Yashas Surya: ಸದಾ ನಟ ದರ್ಶನ್ ಜೊತೆ ಕಾಣಿಸಿಕೊಳ್ಳುವ ನಟ ಯಶಸ್ ಸೂರ್ಯ ಅವರ ಮದುವೆಗೆ ಯಾರೆಲ್ಲ ಬಂದಿದ್ರು ನೋಡಿ

Yashas Surya marriage about updates: ಸ್ನೇಹಿತರೆ, 12 ವರ್ಷಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ಯಶಸ್ವಿ ನಟನೆಯ ಮೂಲಕ ಹಲವಾರು ಸಿನಿಮಾಗಳ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತ ನಮ್ಮೆಲ್ಲರನ್ನು ರಂಜಿಸುತ್ತಿದ್ದಂತಹ ಯಶಸ್ ಸೂರ್ಯಾ(Yashas Surya) ಆಗಸ್ಟ್ 12, 2021 ರಂದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಗೆಳೆಯರೇ ಕೋವಿಡ್ ನಿಯಮಗಳನ್ನು ಪಾಲನೆ ಮಾಡಿ, ಬಹಳನೇ ಸರಳವಾಗಿ ಬೆಂಗಳೂರಿನ ಬನಶಂಕರಿಯಲ್ಲಿರುವಂತಹ ಶ್ರೀ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಗುರುಹಿರಿಯರ ಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸದ್ಯ ಈ ದಂಪತಿಗಳ ಮದುವೆ ವಾರ್ಷಿಕೋತ್ಸವದ ಪ್ರಯುಕ್ತ ಸೋಶಿಯಲ್ ಮೀಡಿಯಾದಲ್ಲಿ ಯಶಸ್ ಸೂರ್ಯಾ(Yashas Surya) ಮತ್ತು ಅಂಬಿಕಾ (Ambika) ಅವರ ಫೋಟೋಗಳು ಭಾರಿ ವೈರಲ್ ಆಗುತ್ತಿದ್ದು, ಇವರಿಬ್ಬರ ಮದುವೆಗೆ ಸಾಕ್ಷಿಯಾದ ಕನ್ನಡ ಸಿನಿಮಾ ರಂಗದ ನೆನಪಿರಲಿ ಪ್ರೇಮ್ ಮತ್ತು ಪತ್ನಿ ಜ್ಯೋತಿ ರೆಬಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಇನ್ನಿತರ ಬಂಧು ಮಿತ್ರರು ಮದುವೆಗೆ ಬಂದು ನವ ವಧು ವರರನ್ನು ಅರಸಿ ಆಶೀರ್ವದಿಸಿದ್ದಾರೆ.

ಮೊದಲೇ ನಿಗದಿಯಾಗಿದ್ದ ದಿನಾಂಕದಲ್ಲಿ ಕರೋನ ಇದ್ದರು ಸಹ ಕೆಲ ನಿಯಮಗಳನ್ನು ಪಾಲನೆ ಮಾಡಿ ಯಶಸ್ ಸೂರ್ಯ ತಾವು ಪ್ರೀತಿಸಿದಂತಹ ಹುಡುಗಿಯೊಂದಿಗೆ ಹಸಿಮನೆ ಏರಿದರು. ಸದ್ಯ ಈ ದಂಪತಿಗಳಿಗೆ ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮ, ಸ್ಯಾಂಡಲ್ವುಡ್ ಸಿನಿ ತಾರೆಯರು ಹಾಗೂ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳ ಮೂಲಕ ಶುಭಾಶಯಗಳು ಮಹಾಪೂರವನ್ನೇ ಹರಿಸುತ್ತಿದ್ದು.

ಈ ಫೋಟೋ ಸದ್ಯ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ನಂತಹ ಜಾಲಗಳಲ್ಲಿ ಬಹು ದೊಡ್ಡ ಮಟ್ಟದ ವೈರಲ್ ಆಗುತ್ತಿದೆ. ಪರಮ ಶಿವ (Parama Shiva) ಎಂಬ ಸಿನಿಮಾದ ಮೂಲಕ ತಮ್ಮ ನಟನ ಕರಿಯರನ್ನು ಪ್ರಾರಂಭ ಮಾಡಿದಂತಹ ಯಶಸ್ ಸೂರ್ಯ ಆನಂತರ ಸೈಕೋ ಶಂಕ್ರ, ರಾಮಧಾನ್ಯ, ಜಿಲೇಬಿ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರುಕ್ಷೇತ್ರ (Kurukshetra) ಸಿನಿಮಾದಲ್ಲಿ ಸಹದೇವನ(Sahadeva) ಪಾತ್ರ ನಿರ್ವಹಿಸುವ ಮೂಲಕ ಜನಮನ್ನಣೆ ಪಡೆದಿದ್ದರು.

ನಮ್ಮ ಚಂದನವನದಲ್ಲಿ ನಾಯಕನಟನಾಗಿ, ಪೋಷಕ ನಟನಾಗಿ ಬಹುದೊಡ್ಡ ಮಟ್ಟದ ಹೆಸರನ್ನು ಮಾಡಿರುವ ಈ ನಟನಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೊಳ್ಳೆ ಪಾತ್ರಗಳ ಅವಕಾಶ ಹರಿಸಿ ಬರಲಿದೆಯ? ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ Niveditha Gowda: ಬಾರ್ಬಿ ಡಾಲ್ ನಿವೇದಿತಾ ಗೌಡ ಮತ್ತು ರಾಪರ್ ಚಂದನ್ ಶೆಟ್ಟಿ ಅವರ ಮದುವೆಯ ಅಪರೂಪದ ಫೋಟೋಸ್! ಇಲ್ಲಿವೆ

Leave a Comment