳಿಸಲು ನೆರವಾಗುತ್ತದೆ ಮತ್ತು ಅತಿಯಾಗಿ ಅನಿಲಗಳು ಉತ್ಪತ್ತಿಯಾಗದಂತೆ ತಡೆಯುತ್ತದೆ. ಇದಕ್ಕಾಗಿ ಒಂದು ದೊಡ್ಡ ಚಮಚದಷ್ಟು ಜೀರಿಗೆಯನ್ನು ಎರಡು ಕಪ್ ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ಸುಮಾರು ಹತ್ತರಿಂದ ಹದಿನೈದು ನಿಮಿಷ ಚಿಕ್ಕ ಉರಿಯಲ್ಲಿ ಕುದಿಸಿದ ಬಳಿಕ ಉರಿ ಆರಿಸಿ ತಣಿಯಲು ಬಿಡಬೇಕು. ಬಳಿಕ ಈ ನೀರನ್ನು ಸೋಸಿ ಉಗುರುಚೆಚ್ಚನಿದ್ದಂತೆ ಊಟವಾದ ಕೊಂಚ ಹೊತ್ತಿನ ಬಳಿಕ ಸೇವಿಸಬೇಕು.
ಇಂಗು: ಒಂದು ವೇಳೆ ವಾಯುಪ್ರಕೋಪ ಎದುರಾಗಿ ಹೊಟ್ಟೆಯುಬ್ಬರಿಕೆ ಕಾಣಿಸಿಕೊಂಡರೆ ತಕ್ಷಣವೇ ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ (ಉಗುರು ಬೆಚ್ಚಗಾಗಿಸಲು ಸಾಧ್ಯವಿಲ್ಲದಿದ್ದರೆ ತಣ್ಣೀರೂ ಸರಿ) ಅರ್ಧ ಚಿಕ್ಕ ಚಮಚ ಇಂಗು ಹಾಕಿ ಕುಡಿದು ಬಿಡಬೇಕು. ಇಂಗಿನಲ್ಲಿ ಬ್ಯಾಕ್ಟೀರಿಯಾಗಳು ಅಹಾರವನ್ನು ಅತಿಯಾಗಿ ಜೀರ್ಣಿಸಿಕೊಂಡು ಉತ್ಪತ್ತಿ ಮಾಡಿದ ಅನಿಲಗಳನ್ನು ಇಲ್ಲವಾಗಿಸುವ ಗುಣವಿದೆ. ಆಯುರ್ವೇದದ ಪ್ರಕಾರ, ಇದು ದೇಹದಲ್ಲಿ ವಾತ ದೋಷವನ್ನು ಸರಿಪಡಿಸಲು ನೆರವಾಗುತ್ತದೆ. “ವಾತ ದೋಷಕ್ಕೆ ದೊಡ್ಡ ಕರುಳು ಪ್ರಮುಖ ಕಾರಣವಾಗಿದೆ. ಇದು ವಾಯುವಿನಿಂದ ಬರುವ ದೋಶವಾಗಿದೆ. ಕರುಳಿನಲ್ಲಿ ವಾತ ಹೆಚ್ಚಾಗುತ್ತಿದ್ದಂತೆಯೇ ವಾಯುವೂ ಹೆಚ್ಚುತ್ತದೆ.
ತ್ರಿಫಲಹೆಸರೇ ತಿಳಿಸುವಂತೆ ಇದು ಮೂರು ಫಲಗಳ ಮಿಶ್ರಣವಾಗಿದೆ ಹಾಗೂ ಹೊಟ್ಟೆಯಲ್ಲಿ ಎದುರಾಗುವ ವಾಯುಪ್ರಕೋಪಕ್ಕೆ ಸಾಕಷ್ಟು ಮಟ್ಟಿನ ಪರಿಹಾರ ಒದಗಿಸುತ್ತದೆ. ಇದಕ್ಕಾಗಿ ಒಂದು ಲೋಟ ಕುದಿಯುವ ನೀರಿಗೆ ಅರ್ಧ ಚಿಕ್ಕ ಚಮಚ ತ್ರಿಫಲ ಚೂರ್ಣವನ್ನು ಹಾಕಿ ಐದರಿಂದ ಹತ್ತು ನಿಮಿಷ ಚಿಕ್ಕ ಉರಿಯಲ್ಲಿ ಕುದಿಸಿ.
