ಕರಿಬೇವು ಸೊಪ್ಪಿನ ಪರಿಚಯ ಎಲ್ಲರಿಗೂ ಇದ್ದೆ ಇರುತ್ತದೆ. ಇದು ಸಾಮಾನ್ಯವಾಗಿ ಎಲ್ಲರ ಅಡುಗೆಮನೆಯಲ್ಲಿ ಕೂಡಾ ಕಾಣಸಿಗುತ್ತದೆ. ಪ್ರತಿಯೊಬ್ಬರ ಮನೆಯಲ್ಲಿಯೂ ಸಹ ಕರಿಬೇವಿನ ಬಳಕೆ ಒಂದಲ್ಲ ಒಂದು ರೀತಿಯಲ್ಲಿ ಆಗುತ್ತಲೇ ಇರುತ್ತದೆ. ಅಡುಗೆಯಲ್ಲಿ ಯಥೇಚ್ಛವಾಗಿ ಬಳಕೆ ಮಾಡಲಾಗುತ್ತದೆ. ಯಾವುದೇ ಒಗ್ಗರಣೆ ಆಗಿದ್ದರೂ ಸಹ ಅದಕ್ಕೆ ಕರಿಬೇವಿನ ಸೊಪ್ಪು ಇಲ್ಲದೆಯೇ ಪೂರ್ತಿ ಆಗುವುದೇ ಇಲ್ಲ ಇದು ನೀಡುವ ಘಮವೆ ಬೇರೆ…. ನಾವೆಲ್ಲ ಅಂದುಕೊಂಡ ಹಾಗೆ ಕರಿಬೇವು ಬರೀ ಪ್ರತಿನಿತ್ಯದ ನಮ್ಮ ಅಡುಗೆಯಲ್ಲಿ ಮಾತ್ರ ಬಳಕೆ ಆಗುತ್ತದೆ ಎಂದುಕೊಂಡರೆ ಅದು ನಮ್ಮ ತಪ್ಪು. ಕರೀಬೇವು ಅಡುಗೆಗೆ ಮಾತ್ರ ಅಲ್ಲದೆ ಆಯುರ್ವೇದೀಯ ಗುಣಗಳನ್ನು ಸಹ ಹೊಂದಿದ ಔಷಧೀಯ ಪದಾರ್ಥವಾಗಿದೆ. ನಾವು ಪ್ರತೀ ನಿತ್ಯ ಕರಿಬೇವನ್ನು ಸೇವನೆ ಮಾಡುವುದರಿಂದ ಏನೆಲ್ಲಾ ಆರೋಗ್ಯಕರ ಲಾಭಗಳು ಇವೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಕರಿಬೇವಿನ ಸೊಪ್ಪಿನಲ್ಲಿ ಇರುವ ಆಯುರ್ವೇದಿಕ ಗುಣಗಳ ಬಗ್ಗೆ ನಾವು ನೋಡುವುದಾದರೆ , ಮುಖ್ಯವಾಗಿ ಕರಿಬೇವಿನ ಸೊಪ್ಪು ಅರಿಶಿನ ಕಾಮಾಲೆ ಮತ್ತು ಜಾಯಿಂಡೀಸ್ ಇರುವಂತಹ ವ್ಯಕ್ತಿಗಳಿಗೆ ಕರಿಬೇವಿನ ಸೊಪ್ಪು ರಾಮಬಾಣ ಎಂದು ಹೇಳಿದರೆ ತಪ್ಪಾಗಲಾರದು. ಒಂದು ಹಿಡಿ ಕರಿಬೇವಿನ ಸೊಪ್ಪನ್ನು ಸ್ವಚ್ಛ ಮಾಡಿಕೊಂಡು , ಚೆನ್ನಾಗಿ ಅರೆದು ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ನಂತರ ಇದನ್ನು ಒಂದು ಲೋಟದಷ್ಟು ಹಸುವಿನ ಹಾಲನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಚೆನ್ನಾಗಿ ಸೋಸಿಕೊಳ್ಳಬೇಕು. ಈ ರಸವನ್ನು ಅರಿಶಿನ ಕಾಮಾಲೆ ಇರುವ ರೋಗಿಗಳಿಗೆ ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಕುಡಿಯಲು ಕೊಡಬೇಕು. ಈ ರೀತಿಯಾಗಿ ಎಂಟರಿಂದ ಹತ್ತು ದಿನಗಳ ಕಾಲ ಮಾಡಬೇಕು.
