Yash ಬಾಲಿವುಡ್ ನವರಿಂದ ನಿರ್ಮಾಣಗೊಂಡಿರುವಂತಹ ಆದಿಪುರುಷ್(Adipurush) ಸಿನಿಮಾ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಪ್ರೇಕ್ಷಕರಿಂದ ಯಾವ ರೀತಿ ಛೀಮಾರಿಗೆ ಒಳಗಾಗುತ್ತಿದೆ ಎಂಬುದನ್ನು ನೀವೇ ಕಣ್ಣಾರೆ ನೋಡುತ್ತಿದ್ದೀರಿ. ಯಶ್ ಅವರಿಗೂ ಕೂಡ ತಮ್ಮ ಮುಂದಿನ ಸಿನಿಮಾಗಾಗಿ ಬಾಲಿವುಡ್ ನಿಂದ ಸಾಕಷ್ಟು ಸಿನಿಮಾಗಳು ಆಫರ್ ಬರುತ್ತಿದೆ.
ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರ ಮುಂದಿನ ಸಿನಿಮಾದ ಅಪ್ಡೇಟ್ ಗಾಗಿ ಕಾಯುತ್ತಿರುವ ಅಂತಹ ಅಭಿಮಾನಿಗಳಿಗೆ ಕೂಡ ಈ ಸುದ್ದಿ ತಿಳಿದು ಬಂದಿದ್ದು ಯಶ್ ಅವರಿಗೆ ಬಾಲಿವುಡ್ ನಲ್ಲಿ ನಡೆಯುತ್ತಿರುವಂತಹ ರಾಮಾಯಣ ಸಿನಿಮಾ ದಲ್ಲಿ ರಾವಣನ ಪಾತ್ರವನ್ನು ಮಾಡಲು ಆಹ್ವಾನಿಸಲಾಗಿತ್ತು.
ಆದರೆ ರಾಕಿಂಗ್ ಸ್ಟಾರ್ ಯಶ್(Yash) ರವರು ನೇರ ನೇರವಾಗಿ ಅಭಿಮಾನಿಗಳ ಸೆಂಟಿಮೆಂಟ್ಗೆ ಇದರಿಂದ ಹಾನಿಯಾಗುತ್ತದೆ ಇದೇ ಕಾರಣಕ್ಕಾಗಿ ನಾನು ಈ ಸಿನಿಮಾದಲ್ಲಿ ನಟಿಸುವುದಿಲ್ಲ ಎಂಬುದಾಗಿ ತಿರಸ್ಕರಿಸಿದ್ದರು ಎಂಬುದಾಗಿ ತಿಳಿದು ಬಂದಿದೆ. ಇದನ್ನು ಕೇಳಿ ಈಗ ಯಶ್ ಅವರ ಅಭಿಮಾನಿಗಳು ಮಾತ್ರ ಸಖತ್ ಖುಷಿಯಲ್ಲಿದ್ದಾರೆ.
ಆದಿಪುರುಷ್ ಸಿನಿಮಾದ ನಂತರ ಪ್ರತಿಯೊಬ್ಬರು ಕೂಡ ರಾಕಿಂಗ್ ಸ್ಟಾರ್ ಯಶ್ ರವರು ಬಾಲಿವುಡ್ ನಿರ್ಮಾಣ ಮಾಡುತ್ತಿರುವಂತಹ ಮತ್ತೊಂದು ರಾಮಾಯಣದ ಸಿನಿಮಾವನ್ನು ತಿರಸ್ಕರಿಸಿರುವುದಕ್ಕೆ ನಾವು ಕೃತಜ್ಞರಾಗಿದ್ದೇವೆ ಎಂಬುದಾಗಿ ಧನ್ಯವಾದಗಳು ತಿಳಿಸಿದ್ದಾರೆ.