ಈ ನೀರನ್ನು ತಣಿಸಿ ಉಗುರು ಬೆಚ್ಚನಿದ್ದಂತೆ ರಾತ್ರಿ ಮಲಗುವ ಮುನ್ನ ಕುಡಿಯಿರಿ. ಆದರೆ ಇದರಲ್ಲಿ ಹೆಚ್ಚಿನ ನಾರಿನಂಶ ಇರುವ ಕಾರಣ ಹೆಚ್ಚಿನ ಪ್ರಮಾಣ ಸೇವಿಸಬಾರದು ಹಾಗೂ ಹೆಚ್ಚು ದಿನಗಳವರೆಗೂ ಸೇವಿಸಬಾರದು. ರಾತ್ರಿ ಕೊತ್ತಂಬರಿ ಮತ್ತು ಮೆಂತ್ಯವನ್ನು ನೀರಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಎದೆಯುರಿ, ಹುಳಿ ತೇಗು, ಅತ್ಯಾಮ್ಲತೆ ಶಮನವಾಗುತ್ತದೆ.ಆಹಾರ ಪಚನವಾಗದೇ ಹೊಟ್ಟೆಯುಬ್ಬರ ಇದ್ದಲ್ಲಿ ಜೀರಿಗೆ, ಒಣದ್ರಾಕ್ಷಿ, ಓಮದ ಕಾಳು ಜಜ್ಜಿ ಸೇವಿಸಿ ಹೇರಳವಾಗಿ ನೀರು ಮಜ್ಜಿಗೆ ಕುಡಿಯಿರಿ. ಮಜ್ಜಿಗೆಗೆ ಹಿಂಗು, ಕರಿಬೇವು ಸೇರಿಸಿ ಕುಡಿದರೆ ಹೊಟ್ಟೆಯ ನುಲಿತ ಕಡಿಮೆಯಾಗುತ್ತದೆ ನೆಲ್ಲಿಕಾಯಿ ಪುಡಿ ಮಜ್ಜಿಗೆಯಲ್ಲಿ ಸೇರಿಸಿ ಕುಡಿಯುವುದು ಒಳ್ಳೆಯದು.
ನಿಯಮಿತ ಸಮಯಕ್ಕೆ ಆಹಾರ ಸೇವನೆ ಶುಚಿಯಾದ ಆಹಾರ ಮತ್ತು ನೀರಿನ ಸೇವನೆ ಮಾಡುವುದು
ಹೊರಗೆ ತಿನ್ನುವಾಗ ಎಚ್ಚರವಹಿಸಿ ಊಟವಾದ ಕೂಡಲೇ ಭಾರ ಎತ್ತುವುದು, ಮಲಗುವುದು ಮಾಡಬಾರದು ಖಾರ ಮಸಾಲೆ, ಮಾಂಸಾಹಾರ ಮಿತವಾಗಿ ಸೇವಿಸಿ ನೀರು, ಎಳನೀರನ್ನು ಯಥೇಚ್ಛವಾಗಿ ಸೇವಿಸಿ ಕರಿದ ಕುರುಕಲು ತಿಂಡಿಗಳು, ಸೋಡಾ ಬಳಸಿರುವಂತಹ ಆಹಾರ ಸೇವನೆ ಬೇಡ
ಮೈದಾ ಹೆಚ್ಚಿರುವ (ಪಿಜ್ಜಾ ಇತ್ಯಾದಿ) ಆಹಾರಗಳ ಸೇವನೆ ಒಳ್ಳೆಯದಲ್ಲ