ಇದರ ಜೊತೆ ಜೊತೆಗೆ ಅರಿಶಿನ ಕಾಮಾಲೆ ಇರುವ ರೋಗಿಗಳಿಗೆ ಅಚ್ಚು ಕಟ್ಟಿನ ಪಥ್ಯವನ್ನು ಸಹ ಪಾಲಿಸಲು ಹೇಳಬೇಕು. ಯಾವುದೇ ರೀತಿಯ ಜಿಡ್ಡಿನ ಹಾಗೂ ಎಣ್ಣೆಯ ಅಂಶ ಇರುವಂತಹ ಪದಾರ್ಥಗಳನ್ನು ರೋಗಿಗಳು ಸೇವಿಸುವ ಹಾಗೆಯೇ ಇಲ್ಲ. ಹುರುಳಿ ಕಟ್ಟು , ಬೇಳೆ ಕಟ್ಟು ಮತ್ತು ಸಪ್ಪೆಯಾಗಿರುವ ಸಾರನ್ನು ಮಾತ್ರ ಊಟಕ್ಕೆ ಬಳಸಬೇಕು. ಕಾಮಾಲೆ ರೋಗವು ನಿಶ್ಚಿತವಾಗಿ ಗುಣವಾಗಲು ಈ ರೀತಿಯಾಗಿ ಮಾಡಬೇಕು. ಊಟದಲ್ಲಿ ಸ್ವಲ್ಪ ಮಿತಿ ಇರಬೇಕು ಹಾಗೂ ಊಟ ಮಾಡುವಾಗ ಯಾವುದೇ ಕಾರಣಕ್ಕೂ ಕಾಮಾಲೆ ರೋಗ ಕಡಿಮೆ ಆಗುವವರೆಗೆ ಪಥ್ಯವನ್ನು ನಿಲ್ಲಿಸಲೇ ಬಾರದು. ಅಡುಗೆಯಲ್ಲಿ ಬೇಕಿದ್ದರೆ ಕಾಳು ಮೆಣಸಿನ ಬಳಕೆ ಮಾಡಿಕೊಳ್ಳಬಹುದು. ಉಪ್ಪನ್ನು ಕೂಡಾ ರುಚಿಗೆ ತಕ್ಕಷ್ಟು ಬಳಸಬಹುದು ಆದರೆ ಹುಣಸೆ ಹಣ್ಣಿನ ಬದಲು ನಿಂಬೆ ಹಣ್ಣಿನ ರಸವನ್ನು ಬಳಕೆ ಮಾಡುವುದು ಉತ್ತಮ. ಕಾಮಾಲೆ ರೋಗ ಇರುವವರಿಗೆ ಅದು ಸಂಪೂರ್ಣವಾಗಿ ವಾಸಿ ಆಗುವವರೆಗೂ ಪಥ್ಯದಲ್ಲಿ ಇರುವುದು ಅವಶ್ಯಕ.
ನಾವು ಬರೀ ಕರಿಬೇವಿನ ಸೊಪ್ಪು ತಾನೇ!? ಅಡುಗೆಗೆ ಒಗ್ಗರಣೆಗೆ ಮಾತ್ರ ಬಳಸುತ್ತೇವೆ ಎಂದು ಹೇಳುವ ಕರಿಬೇವಿನ ಸೊಪ್ಪಿನಲ್ಲಿ ಕೂಡಾ ಇಷ್ಟು ಒಳ್ಳೆಯ ಔಷಧೀಯ ಗುಣಗಳನ್ನು ಇದು ತನ್ನಲ್ಲಿ ಅಡಕವಾಗಿಸಿಕೊಂಡಿದೆ. ನಿರ್ಲಕ್ಷ್ಯ ಮಾಡದೆ ಕರಿಬೇವಿನ ಈ ಪ್ರಯೋಜನವನ್ನು ಪಡೆದುಕೊಳ್ಳಿ.