ಮನುಷ್ಯ ತಲೆ ದೇಹವನ್ನು ಅವನ ಬಯಕೆಗೆ ತಕ್ಕಂತೆ ಸರಿಯಾದ ತೂಕದಲ್ಲಿ ಇಟ್ಟುಕೊಳ್ಳಬೇಕು. ತನ್ನ ತೂಕವನ್ನು ಸರಿಯಾದ ಪ್ರಮಾಣದಲ್ಲಿ ಇರುವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. ಮನಸ್ಥಿತಿ ಇಲ್ಲದೆ ಇದ್ದಲ್ಲಿ ದೇಹದ ತೂಕ ಅತಿ ಹೆಚ್ಚು ಇರಬಹುದು. ಇಲ್ಲವಾದಲ್ಲಿ ದೇಹದ ತೂಕ ಕಡಿಮೆ ಇರಬಹುದು. ಅತಿ ಹೆಚ್ಚು ತೂಕ ಇರುವವರು ತೂಕವನ್ನು ಕಡಿಮೆ ಮಾಡಲು ಮನೆಯಲ್ಲಿಯೇ ಹಲವಾರು ಮಾರ್ಗಗಳಿವೆ. ಆದ್ದರಿಂದ ಅಂತಹ ಒಂದು ಮಾರ್ಗದ ಬಗ್ಗೆ ನಾವಿಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮೊದಲಿನ ಕಾಲಕ್ಕೆ ಹೋಲಿಸಿದರೆ ಈಗಿನ ಕಾಲದ ಆಹಾರ ಪದ್ಧತಿ ಬಹಳಷ್ಟು ಬದಲಾವಣೆಯನ್ನು ಹೊಂದಿದೆ. ಆಹಾರ ಪದ್ಧತಿ ಅಷ್ಟೇ ಅಲ್ಲ ಪ್ರತಿಯೊಂದು ಶೈಲಿಗಳು ಬದಲಾಗಿದೆ. ವಸ್ತ್ರವಿನ್ಯಾಸ ಇರಬಹುದು ಹಾಗೆಯೇ ಭಾಷೆ, ಮಾತುಗಳು ಪ್ರತಿಯೊಂದು ಬದಲಾವಣೆಯನ್ನು ಹೊಂದಿವೆ. ಕಾಲಕಾಲಕ್ಕೆ ಪ್ರತಿಯೊಂದು ಬದಲಾವಣೆ ಹೊಂದುವುದು ತಪ್ಪಲ್ಲ. ಆದರೆ ಅದು ಸರಿಯೋ ಅಥವಾ ತಪ್ಪು ಎಂದು ನಿರ್ಧರಿಸುವುದು ಅವರವರ ಕೈಯಲ್ಲಿ ಇರುತ್ತದೆ. ಅತಿಯಾದ ಬೊಜ್ಜನ್ನು ಹೊಂದಿರಬಾರದು.
ಅತಿಯಾದ ತೂಕ ಹೊಂದಿರುವವರು ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಅದರಲ್ಲೂ ಕೆಲವರಿಗೆ ಒಂದೊಂದು ಭಾಗದಲ್ಲಿ ಬೊಜ್ಜುಗಳು ಇರುತ್ತವೆ. ಆದರೆ ಕೆಲವರಿಗೆ ಹೊಟ್ಟೆಯಲ್ಲಿ ಬೊಜ್ಜು ಇದ್ದರೆ ಇನ್ನು ಕೆಲವರಿಗೆ ಭುಜದಲ್ಲಿ ಇರುತ್ತದೆ. ಹಾಗಾಗಿ ಮನೆಯಲ್ಲಿ ಬೊಜ್ಜು ಇರುವವರು ಈ ಒಂದು ವಿಧಾನವನ್ನು ಅನುಸರಿಸಿದರೆ ಬೊಜ್ಜನ್ನು ಕರಗಿಸಿಕೊಳ್ಳಬಹುದು. ಮೊದಲು ಸಂತೆಯಲ್ಲಿ ಸಿಗುವ ಕೊತ್ತುಂಬರಿಸೊಪ್ಪನ್ನು ತಂದುಕೊಳ್ಳಬೇಕು. ನಂತರ ಅದನ್ನು ಚೆನ್ನಾಗಿ ತೊಳೆದುಕೊಂಡು ಚಿಕ್ಕ ಚಿಕ್ಕದಾಗಿ ಹೆಚ್ಚಿಕೊಳ್ಳಬೇಕು.
ಅದಕ್ಕೆ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಮಾಡಿಕೊಳ್ಳಬೇಕು. ನಂತರದಲ್ಲಿ ಮೂರರಿಂದ ಐದು ಲವಂಗವನ್ನು ತೆಗೆದುಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ಹಾಕಿ ಇವೆಲ್ಲವುಗಳನ್ನು ಕಾಲು ತಾಸುಗಳ ಕಾಲ ಕುದಿಸಬೇಕು. ಅದು ಕುದ್ದಿದ ನಂತರ ಒಂದು ಲೋಟಕ್ಕೆ ಹಾಕಿ ಸೋಸಿಕೊಂಡು ಕುಡಿಯಬೇಕು. ಇದನ್ನು ಮಾಡಿ ಕುಡಿಯುವುದರಿಂದ ಹೊಟ್ಟೆಯಲ್ಲಿ ಇರುವ ಬೊಜ್ಜನ್ನು ಹೋಗಲಾಡಿಸಲು ಸಹಾಯವಾಗುತ್ತದೆ. ಹಾಗೆಯೇ ಬೊಜ್ಜು ಇದ್ದರೆ ಚಟುವಟಿಕೆಯಿಂದ ಕೆಲಸ ಮಾಡುವುದು ಬಹಳ ಕಷ್ಟ.