Yash Radhika Pandith: ಅಭಿಮಾನಿಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ಯಶ್ ರಾಧಿಕಾ ಪಂಡಿತ್!

Yash Radhika Pandith: ಸ್ನೇಹಿತರೆ, ಕಿರುತೆರೆ ಧಾರವಾಹಿಯ ಮೂಲಕ ಒಟ್ಟಿಗೆ ತಮ್ಮ ಬಣ್ಣದ ಬದುಕಿನ ಪಯಣವನ್ನು ಪ್ರಾರಂಭಿಸಿದಂತಹ ರಾಕಿಂಗ್ ಸ್ಟಾರ್ ಯಶ್(Yash) ಹಾಗೂ ಸ್ಯಾಂಡಲ್ವುಡ್ನ ಪ್ರಿನ್ಸೆಸ್ ರಾಧಿಕಾ ಪಂಡಿತ್(Radhika Pandit) ಇಂದು ಬಹು ದೊಡ್ಡ ಮಟ್ಟದಲ್ಲಿ ಹೆಸರನ್ನು ಸಂಪಾದಿಸಿ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ನಾಯಕ ನಾಯಕಿಯಾಗಿ ಒಟ್ಟಿಗೆ ತಮ್ಮ ಸಿನಿ ಜರ್ನಿಯನ್ನು ಪ್ರಾರಂಭ ಮಾಡಿದ ಲವ್ ಬರ್ಡ್ಸ್ಗಳು ನಿಜ ಜೀವನದಲ್ಲೂ ಒಂದಾಗಿ ಇರಬೇಕೆಂಬ ನಿರ್ಧಾರ ಮಾಡಿ ಮನೆಯವರೆಲ್ಲರ ಒಪ್ಪಿಗೆ ಪಡೆದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯ ಐರ ಮತ್ತು ಯಥರ್ವ ಎಂಬ ಇಬ್ಬರು ಮುದ್ದಾದ ಮಕ್ಕಳೊಂದಿಗೆ ಸುಖ ಸಂಸಾರಿಕ ಜೀವನ ನಡೆಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ತಮ್ಮ ಸಿನಿಮಾ ಕೆಲಸಗಳಲ್ಲಿ
ಬಿಜಿಯಾದರೆ,

ರಾಧಿಕಾ ಪಂಡಿತ್ ಅವರು ತಮ್ಮ ಮಕ್ಕಳ ಲಾಲನೆ ಪೋಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹೌದು ಗೆಳೆಯರೇ ಮದುವೆಯಾದ ನಂತರ ಆದಿಲಕ್ಷ್ಮಿ ಪುರಾಣ (Adhi Lakshmi Purana)ಎಂಬ ಸಿನಿಮಾದಲ್ಲಿ ಅನುಪ್ ಭಂಡಾರಿ ಅವರೊಂದಿಗೆ ತೆರೆ ಹಂಚಿಕೊಂಡರು. ಅದಾದ ಬಳಿಕ ನಟನೆಯತ್ತ ಅಷ್ಟಾಗಿ ಆಸಕ್ತಿ ತೊರದೆ ತಮ್ಮ ವೈಯಕ್ತಿಕ ಬದುಕಿನತ್ತ ರಾಧಿಕಾ ಪಂಡಿತ್ ಗಮನ ಹರಿಸುತ್ತಿದ್ದಾರೆ.

ಇನ್ನೂ ರಾಕಿಂಗ್ ಸ್ಟಾರ್ ಯಶ್ ಕೂಡ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ತಯಾರಾದ ಕೆಜಿಎಫ್ ಚಾಪ್ಟರ್ ಟು(KGF Chapter 2) ಸಿನಿಮಾ ಮುಗಿದ ನಂತರ ಮುಂದಿನ ಚಿತ್ರದ ಶೂಟಿಂಗ್ ಕೆಲಸಗಳಲ್ಲಿ ತೊಡಗಿಕೊಂಡಿದ್ದು, ಅಭಿಮಾನಿಗಳಿಗೆ ಸಿನಿಮಾದ ಹೆಸರಾಗಲಿ ಅಥವಾ ಯಾರೊಂದಿಗೆ ಯಾವ ಭಾಷೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಎಲ್ಲಿಯೂ ರಿವಿಲ್ ಮಾಡಿಲ್ಲ. ಹಲವಾರು ತಿಂಗಳಿನಿಂದ ತನ್ನ ನೆಚ್ಚಿನ ನಟನ ಮುಂದಿನ ಸಿನಿಮಾದ ಅಪ್ಡೇಟ್ ದೊರಕಲಿದ್ಯಾ ಎಂಬುದನ್ನು ಅಭಿಮಾನಿಗಳು ಇಂದಿಗೂ ಎದುರು ನೋಡುತ್ತಿದ್ದಾರೆ.

ಹೀಗಿರುವಾಗ ಹೆಂಡತಿಯೊಂದಿಗೆ ಔಟಿಂಗ್ ಹೋಗಿದ್ದಂತಹ ರಾಕಿಂಗ್ ಸ್ಟಾರ್ ಯಶ್(Yash) ಅವರನ್ನು ಭೇಟಿ ಮಾಡಿದ ಅಭಿಮಾನಿಯೊಬ್ಬರು ತಮ್ಮ ಕೈಯಾರೆ ಮಾಡಿರುವಂತಹ ದೇವರ ಫೋಟೋ ಒಂದನ್ನು ಹುಡುಗರಿಯಾಗಿ ನೀಡಿದ್ದಾರೆ. ಅದನ್ನು ಹಿಡಿದು ಅಭಿಮಾನಿ ಒಟ್ಟಿಗೆ ಯಶ್ ಹಾಗೂ ರಾಧಿಕಾ ಪಂಡಿತ್ (Radhika Pandit) ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಾ ನೆಟ್ಟಿಗರ ಹೃದಯ ಗೆದ್ದಿದೆ. ಇದನ್ನೂ ಓದಿ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾಗೆ ತಂದೆ ಇಟ್ಟಿದ್ದ ಅಡ್ಡ ಹೆಸರೇನು ಗೊತ್ತಾ? ತಂದೆಯ ಮುದ್ದಿನ ಮಗಳು ಸ್ಪಂದನ ಬಾಲ್ಯದ ದಿನಗಳನ್ನು ನೆನೆದು ಕಣ್ಣೀರಿಟ್ಟ ಸ್ನೇಹಿತೆ

Leave a Comment